Thursday, 12th December 2024

ಗಸ್ತು ತಿರುಗುತ್ತಿದ್ದ ವ್ಯಾನಿಗೆ ಕಾರು ಡಿಕ್ಕಿ: ಇಬ್ಬರು ಪೊಲೀಸರ ಸಾವು

ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ವ್ಯಾನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಬ್ಇನ್ಸ್ಪೆಕ್ಟರ್ ಸೇರಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗೊಂಡಿದ್ದಾರೆ.

ಬಗ್ನಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಬರುಂಡಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 16 ರಲ್ಲಿ ದುರ್ಘಟನೆ ಸಂಭವಿಸಿದೆ. ಸಬ್ ಇನ್ಸ್ಪೆಕ್ಟರ್ ಸುಜೋಯ್ ದಾಸ್ (45) ಮತ್ತು ಹೋಮ್ ಗಾರ್ಡ್ ಪಲಾಶ್ ಸಮಂತ (31) ಮೃತಪಟ್ಟವರೆಂದು ತಿಳಿದುಬಂದಿದೆ. ಗಾಯಗೊಂಡ ಮೂವರು ಪೊಲೀಸರನ್ನು ಚಾಲಕ ಅಬು ಬಕರ್ (28) ಮತ್ತು ಗೃಹ ರಕ್ಷಕ ದಳದ ಸುಖದೇಬ್ ಬಿಸ್ವಾಸ್ (25) ಮತ್ತು ಅಲೋಕ್ ಬಾರ್ (26) ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಕೋಲ್ಕತ್ತಾ ಮೂಲದ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಹೌರಾ ನಗರಕ್ಕೆ ಹೋಗುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಪೊಲೀಸರ ಗಸ್ತು ತಿರುಗುವ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದೆದಿದೆ. ಘಟನೆ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಹೌರಾ (ಗ್ರಾಮೀಣ) ಎಸ್ಪಿ ಸ್ವಾತಿ ಭಂಗಾಲಿಯಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.