Thursday, 12th December 2024

ವಾರಣಾಸಿಯ ಅರ್ಚಕ ಪಂಡಿತ್‌ ಲಕ್ಷ್ಮೀಕಾಂತ್‌ ಮಧುರಾನಾಥ್‌ ದೀಕ್ಷಿತ್‌ ನಿಧನ

ತ್ತಪ್ರದೇಶ: ಶ್ರೀರಾಮ ಮಂದಿರ ದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪಣೆ ವಿಧಿವಿಧಾನ ನೆರವೇರಿಸಿದ್ದ ವಾರಣಾಸಿಯ ಅರ್ಚಕ ಪಂಡಿತ್‌ ಲಕ್ಷ್ಮೀಕಾಂತ್‌ ಮಧುರಾನಾಥ್‌ ದೀಕ್ಷಿತ್‌ (86) ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ದೀಕ್ಷಿತ್ ಅವರು ವೈದಿಕ ಪರಂಪರೆಯ ವಿಧಿಬದ್ಧ ಆಚರಣೆಗೆ ಹೆಸರುವಾಸಿಯಾದವರು.

ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾದ 121 ವಿದ್ವಾಂಸರ ತಂಡವನ್ನು ಇವರು ಮುನ್ನಡೆಸಿದವರು. ಅವರಿಗೆ 86 ವರ್ಷ ವಯಸ್ಸಾಗಿದ್ದು, ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ. ವೈದಿಕ ಪಂಡಿತರಾದ ದೀಕ್ಷಿತ್ ಅವರು ಮೂಲತಃ ಉತ್ತರ ಪ್ರದೇಶದ ವಾರಣಾಸಿಯವರು.