ಹ್ರಾಡೂನ್: ಉತ್ತರಾಖಂಡದ ಕಾಡ್ಗಿಚ್ಚಿಗೆ ಐವರು ಪ್ರಾಣ ಕಳೆದುಕೊಂಡಿದ್ದು, 1,300 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅರಣ್ಯ ಪಡೆ ಮುಖ್ಯಸ್ಥ ಧನಂಜಯ್ ಮೋಹನ್ ತಿಳಿಸಿದ್ದಾರೆ.
ಬೆಂಕಿ ನಿಯಂತ್ರಣದಲ್ಲಿದೆ ಎಂದು ಅವರು ದೃಢಪಡಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಇರುವ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಿದ್ದಾರೆ. ಕಾಡ್ಗಿಚ್ಚಿಗೆ ಸಂಬಂಧಿಸಿ ಈವರೆಗೆ 388 ಪ್ರಕರಣಗಳು ದಾಖಲಾಗಿದ್ದು, 60 ಪ್ರಕರಣಗಳನ್ನು ಹೆಸರಿಸಲಾಗಿದೆ. 5 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಅವರಲ್ಲಿ 4 ಜನರು ನೇಪಾಳ ಮೂಲದವರು ಮತ್ತು ಅಲ್ಮೋರಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬರು ಪೌರಿಯಲ್ಲಿ ಪ್ರಾಣ ಕಳೆದುಕೊಂಡ ವೃದ್ಧ ಮಹಿಳೆ” ಎಂದು ಮೋಹನ್ ತಿಳಿಸಿದ್ದಾರೆ.
ಗರ್ವಾಲ್ ವಿಭಾಗದಲ್ಲಿ ಇನ್ನೂ ಕಾಡಿನಲ್ಲಿ ಬೆಂಕಿ ಉರಿಯುತ್ತಿದೆ ಮತ್ತು ಅಲ್ಮೋರಾದಲ್ಲಿಯೂ ಕೆಲವು ಭಾಗಗಳು ಬಾಧಿತವಾಗಿವೆ ಎಂದು ಹೇಳಿದರು.
“ಕಾಡಿನ ಬೆಂಕಿಗೆ ಸಂಬಂಧಿಸಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ, ಇದನ್ನು ಗಮನದಲ್ಲಿಟ್ಟುಕೊಂಡು, 17 ಸಿಬ್ಬಂದಿ ವಿರುದ್ಧ ಪ್ರಮುಖ ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು 10 ಜನರನ್ನು ಅಮಾನತುಗೊಳಿಸಲಾಗಿದೆ. ಈವರೆಗೆ 1300 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ ಯಾಗಿದೆ ” ಎಂದು ಮೋಹನ್ ತಿಳಿಸಿದ್ದಾರೆ.