Saturday, 16th November 2024

Vastu Tips: ಮನೆಯ ಪ್ರವೇಶ ದ್ವಾರದಲ್ಲಿ ಕನ್ನಡಿ ಇಡಬಹುದೇ?

Vastu Tips

ಕನ್ನಡಿಗಳಿಂದ (Mirror in Home Entrance) ಮನೆಗೆ ಅಲಂಕಾರ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಹೆಚ್ಚು ಆಕರ್ಷಕವೆನಿಸುವ ಕನ್ನಡಿಗಳನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸಬಹುದೇ? ಈ ಬಗ್ಗೆ ವಾಸ್ತು ಶಾಸ್ತ್ರ (Vastu Tips) ಏನು ಹೇಳುತ್ತದೆ ?

ಕೆಲವರು ತಮ್ಮ ಮನೆಯ ಮುಂಭಾಗದ ಬಾಗಿಲಿಗೆ ಕನ್ನಡಿಗಳನ್ನು ಅಳವಡಿಸಿ ಮನೆಯ ಪ್ರವೇಶಕ್ಕೆ ಕಲಾತ್ಮಕ ಲುಕ್ ನೀಡುತ್ತಾರೆ. ಇದು ಆಕರ್ಷಕವಾಗಿ ಕಂಡರೂ ಮನೆಯ ಮುಖ್ಯ ಬಾಗಿಲಲ್ಲಿ ಕನ್ನಡಿ ಇಡುವುದಕ್ಕೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂಬುದಕ್ಕೆ ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ ಹೇಳುವುದು ಹೀಗೆ..

ಅನೇಕ ಜನರು ತಮ್ಮ ಮನೆಯ ಮುಖ್ಯ ದ್ವಾರವನ್ನು ವಿವಿಧ ವಸ್ತುಗಳಿಂದ ಅಲಂಕರಿಸುತ್ತಾರೆ. ಸಸ್ಯಗಳು, ಕಲಾಕೃತಿಗಳು, ಮಂಗಳಕರ ಚಿಹ್ನೆಗಳು.. ಹೀಗೆ. ಇವುಗಳು ನಕಾರತ್ಮಕತೆಯನ್ನು ದೂರ ಮಾಡುತ್ತದೆ. ದುಷ್ಟ ಕಣ್ಣುಗಳಿಂದ ಮನೆಗೆ ರಕ್ಷಣೆ ನೀಡುತ್ತದೆ ಎಂಬುದು ನಂಬಿಕೆ. ಆದರೆ ಮನೆಯ ಪ್ರವೇಶವನ್ನು ಕಲಾತ್ಮಕವಾಗಿ ಹೆಚ್ಚಿಸಲು ಕನ್ನಡಿಗಳನ್ನು ಸ್ಥಾಪಿಸುವುದು ಸರಿಯೇ ?

ವಾಸ್ತು ಶಾಸ್ತ್ರದ ಪ್ರಕಾರ, ಕನ್ನಡಿಗಳು ಎಲ್ಲಾ ರೀತಿಯ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಕನ್ನಡಿಗೆ ಶಕ್ತಿಗಳನ್ನು ಹಿಂದಕ್ಕೆ ಕಳುಹಿಸುವ ಸಾಮರ್ಥ್ಯವಿದೆ ಎನ್ನುತ್ತಾರೆ ರಾಧಾಕಾಂತ್ ವತ್ಸ್.

Vastu Tips

ಮನೆಯ ಮುಖ್ಯ ಬಾಗಿಲಿನಲ್ಲಿ ಕನ್ನಡಿಯನ್ನು ಇರಿಸುವುದರಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಋಣಾತ್ಮಕ ಶಕ್ತಿಯು ಹಿಮ್ಮೆಟ್ಟಬಹುದು. ಆದರೆ ಇದು ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ. ಆದ್ದರಿಂದ ಮುಖ್ಯ ಬಾಗಿಲಿನಲ್ಲಿ ಕನ್ನಡಿಗಳನ್ನು ಇರಿಸುವುದನ್ನು ತಪ್ಪಿಸುವುದು ಒಳ್ಳೆಯದು.

