Wednesday, 20th November 2024

Vastu Tips: ರತ್ನದ ಬಳೆಗಳನ್ನು ಖರೀದಿಸುವಾಗ ತಿಳಿದಿರಲಿ ವಾಸ್ತು ನಿಯಮ

Vastu Tips

ಬಣ್ಣಬಣ್ಣದ ರತ್ನದ ಬಳೆಗಳು (Gemstone Bracelets) ಹಲವರಿಗೆ ಇಷ್ಟವಾಗುತ್ತದೆ. ಆದರೆ ಇವುಗಳನ್ನು ಆಯ್ಕೆ ಮಾಡುವಾಗ ವಾಸ್ತು ನಿಯಮಗಳನ್ನು (Vastu Tips) ಅನುಸರಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಒಂದು ವೇಳೆ ನಮಗೆ ಸೂಕ್ತವಾದ ಬಳೆಗಳನ್ನು ಆಯ್ಕೆ ಮಾಡದೇ ಇದ್ದರೆ ಸಂಕಷ್ಟಗಳ ಸರಮಾಲೆಯೇ ಎದುರಾಗಬಹುದು. ಅದೇ ರೀತಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಂಡರೆ ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ರತ್ನದ ಬಳೆಗಳ ಕುರಿತು ಅಪಾರ ಜ್ಞಾನ ಹೊಂದಿರುವ ಜ್ಯೋತಿಷಿ, ಡಾ. ವೀರೇಂದ್ರ ಸಾಹ್ನಿ ಅವರು ಈ ಕುರಿತು ನೀಡಿರುವ ಮಾಹಿತಿ ಇಲ್ಲಿದೆ.

ರತ್ನದ ಬಳೆ ಮತ್ತು ನಿರ್ದಿಷ್ಟ ಕಲ್ಲುಗಳು ಜೀವನದ ಮೇಲೆ ಪ್ರಭಾವ ಬೀರುವ ಗ್ರಹಗಳ ಶಕ್ತಿಯನ್ನು ಸಮತೋಲನಗೊಳಿಸುವ ಸಾಧನಗಳಾಗಿವೆ. ಹೀಗಾಗಿ ಇವುಗಳು ನಮ್ಮ ಬದುಕಿನ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ.

ಮಗುವಿನ ಜನನದ ಸಮಯದಲ್ಲಿ ಇರುವ ಒಂಬತ್ತು ಗ್ರಹಗಳು ಮತ್ತು ಹನ್ನೆರಡು ರಾಶಿಚಕ್ರ ಚಿಹ್ನೆಗಳು ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಗ್ರಹಗಳ ಶಕ್ತಿಗಳು ವ್ಯಕ್ತಿಯ ಸಾಮರ್ಥ್ಯ ಮತ್ತು ಸವಾಲುಗಳ ಮೇಲೆ ಪರಿಣಾಮ ಬೀರುತ್ತವೆ.

Vastu Tips

ಆಯ್ಕೆ ಮಾಡುವುದು ಹೇಗೆ?

ಪ್ರತಿಯೊಬ್ಬರೂ ವಿಶಿಷ್ಟವಾದ ಗ್ರಹಗಳ ಪ್ರಭಾವದಿಂದ ಪ್ರಭಾವಿತರಾಗಿರುತ್ತಾರೆ. ಕೆಲವು ಗ್ರಹಗಳು ಉತ್ತಮ ಸ್ಥಾನದಲ್ಲಿದ್ದು, ಪ್ರಯೋಜನಗಳನ್ನು ನೀಡಬಹುದು. ಇನ್ನು ಕೆಲವರಿಗೆ ಸವಾಲುಗಳನ್ನು ಒಡ್ಡಬಹುದು. ಇದು ಜೀವನದಲ್ಲಿ ಸಾಕಷ್ಟು ಹೋರಾಟಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ವೀರೇಂದ್ರ ಸಾಹ್ನಿ.

ಈ ಶಕ್ತಿಗಳನ್ನು ಸಮತೋಲನಗೊಳಿಸಲು ಪರಿಹಾರಗಳು ಇವೆ. ಅದುವೇ ರತ್ನದ ಕಲ್ಲುಗಳು ಮತ್ತು ಕಡಗಗಳು. ಇವು ಬದುಕಿನ ಸಮತೋಲನಕ್ಕೆ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತವೆ. ರತ್ನದ ಕಲ್ಲುಗಳು ತಕ್ಷಣವೇ ಕೆಲಸ ಮಾಡುತ್ತವೆ. ನಿಯಮಿತ ಆಚರಣೆಗಳಿಗೆ ಸಮಯವಿಲ್ಲದವರಿಗೆ ಇದು ಪರಿಹಾರವನ್ನು ಒದಗಿಸುತ್ತದೆ ಎನ್ನುತ್ತಾರೆ ಸಾಹ್ನಿ.

