Monday, 16th September 2024

‘ದಿ ಕೇರಳ ಸ್ಟೋರಿ’ಗೆ ಉತ್ತರಾಖಂಡ್’ದಲ್ಲಿ ತೆರಿಗೆ ವಿನಾಯಿತಿ

ಡೆಹ್ರಾಡೂನ್: ವಿವಾದಾತ್ಮಕ ‘ ದಿ ಕೇರಳ ಸ್ಟೋರಿ’ಗೆ ಉತ್ತರಾಖಂಡ್ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಇರಲಿದೆ ಎಂದು ಉತ್ತರಾ ಖಂಡ್ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಸಪ್ತಲ್ ಮಹಾರಾಜ್ ಹೇಳಿದ್ದಾರೆ.
ಅದಾ ಶರ್ಮಾ ನಟಿಸಿರುವ ಈ ಚಿತ್ರವು ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾ ಯಿತು.
ಕೇರಳದಿಂದ ಕಣ್ಮರೆಯಾದ ಸಾವಿರಾರು ಮಹಿಳೆಯ ಹಿಂದಿನ ಘಟನೆಗಳನ್ನು ಈ ಚಿತ್ರ ಹೇಳುತ್ತದೆ. ಬಲವಂತದಿಂದ ಹೇಗೆ ಇಸ್ಲಾಂಗೆ ಮಹಿಳೆಯನ್ನು ಮತಾಂತರಿಸಲಾಯಿತು ಮತ್ತು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗೆ ಹೇಗೆ ಸೇರಿದರು ಎಂಬುದರ ಸುತ್ತ ಕಥೆ ಸಾಗುತ್ತದೆ.
ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಬಗ್ಗೆ ಉತ್ತರಾಖಂಡ ಸರ್ಕಾರ ಇನ್ನೂ ಔಪಚಾರಿಕ ಪ್ರಕಟಣೆ ಮಾಡಿಲ್ಲವಾದರೂ ಶೀಘ್ರದಲ್ಲೇ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಸಿಗಲಿದೆ ಎಂದು ಮಹಾ ರಾಜ್ ತಿಳಿಸಿದರು. ಕೇರಳದ ಸತ್ಯ ಕಥೆ ಬಿಂಬಿಸುವ ಈ ಚಿತ್ರವನ್ನು ಪ್ರತಿಯೊಬ್ಬರು ನೋಡಬೇಕು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಹೇಳಿದ್ದರು.
ಪಶ್ಚಿಮ ಬಂಗಾಳ ಸರ್ಕಾರ ಚಿತ್ರಮಂದಿರಗಳಲ್ಲಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನವನ್ನು ನಿಷೇಧಿಸಿದೆ ಮತ್ತು ತಮಿಳುನಾಡಿನ ಮಲ್ಟಿಪ್ಲೆಕ್ಸ್ಗಳು ಭಾನುವಾರದಿಂದ ಪ್ರದರ್ಶನಗಳನ್ನು ರದ್ದುಗೊಳಿಸಿವೆ.