Wednesday, 9th October 2024

ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ವಿ.ಆರ್.ಚೌಧರಿ ನೇಮಕ

ನವದೆಹಲಿ: ರಕ್ಷಣಾ ಸಚಿವಾಲಯವು ಪ್ರಸ್ತುತ ವಾಯುಪಡೆಯ ವೈಸ್ ಚೀಫ್ ಏರ್ ಮಾರ್ಷಲ್ ವಿಆರ್ ಚೌಧರಿ ಅವರನ್ನು ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಿದೆ.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನ ಹಳೆಯ ವಿದ್ಯಾರ್ಥಿ, ಚೌಧರಿ ಅವರು ತನ್ನ ವೃತ್ತಿಜೀವನದಲ್ಲಿ ಮುಂಚೂಣಿಯ ಫೈಟರ್ ಸ್ಕ್ವಾಡ್ರನ್ ಮತ್ತು ಫೈಟರ್ ಬೇಸ್ ಅನ್ನು ಮುನ್ನಡೆಸಿದ್ದಾರೆ. ಅವರು ಡೆಪ್ಯೂಟಿ ಕಮಾಂಡೆಂಟ್, ಏರ್ ಫೋರ್ಸ್ ಅಕಾಡೆಮಿ, ವಾಯು ಸಿಬ್ಬಂದಿ ಕಾರ್ಯಾಚರಣೆಗಳ ಸಹಾಯಕ ಮುಖ್ಯಸ್ಥರು (ವಾಯು ರಕ್ಷಣಾ) ಮತ್ತು ಸಹಾಯಕ ವಾಯು ಸಿಬ್ಬಂದಿ (ಸಿಬ್ಬಂದಿ ಅಧಿಕಾರಿಗಳು) ಸೇರಿದಂತೆ ಇತರ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಪ್ರಸ್ತುತ ವಾಯುಪಡೆಯ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರು ಸೆಪ್ಟೆಂಬರ್ 30 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಏರ್ ಮಾರ್ಷಲ್ ವಿಆರ್ ಚೌಧರಿ ಅವರನ್ನು ಡಿಸೆಂಬರ್ 28, 1982 ರಂದು ಭಾರತೀಯ ವಾಯು ಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಯಿತು. ಪ್ರಸ್ತುತ ವಾಯುಪಡೆಯ ವೈಸ್ ಚೀಫ್ ಸೇರಿದಂತೆ ವಿವಿಧ ಹಂತಗಳಲ್ಲಿ ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ಸೂಚನಾ ನೇಮಕಾತಿ ವಿಭಾಗಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ವಿಆರ್ ಚೌಧರಿ ಅವರು ಪರಂ ವಿಶಿಷ್ಟ ಸೇವಾ ಪದಕ, ಪರಂ ವಿಶಿಷ್ಟ ಸೇವಾ ಪದಕ ಮತ್ತು ವಾಯು ಪದಕಗಳ ಗೌರವಕ್ಕೆ ಭಾಜನರಾಗಿದ್ದಾರೆ.

ಜುಲೈನಲ್ಲಿ ಅವರು ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಪಶ್ಚಿಮ ಏರ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು. ಆರ್​ಕೆಎಸ್ ಭದೌರಿಯಾ ಅವರು, ಬಿಎಸ್ ಧನೋವಾ ಅವರಿಂದ ಸೆಪ್ಟೆಂಬರ್ 2019 ರಲ್ಲಿ ಏರ್ ಚೀಪ್ ಮಾರ್ಷಲ್ ಆಗಿ ಅಧಿಕಾರ ವಹಿಸಿಕೊಂಡರು.