Saturday, 14th December 2024

ಮೇ 6 ಮತ್ತು 7ರಂದು ಉಸ್ಮಾನಿಯಾ ವಿವಿಗೆ ರಾಹುಲ್ ಭೇಟಿ: ವಿವಾದ

ಹೈದರಾಬಾದ್: ಉಸ್ಮಾನಿಯಾ ವಿವಿಗೆ ಕಾಂಗ್ರೆಸ್ ನಾಯಕ ರಾಹುಲ್ ಮೇ 6 ಮತ್ತು 7ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ.

ರಾಹುಲ್ ಭೇಟಿಗೆ ಅನುಮತಿ ಪಡೆಯಲು ವಿದ್ಯಾರ್ಥಿಗಳು ಮನವಿಯನ್ನು ಸಲ್ಲಿಸುವುದ ರೊಂದಿಗೆ ವಿವಾದವು ಈಗ ನ್ಯಾಯಾಲಯದ ಮೆಟ್ಟಲನ್ನೇರಿದೆ.

ರಾಹುಲ್ ಮೇ 7ರಂದು ಉಸ್ಮಾನಿಯಾ ವಿವಿ ಕ್ಯಾಂಪಸ್‌ನಲ್ಲಿ ಭೇಟಿ ನೀಡುವ ನಿರೀಕ್ಷೆ ಯಿದೆ. ಅವರು ವಿದ್ಯಾರ್ಥಿಗಳೊಂದಿಗೆ ‘ರಾಜಕೀ ಯೇತರ ಸಂವಾದ ‘ವನ್ನು ನಡೆಸ ಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಕ್ಯಾಂಪಸ್‌ನಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ, ಹೀಗಾಗಿ ರಾಹುಲ್ ಭೇಟಿಗೆ ಅನುಮತಿ ನೀಡ ಲಾಗುವುದಿಲ್ಲ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

2017 ಜೂನ್‌ನಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಕ್ಯಾಂಪಸ್‌ನಲ್ಲಿ ರಾಜಕೀಯ ಸೇರಿದಂತೆ ಯಾವುದೇ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಅವಕಾಶ ನೀಡದಿರಲು ನಿರ್ಣಯವೊಂದನ್ನು ವಿವಿಯು ಅಂಗೀಕರಿಸಿದೆ ಎಂದು ಅಧಿಕಾರಿಗಳು ಬೆಟ್ಟು ಮಾಡಿದ್ದಾರೆ.

ರಾಹುಲ್ ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಬರುವುದಾದರೆ ಅದು ರಾಜಕೀಯವಲ್ಲ,ಬೌದ್ಧಿಕ ಚಟುವಟಿಕೆಯಾಗುತ್ತದೆ ಎಂದು ಕಾನೂನು ಪ್ರಾಧ್ಯಾಪಕ ಜಿ.ವಿನೋದ ಕುಮಾರ ಹೇಳಿದರು. ರಾಹುಲ್ ಭೇಟಿಗೆ ಅನುಮತಿ ನಿರಾಕರಣೆಯ ವಿರುದ್ಧ ಎನ್‌ಎಸ್ಯುಐ ಕಾರ್ಯಕರ್ತರು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದು,ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಟಿಆರ್‌ಎಸ್‌ನ ವಿದ್ಯಾರ್ಥಿ ಘಟಕ ಮತ್ತು ಎಬಿವಿಪಿ ಕೂಡ ಪ್ರತಿಭಟನೆಗಳನ್ನು ನಡೆಸಿದ್ದವು.