Saturday, 23rd November 2024

ನಾಳೆ ಉತ್ತರಾಖಂಡ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ

ಉತ್ತರಾಖಂಡ: ಪುಷ್ಕರ್ ಧಾಮಿ ಅವರು ಉತ್ತರಾಖಂಡದ ಮುಂದಿನ ಮುಖ್ಯಮಂತ್ರಿಯಾಗಿ ಬುಧವಾರ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸ ಲಿದ್ದಾರೆ. ಡೆಹ್ರಾಡೂನ್‌ನಲ್ಲಿ ಅವರ ಸಚಿವ ಸಂಪುಟವೂ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಬಿಜೆಪಿ ಜಯಭೇರಿ ಬಾರಿಸಿದ ನಾಲ್ಕು ರಾಜ್ಯಗಳಲ್ಲಿ ಗುಡ್ಡಗಾಡು ಪ್ರದೇಶ ಉತ್ತರಾಖಂಡವೂ ಒಂದು. ಗೋವಾ ಮುಖ್ಯಮಂತ್ರಿ ಯಾಗಿ ಪ್ರಮೋದ್ ಸಾವಂತ್ ಮುಂದುವರಿಯಲಿದ್ದು, ಮಣಿಪುರದ ಬಿರೇನ್ ಸಿಂಗ್ ಸೋಮವಾರ ಮತ್ತೊಂದು ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.

‘ಚುನಾವಣೆಗೂ ಮುನ್ನ ನಾವು ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ನಾವು ಪೂರೈಸುತ್ತೇವೆ. ಅವುಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಪ್ರಮುಖವಾಗಿದೆ ಮತ್ತು ನಾವು ಅದನ್ನು ಸಹ ಪೂರೈಸುತ್ತೇವೆ. ‘ಪ್ರಧಾನಿ ಅವರ ದೂರದೃಷ್ಟಿಯ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಬಿಜೆಪಿಗೆ ದೊಡ್ಡ ಗೆಲುವು ನೀಡಿದ್ದಕ್ಕಾಗಿ ನಾನು ಜನರಿಗೆ ಧನ್ಯವಾದ ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರು, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಉತ್ತರಾಖಂಡದ ಪಕ್ಷದ ಕೇಂದ್ರ ವೀಕ್ಷಕರಾಗಿದ್ದ ರಾಜನಾಥ್ ಸಿಂಗ್ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಉತ್ತರಾಖಂಡದ ಅಭಿವೃದ್ಧಿಯ ಬಗ್ಗೆ ಪ್ರಧಾನಿ ನಮಗೆ ತಮ್ಮ ದೃಷ್ಟಿ ಕೋನವನ್ನು ನೀಡಿದ್ದಾರೆ ಮತ್ತು ದಶಕವು ರಾಜ್ಯಕ್ಕೆ ಸೇರಿದೆ ಎಂದು ಹೇಳಿದರು. ನಾವು ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ ಮತ್ತು 2022 ರಲ್ಲಿ ಉತ್ತರಾಖಂಡ್ ತನ್ನ ಅಸ್ತಿತ್ವದ ರಜತ ಮಹೋತ್ಸವವನ್ನು ಆಚರಿಸುವಾಗ ಪ್ರಮುಖ ರಾಜ್ಯವನ್ನಾಗಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.