Vastu Tips

ಪ್ರಯೋಜನಗಳು

ರತ್ನದ ಕಡಗಗಳು ನಿರ್ದಿಷ್ಟ ಗ್ರಹಗಳ ಶಕ್ತಿಯನ್ನು ವರ್ಧಿಸುವತ್ತವೆ. ವಿಶೇಷವಾಗಿ ಒಬ್ಬ ವ್ಯಕ್ತಿಗೆ ಪ್ರಯೋಜನಕಾರಿಯಾದ ಗ್ರಹವು ದುರ್ಬಲವಾಗಿದ್ದರೆ ಅಥವಾ ಆತನಿಗೆ ವಿಶೇಷ ಶಕ್ತಿಯ ಅಗತ್ಯವಿದ್ದರೆ, ಜಾತಕವು ಭೂಮಿಯ ಅಂಶಗಳಿಗೆ ಸಂಬಂಧಿಸಿದ ಶಕ್ತಿಗಳ ಕೊರತೆಯನ್ನು ಹೊಂದಿದ್ದರೆ ತುಳಸಿ ಮಣಿ ಕಂಕಣದಂತಹ ಮರದ ಬಳೆಯನ್ನು ಧರಿಸುವುದು ಸೂಕ್ತ. ಇದನ್ನು ಧರಿಸುವುದರಿಂದ ಬದುಕಿನಲ್ಲಿ ನೈಸರ್ಗಿಕ ಶಕ್ತಿಯಿಂದ ಸಮತೋಲನವನ್ನು ಪಡೆಯಬಹುದು ಎನ್ನುತ್ತಾರೆ ಸಾಹ್ನಿ.

ಅಂತೆಯೇ ವಾಸ್ತು ಶಾಸ್ತ್ರದಲ್ಲಿ ಪ್ರತಿ ಗ್ರಹವನ್ನು ನಿರ್ದಿಷ್ಟ ಕಲ್ಲುಗಳಿಂದ ಜೋಡಿಸಲಾಗುತ್ತದೆ. ಜಾತಕದಲ್ಲಿ ಶುಕ್ರವು ದುರ್ಬಲವಾಗಿದ್ದರೆ ಶುಕ್ರನೊಂದಿಗೆ ಸಂಪರ್ಕ ಹೊಂದಿದ ಓಪಲ್ ಅಥವಾ ವಜ್ರವನ್ನು ಧರಿಸಿದರೆ ಶುಕ್ರನ ಸಕಾರಾತ್ಮಕ ಗುಣಗಳನ್ನು ಜೀವನದಲ್ಲಿ ತಂದುಕೊಳ್ಳಬಹುದು.

ಈ ರೀತಿಯ ಕಲ್ಲುಗಳು ಒಂದು ರೀತಿಯಲ್ಲಿ ಶಕ್ತಿಯನ್ನು ಸೆಳೆಯುವ ಆಂಟೆನಾಗಳಂತೆ ಕಾರ್ಯ ನಿರ್ವಹಿಸುತ್ತವೆ. ಗ್ರಹಗಳ ಕಂಪನಗಳನ್ನು ಸ್ವೀಕರಿಸುತ್ತವೆ. ಇದರಿಂದ ಇದನ್ನು ಧರಿಸುವವರ ಮೇಲೆ ಗ್ರಹಗಳ ಪ್ರಭಾವವನ್ನು ನಿರಂತರವಾಗಿ ಬಲಗೊಳ್ಳುತ್ತದೆ.

ಯಾವಾಗಲೂ ರತ್ನವನ್ನು ಆಯ್ಕೆ ಮಾಡವಾಗ ಜಾತಕವನ್ನು ಪರಿಶೀಲಿಸಬೇಕು. ಕಲ್ಲನ್ನು ಧರಿಸುವ ಮೊದಲು ಅದರ ಧನಾತ್ಮಕ ಪ್ರಭಾವವನ್ನು ತಿಳಿದುಕೊಳ್ಳಬೇಕು.

Vastu Tips: ಮನೆಗೆ ಸಕಾರಾತ್ಮಕತೆ, ಸಮೃದ್ಧಿ ತರುವ ಗಾಜು ಎಲ್ಲಿದ್ದರೆ ಸೂಕ್ತ?

ನಿತ್ಯದ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ದೈನಂದಿನ ಆಚರಣೆಗಳನ್ನು ನಡೆಸಲು ಸಮಯವಿರುವುದಿಲ್ಲ. ಹೀಗಾಗಿ ರತ್ನದ ಕಡಗಗಳು ಬದುಕಿನಲ್ಲಿ ಸಮತೋಲನವನ್ನು ತರುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಲಾಭದಾಯಕ ಗ್ರಹಗಳ ಪ್ರಭಾವಗಳೊಂದಿಗೆ ನಮ್ಮ ಶಕ್ತಿಯನ್ನು ಜೋಡಿಸಲು ಇದು ಸೂಕ್ತ ಆಯ್ಕೆಯಾಗಿದೆ ಎನ್ನುತ್ತಾರೆ ಸಾಹ್ನಿ.