Sunday, 15th December 2024

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮತ್ತೆ ಜಾನುವಾರು ಡಿಕ್ಕಿ

ಮುಂಬೈ: ಮುಂಬೈ- ಗಾಂಧಿನಗರ ನಡುವೆ ಓಡಾಡುವ ‘ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು’ ಇಂದು ಮತ್ತೆ ಜಾನುವಾರಿಗೆ ಡಿಕ್ಕಿ ಹೊಡೆ ದಿದೆ. ಇದರಿಂದಾಗಿ ಸಂಚಾರದಲ್ಲಿ 20 ನಿಮಿಷ ವ್ಯತ್ಯಯವಾಯಿತು.
ಘಟನೆಯಿಂದಾಗಿ ರೈಲ್ವಿನ ಮುಂಭಾಗದ ಪ್ಯಾನಲ್ ಗೆ ಹಾನಿಯಾಗಿದೆ. ಮೊದಲ ಬೋಗಿಯ ಉಪಕರಣಗಳು ಮುರಿದಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಇದು ಈ ತಿಂಗಳಲ್ಲಿ ಸಂಭವಿಸಿದ ಮೂರನೇ ಪ್ರಕರಣವಾಗಿದೆ. ಅಟಲ್ ರೈಲ್ವೆ ನಿಲ್ದಾಣದ ಬಳಿಕ ಜಾನುವಾರ ಹಳಿ ಮೇಲೆ ಬಂದಾಗ ರೈಲು ಡಿಕ್ಕಿ ಹೊಡೆದಿದೆ.

ಅಕ್ಟೋಬರ್ 6 ರಂದು ಇದೇ ಮಾರ್ಗದಲ್ಲಿ ಈ ರೈಲು ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಮೃತಪಟ್ಟಿದ್ದವು. ಅಕ್ಟೋಬರ್ 7 ರಂದು ಗುಜರಾತ್ ನ ಆನಂದ್ ಬಳಿ ಹಸುವೊಂದಕ್ಕೆ ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದಿತ್ತು.