Thursday, 12th December 2024

ಏ.14 ರಂದು ಈಶಾನ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಚಾಲನೆ

ವದೆಹಲಿ: ಏ.14 ರಂದು ಈಶಾನ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.

ಈಶಾನ್ಯ ಫ್ರಾಂಟಿಯರ್ ರೈಲ್ವೇ (NFR) ಈಗಾಗಲೇ ಈ ಪ್ರದೇಶದಲ್ಲಿ ಭಾರತದ ಅತ್ಯಂತ ವೇಗದ ರೈಲಿನ ಭವ್ಯವಾದ ಉಡಾವಣೆಗಾಗಿ ಪೂರ್ವ ಸಿದ್ಧತಾ ಕಾರ್ಯವನ್ನು ಪ್ರಾರಂಭಿಸಿದೆ.

ಈಶಾನ್ಯ ಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮೋದಿಯ ರವರು ಗುವಾಹಟಿಗೆ ಭೇಟಿ ನೀಡಲಿದ್ದು, ಏಪ್ರಿಲ್ 14 ರಂದು ಈ ವಿಶೇಷ ರೈಲನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಉನ್ನತ ಕಾರ್ಯ ನಿರ್ವಹಣೆಯ, ಎಲೆಕ್ಟ್ರಿಕ್ ಮಲ್ಟಿಪಲ್-ಯುನಿಟ್ ರೈಲಾಗಿದ್ದು, ಇದನ್ನು ಭಾರತೀಯ ರೈಲ್ವೇಗಳು ನಿರ್ವಹಿಸುತ್ತವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೇಗಳಿಗೆ ಹೆಚ್ಚು ಲಾಭದಾಯಕ ವ್ಯಾಪಾರವಾಗಿದೆ. ಶೇ.130% ರಷ್ಟು ಹೆಚ್ಚಿನ ಆಕ್ಯುಪೆನ್ಸೀ ದರವನ್ನು ಹೊಂದಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ವಂದೇ ಭಾರತ ರೈಲನ್ನು ಉದ್ಘಾಟಿಸಿದ್ದರು.