ಮನೆಯ ಮುಖ್ಯ ಬಾಗಿಲಿಗೆ ಕನ್ನಡಿಯನ್ನು ಇರಿಸುವುದರಿಂದ ಪ್ರಗತಿಗೆ ಅಡ್ಡಿಯಾಗುತ್ತದೆ. ಇದು ಅಡೆತಡೆಗಳನ್ನು ಆಕರ್ಷಿಸುತ್ತದೆ. ಯಶಸ್ಸಿಗೆ ತೊಂದರೆ ಉಂಟು ಮಾಡುತ್ತದೆ. ಹೀಗಾಗಿ ಮನೆಯ ಪ್ರವೇಶದ್ವಾರದಲ್ಲಿ ಕನ್ನಡಿಗಳನ್ನು ಸ್ಥಾಪಿಸುವುದು ಸರಿಯಲ್ಲ.

ಮನೆಯ ಮುಖ್ಯ ದ್ವಾರದಲ್ಲಿ ಕನ್ನಡಿಯ ಸ್ಥಾಪನೆ ಮನೆಯ ಹಣಕಾಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಇದು ಬಡತನಕ್ಕೆ ದಾರಿ ಮಾಡಿಕೊಡುತ್ತದೆ.ಮನೆಯ ಮುಖ್ಯ ಬಾಗಿಲಿನ ವಿನ್ಯಾಸದಲ್ಲಿ ಕನ್ನಡಿಗಳನ್ನು ಇಡುವುದು ಸುಂದರವಾಗಿ ಕಂಡರೂ ಇದು ವಾಸ್ತು ದೋಷಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಕುಟುಂಬದ ಸಾಮರಸ್ಯ ಹಾಳಾಗುತ್ತದೆ. ಮನೆಯಲ್ಲಿ ಸಂಘರ್ಷದ ವಾತಾವರಣವನ್ನು ಬೆಳೆಸುತ್ತದೆ.

Vastu Tips

ಮನೆಯಲ್ಲಿ ಕನ್ನಡಿ ಎಲ್ಲಿ ಇಡಬಾರದು?

ಮನೆಯ ಸ್ಟೋರ್ ರೂಂನಲ್ಲಿ ಕನ್ನಡಿ ಅಳವಡಿಸುವುದನ್ನು ತಪ್ಪಿಸಿ. ಮನೆಯ ಶೇಖರಣಾ ಕೊಠಡಿಗಳಲ್ಲಿ ಕನ್ನಡಿಗಳನ್ನು ಇರಿಸುವುದು ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಸಂಗ್ರಹಿಸಿದ ವಸ್ತುಗಳು ಸಾಮಾನ್ಯವಾಗಿ ಬಳಕೆಯಾಗದ ಅಥವಾ ಅನಗತ್ಯ ವಸ್ತುಗಳನ್ನು ಒಳಗೊಂಡಿರುತ್ತವೆ. ಈ ವಸ್ತುಗಳನ್ನು ಪ್ರತಿಬಿಂಬಿಸುವ ಕನ್ನಡಿಗಳು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

Vastu Tips: ವಾಸ್ತು ಪ್ರಕಾರ ಮದುವೆ ಆಮಂತ್ರಣ ಪತ್ರಿಕೆ ಹೀಗಿರಬೇಕು

ವಾಸ್ತು ಶಾಸ್ತ್ರದ ಪ್ರಕಾರಮಲಗುವ ಕೋಣೆಗಳಲ್ಲಿ ಕನ್ನಡಿಗಳನ್ನು ತಪ್ಪಿಸಬೇಕು. ಅಗತ್ಯವಿದ್ದರೆ ಕನ್ನಡಿಗಳನ್ನು ಆಯಕಟ್ಟಿನ ಜಗದಲ್ಲಿ ಇರಿಸಿ. ಹಾಸಿಗೆಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣದೇ ಇರುವಂತೆ ಇಡಿ. ಯಾಕೆಂದರೆ ಈ ನಿಯೋಜನೆಯು ನಿದ್ರೆಗೆ ಅಡ್ಡಿಪಡಿಸಬಹುದು ಮತ್ತು ರಾತ್ರಿಯ ಭಯವನ್ನು ಉಂಟುಮಾಡಬಹುದು. ಈ ಸ್ಥಾನದಲ್ಲಿರುವ ಕನ್ನಡಿಗಳು ಗೊಂದಲ ಮತ್ತು ಭಯವನ್ನು ಉಂಟುಮಾಡಬಹುದು ಎನ್ನುತ್ತಾರೆ ರಾಧಾಕಾಂತ್ ವತ್ಸ್.