Thursday, 12th December 2024

ವಂದೇ ಭಾರತ್ ಎಕ್ಸ್‌ ಪ್ರೆಸ್ ಡಿಕ್ಕಿ: ಮಹಿಳೆ ಸೇರಿ ಇಬ್ಬರು ಹೆಣ್ಣುಮಕ್ಕಳ ಸಾವು

ಮೀರತ್: ಜಿಲ್ಲೆಯ ಮಾನವಸಹಿತ ಲೆವೆಲ್ ಕ್ರಾಸಿಂಗ್‌ ನಲ್ಲಿ ಹಳಿ ದಾಟುತ್ತಿದ್ದಾಗ ವಂದೇ ಭಾರತ್ ಎಕ್ಸ್‌ ಪ್ರೆಸ್ ಡಿಕ್ಕಿ ಹೊಡೆದು 40 ವರ್ಷದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಭಾನುವಾರ ಸಂಜೆ ಸಾವನ್ನಪ್ಪಿದ್ದಾರೆ.

ಕಾಸಂಪುರ್ ಮಾನವಸಹಿತ ಲೆವೆಲ್ ಕ್ರಾಸಿಂಗ್‌ನ ಗೇಟ್‌ಗಳನ್ನು ಮುಚ್ಚಿದಾಗ ಅಪಘಾತ ಸಂಭವಿಸಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಪಿಯೂಷ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕಂಕರಖೇರಾ ನಿವಾಸಿ ನರೇಶ್ ಅವರು ‘ರೆಹ್ರಾ'(ಕೈಯಿಂದ ಚಾಲಿತ ಬಂಡಿ) ಎಳೆಯುತ್ತಿದ್ದರೆ, ‘ರೆಹ್ರಾ’ ನ ಹಿಂಭಾಗದಲ್ಲಿ ಅವರ ಪತ್ನಿ ಮೋನಾ(40) ಮತ್ತು ಅವರ ಪುತ್ರಿಯರಾದ ಮನೀಶಾ(14) ಮತ್ತು ಚಾರು(7) ಕುಳಿತಿದ್ದರು. ಕಾಸಂಪುರದ ಮಾನವಸಹಿತ ರೈಲ್ವೇ ಕ್ರಾಸಿಂಗ್‌ನಲ್ಲಿ ನರೇಶ್ ರೈಲ್ವೇ ಗೇಟ್ ಕೆಳಗೆ ಚಲಿಸಿ ರೈಲು ಹಳಿ ದಾಟುತ್ತಿದ್ದಾಗ ಅರೆ ವೇಗದ ರೈಲು ಗಾಡಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಮೋನಾ ಹಾಗೂ ಆಕೆಯ ಇಬ್ಬರು ಪುತ್ರಿಯರ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.