ಉತ್ತಪ್ರದೇಶ: ಶ್ರೀರಾಮ ಮಂದಿರ ದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪಣೆ ವಿಧಿವಿಧಾನ ನೆರವೇರಿಸಿದ್ದ ವಾರಣಾಸಿಯ ಅರ್ಚಕ ಪಂಡಿತ್ ಲಕ್ಷ್ಮೀಕಾಂತ್ ಮಧುರಾನಾಥ್ ದೀಕ್ಷಿತ್ (86) ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ದೀಕ್ಷಿತ್ ಅವರು ವೈದಿಕ ಪರಂಪರೆಯ ವಿಧಿಬದ್ಧ ಆಚರಣೆಗೆ ಹೆಸರುವಾಸಿಯಾದವರು.
ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾದ 121 ವಿದ್ವಾಂಸರ ತಂಡವನ್ನು ಇವರು ಮುನ್ನಡೆಸಿದವರು. ಅವರಿಗೆ 86 ವರ್ಷ ವಯಸ್ಸಾಗಿದ್ದು, ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ. ವೈದಿಕ ಪಂಡಿತರಾದ ದೀಕ್ಷಿತ್ ಅವರು ಮೂಲತಃ ಉತ್ತರ ಪ್ರದೇಶದ ವಾರಣಾಸಿಯವರು.
ದೀಕ್ಷಿತ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ದೇಶದ ಖ್ಯಾತ ವಿದ್ವಾಂಸ ಮತ್ತು ಸಾಂಗ್ವೇದ ವಿದ್ಯಾಲಯದ ಯಜುರ್ವೇದ ಶಿಕ್ಷಕ ಲಕ್ಷ್ಮೀಕಾಂತ್ ದೀಕ್ಷಿತ್ ಜಿ ಅವರ ನಿಧನದ ದುಃಖದ ಸುದ್ದಿ ತಿಳಿದು ಅತೀವ ದುಃಖ ಆಗಿದೆ. ದೀಕ್ಷಿತ್ ಜಿ ಕಾಶಿಯ ವಿದ್ವತ್ ಪರಂಪರೆಯ ಹೆಸರಾಂತ ವ್ಯಕ್ತಿ.
ಕಾಶಿ ವಿಶ್ವನಾಥ ಧಾಮ ಮತ್ತು ರಾಮಮಂದಿರದ ಉದ್ಘಾಟನಾ ದಿನದಂದು ನನಗೆ ಅವರ ಜೊತೆ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.