Saturday, 14th December 2024

ಒಎಲ್ ಎಕ್ಸನಲ್ಲಿ ಪ್ರಧಾನಿ ವಾರಣಾಸಿ ಕಚೇರಿಯನ್ನೇ ಮಾರಾಟಕ್ಕಿಟ್ಟ ಖದೀಮರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕಚೇರಿಯನ್ನೇ ನಾಲ್ವರು ಯುವಕರು ಒಎಲ್‌ಎಕ್ಸ್‌ನಲ್ಲಿ ಮಾರಾಟ ಕ್ಕಿಟ್ಟಿದ್ದಾರೆ!. ಈ ವಿಷಯ ಗೊತ್ತಾದ ಕೂಡಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಜವಾಹರ್‌ ನಗರದಲ್ಲಿರುವ ಪ್ರಧಾನಿಯವರ ಜನಸಂಪರ್ಕ ಕಾರ್ಯಾಲಯದ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಆರೋಪಿಯೊಬ್ಬ ಅದನ್ನು ಒಎಲ್‌ಎಕ್ಸ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದ. ಈ ಕಚೇರಿ ಮಾರಾಟಕ್ಕಿದೆ ಎಂದೂ ಉಲ್ಲೇಖಿಸಿದ್ದ.

ಈ ವಿಷಯ ಗುರುವಾರ ನಮ್ಮ ಗಮನಕ್ಕೆ ಬಂದಿತ್ತು. ಕೂಡಲೇ ಭೇಲುಪುರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ
ಕೊಂಡು ತನಿಖೆ ಕೈಗೊಳ್ಳಲಾಗಿತ್ತು’ ಎಂದು ವಾರಾಣಸಿಯ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಮಿತ್‌ ಪಾಠಕ್ ಮಾಹಿತಿ ನೀಡಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.