Sunday, 15th December 2024

ಉತ್ತರಾಖಂಡ್ ಪ್ರತಿಪಕ್ಷದ ನಾಯಕಿ ಹೃದಯಾಘಾತದಿಂದ ಸಾವು

ದೆಹಲಿ: ಉತ್ತರಾಖಂಡ್ ಪ್ರತಿಪಕ್ಷದ ನಾಯಕಿ ಡಾ.ಇಂದಿರಾ ಹೃದಯೇಶ್ ಅವರು ಭಾನುವಾರ ದೆಹಲಿಯಲ್ಲಿರುವ ಉತ್ತರಾಖಂಡ ಭವನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ 80 ವರ್ಷದ ಇಂದಿರಾ ಅವರು ದೆಹಲಿಗೆ ಆಗಮಿಸಿದ್ದರು. ಬೆಳಗ್ಗೆ ಹೃದಯಾಘಾತ ವಾಗಿ ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ತಿಳಿಸಿದ್ದಾರೆ.

1974ರಲ್ಲಿ ಹಲ್ದ್ವಾನಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು. ನಾಲ್ಕು ದಶಕಗಳ ರಾಜಕೀಯ ಅನುಭವವನ್ನು ಇಂದಿರಾ ಹೊಂದಿದ್ದಾರೆ. 2012ರಿಂದ 2017ರವರೆಗೆ ಹಣಕಾಸು ಸಚಿವರಾಗಿ ಇಂದಿರಾ ಕಾರ್ಯನಿರ್ವಹಿಸಿದ್ದರು.

ಇಂದಿರಾ ಅವರು ನಿಧನಕ್ಕೆ ಹಿರಿಯ ನಾಯಕರು, ಗಣ್ಯರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