Thursday, 19th September 2024

ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್’ಗೆ ಸೋಲು

ಪಣಜಿ: ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಸೋಲು ಕಂಡಿದ್ದಾರೆ.

ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉತ್ಪಲ್ ಪರಿಕ್ಕರ್ ಅವರು ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಮಾನ್ಸೆರೇಟ್ ವಿರುದ್ಧ 713 ಮತಗಳ ಅಂತರದಲ್ಲಿ ಸೋಲು ಕಂಡಿ ದ್ದಾರೆ.

ಉತ್ಪವ್ ಅವರು ಒಟ್ಟು ಮತಗಳಲ್ಲಿ ಶೇ.34.85ರಷ್ಟು ಮತಗಳನ್ನು ಪಡೆದಿದ್ದಾರೆ. ಭಾರ ತೀಯ ಚುನಾವಣಾ ಆಯೋಗದ ಪ್ರಕಾರ, ಮಾನ್ಸೆರಾತ್ 6,787 ಮತಗಳನ್ನು ಪಡೆದಿದ್ದರೆ, ಉತ್ಪಲ್ ಪರಿಕ್ಕರ್ 6,071 ಮತಗಳನ್ನು ಪಡೆದು ಕೇವಲ 716 ಮತಗಳಿಂದ ಸೋಲಿಸಿದ್ದಾರೆ.

ಗೋವಾ ಚುನಾವಣೆ ಘೋಷಣೆಯಾದ ದಿನದಿಂದಲೂ ಉತ್ಪವ್ ಪರಿಕ್ಕರ್ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಮಾನ್ಸೆರೇಟ್ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಬಂಡಾಯವೆದ್ದಿದ್ದ ಉತ್ಪಲ್ ಪರಿಕ್ಕರ್ ಸ್ವತಂತ್ರವಾಗಿ ಸ್ಪರ್ಧಿಸಿ ದ್ದರು. ಆ ಮೂಲಕ ಗೋವಾ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದರು.

ಆದರೆ ಕೊನೆಗೂ ಪಣಜಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.