Thursday, 12th December 2024

ಜಬಲ್ಪುರದಲ್ಲಿ ಕಾಂಗ್ರೆಸ್ ಕಚೇರಿ ಧ್ವಂಸ

ಜಬಲ್ಪುರ(ಉತ್ತರ ಪ್ರದೇಶ) : ಕರ್ನಾಟಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಮಾಡುವು ದಾಗಿ ಭರವಸೆ ಘೋಷಣೆ ಬೆನ್ನಲ್ಲೇ, ವಿವಾದ ತಾರಕಕ್ಕೇರಿದೆ.

ಕರ್ನಾಟಕದ ವಿವಾದ ಈಗ ಉತ್ತರ ಪ್ರದೇಶದ ಜಬಲ್ಪುರದಲ್ಲೂ ಹೊತ್ತಿ ಉರಿಯುವಂತೆ ಮಾಡಿದೆ.

ಜಬಲ್ಬುರದಲ್ಲಿ ಕಾಂಗ್ರೆಸ್ ಕಚೇರಿಯ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ, ಕಚೇರಿಯಲ್ಲಿನ ಪೀಠೋಪಕರಣ ವನ್ನು ಧ್ವಂಸ ಮಾಡಿ, ಆಕ್ರೋಶ ಹೊರ ಹಾಕಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಬಜರಂಗದಳ ಬ್ಯಾನ್ ನಿಷೇಧ ವಿವಾದ ಈಗ ವಿವಿಧ ರಾಜ್ಯಗಳಲ್ಲಿನ ಬಜರಂಗದಳದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಜಬಲ್ಪುರ ದಲ್ಲಿ ಬೀದಿಗಿಳಿದಿರುವಂತ ಬಜರಂಗದಳದ ಕಾರ್ಯಕರ್ತರು, ಕಾಂಗ್ರೆಸ್ ಕಚೇರಿಯ ಮೇಲೆ ದಾಳಿ ನಡೆಸಿ, ತಮ್ಮ ಆಕ್ರೋಶವನ್ನು ಹರೊ ಹಾಕಿದ್ದಾರೆ.

ಜಬಲ್ಬುರದಲ್ಲಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ, ಗೇಟ್ ಬೀಗ ಒಡೆದು ಒಳ ನುಗ್ಗಿರುವ ಬಜರಂಗದಳದ ಕಾರ್ಯಕರ್ತರು, ಕಚೇರಿಯಲ್ಲಿನ ಪಿಠೋಪಕರಣ, ಕಿಟಕಿ, ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದಾರೆ.