Thursday, 19th September 2024

ಸ್ವಾವಲಂಬಿಗಳನ್ನಾಗಿ ಮಾಡುವ ‘ಆತ್ಮನಿರ್ಭರ’ದತ್ತ ದೈತ್ಯ ಹೆಜ್ಜೆ: ವಿ.ಆರ್.ಚೌಧರಿ

ನವದೆಹಲಿ: ವಾಯುಪಡೆಯ ಶಕ್ತಿ, ಸಾಮ‌ರ್ಥ್ಯವನ್ನು ಸೂಕ್ತ ಸಮಯಕ್ಕೆ ಸದ್ಭಳಕೆ ಮಾಡುವ ಮೂಲಕ ದೇಶದ ಸುರಕ್ಷತೆ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.

ದೇಶದ ಸುರಕ್ಷತೆ ತಮ್ಮ ಮೊದಲ ಆದ್ಯತೆಯಾದರೆ, ಭವಿಷ್ಯದಲ್ಲಿ ಯುದ್ಧಗಳಲ್ಲಿ ಸವಾಲುಗಳನ್ನು ಎದುರಿಸಲು ನಮ್ಮ ಸಿಬ್ಬಂದಿಗೆ ತರಬೇತಿ, ಉತ್ತೇಜನ ಮತ್ತು ಎಲ್ಲಾ ತಂತ್ರಜ್ಞಾನ, ಸಾಧನಗಳನ್ನು ಬಳಸುವುದು ಎರಡನೇ ಆದ್ಯತೆಯಾಗಿದೆ ಎಂದಿ ದ್ದಾರೆ.

ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವ ‘ಆತ್ಮನಿರ್ಭರ’ದ ಕಡೆಗೆ ದೈತ್ಯ ಹೆಜ್ಜೆಗಳನ್ನು ಇಡುವುದು ಮುಂದಿನ ಆದ್ಯತೆ ಯಾಗಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಬದೌರಿಯಾ ಅವರು ನಿವೃತ್ತಿಯಾದ ಹಿನ್ನೆಲೆ ಯಲ್ಲಿ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅಧಿಕಾರ ವಹಿಸಿಕೊಂಡಿದ್ದಾರೆ.

ಭವಿಷ್ಯದ ಯುದ್ಧಗಳಿಗೆ ತಯಾರಾಗಲು ನಾವು ಇನ್ನಷ್ಟು ಕಲಿಯುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಗಡಿಗಳಲ್ಲಿ ಪರಿಸ್ಥಿತಿ ಯನ್ನು ನಿರ್ವಹಿಸುವಲ್ಲಿ ಐಎಎಫ್ ಪಾತ್ರದ ಬಗ್ಗೆ ಮತ್ತು ಅದು ಹೇಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ವಿವರಿಸಿ ದರು.

ಸರಿಯಾದ ತರಬೇತಿ, ಈಗಿರುವ ಪರಿಕರಗಳ ಪರಿಶೋಧನೆ ಮತ್ತು ಭವಿಷ್ಯದಲ್ಲಿ ನಾವು ಏನನ್ನು ಪಡೆಯುತ್ತೇವೆ ಅವುಗಳ ಸರಿಯಾದ ಸದ್ಭಳಕೆ ಮತ್ತು ಮಾನವ ಶಕ್ತಿಗಳ ಬಳಕೆಯನ್ನು ಮಾಡಬೇಕಾಗುತ್ತದೆ. ನಾವು 83 ಹಗುರ ಯುದ್ಧ ವಿಮಾನಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಎಎಂಸಿಎ ಮತ್ತು ಎಲ್ ಸಿಎ-ಎಂಕೆ2 ಸೇರ್ಪಡೆ ಹಂತದಲ್ಲಿವೆ ಎಂದು ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.