Sunday, 24th November 2024

Vastu Tips: ಆರ್ಥಿಕ ಸಮಸ್ಯೆ ದೂರ ಮಾಡುತ್ತದೆ ಲವಂಗ!

Vastu Tips

ಒಂದು ಎಸಳು ಲವಂಗ ಏನು ಮಾಡಬಹುದು? ಯಾವುದಕ್ಕೂ ಉಪಯೋಗವಿಲ್ಲವೆಂದುಕೊಂಡು ಬಿಸಾಡಿದರೆ ನಷ್ಟ ಗ್ಯಾರಂಟಿ. ಯಾಕೆಂದರೆ ಒಂದು ಎಸಳು ಲವಂಗಕ್ಕೆ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇದೆ ಎನ್ನುತ್ತದೆ ವಾಸ್ತು (Vastu Tips) ಶಾಸ್ತ್ರ.

ಜೀವನದ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದೆ. ಅದರಲ್ಲೂ ಮುಖ್ಯವಾಗಿ ಆರ್ಥಿಕ ಪರಿಸ್ಥಿತಿಯ ಸುಧಾರಿಸಲು ವಾಸ್ತು ಶಾಸ್ತ್ರ ಹಲವಾರು ಪರಿಹಾರಗಳನ್ನು ನೀಡಿದೆ. ಇದರಲ್ಲಿ ಲವಂಗದ ಬಳಕೆ ಕೂಡ ಒಂದು.

ವಾಸ್ತು ಶಾಸ್ತ್ರದ ತತ್ತ್ವ ಮತ್ತು ನಿಯಮಗಳನ್ನು ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಆಕರ್ಷಿಸಬಹುದು. ಇದು ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುತ್ತದೆ. ಅಂತಹ ಒಂದು ಶಾಸ್ತ್ರವೆಂದರೆ ಕೈಚೀಲ ಅಥವಾ ಪರ್ಸ್‌ನಲ್ಲಿ ಲವಂಗದ ಎಸಳು ಇಟ್ಟುಕೊಳ್ಳುವುದು. ಇದು ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.

ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ಲವಂಗವನ್ನು ಪೂಜೆಗಳಲ್ಲಿಯೂ ಬಳಸಲಾಗುತ್ತದೆ. ಇದನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಅನಗತ್ಯ ಖರ್ಚುಗಳನ್ನು ತಪ್ಪಿಸಬಹುದು ಮತ್ತು ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು.

Vastu Tips

ಲವಂಗದ ಮಹತ್ವ

ವಾಸ್ತು ಶಾಸ್ತ್ರದಲ್ಲಿ ಲವಂಗವು ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಸಮೃದ್ಧಿಯನ್ನು ಆಕರ್ಷಿಸುವ ಶಕ್ತಿಯುತ ವಸ್ತು ಎನ್ನಲಾಗುತ್ತದೆ. ಇದರ ಪರಿಮಳವು ಶುದ್ಧತೆ ಮತ್ತು ಸಮೃದ್ಧಿಯ ವಾತಾವರಣವನ್ನು ಸೃಷ್ಟಿಸುತ್ತದೆ.

ನಿಯಮಿತವಾಗಿ ಲವಂಗವನ್ನು ಪೂಜೆಯಲ್ಲಿ ಬಳಸಿದರೆ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಮಾತ್ರವಲ್ಲದೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಬಹುದು.

ಲವಂಗವನ್ನು ಕರ್ಪೂರದಿಂದ ಸುಡುವುದರಿಂದ ಮನೆಯ ವಾತಾವರಣವನ್ನು ಶುದ್ಧವಾಗುತ್ತದೆ ಮತ್ತು ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.

Vastu Tips

ಲವಂಗದ ಪ್ರಯೋಜನ

ವಾಸ್ತು ಶಾಸ್ತ್ರದ ಪ್ರಕಾರ ಲವಂಗವು ಸಮೃದ್ಧಿ ಮತ್ತು ಆರ್ಥಿಕ ಯೋಗಕ್ಷೇಮಕ್ಕಾಗಿ ಅಯಸ್ಕಾಂತದಂತೆ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರಾದ ಡಾ. ಆರತಿ ದಹಿಯಾ.

ಲವಂಗದ ತುಂಡನ್ನು ಪರ್ಸ್‌ನಲ್ಲಿ ಇಟ್ಟುಕೊಂಡರೆ ಪರ್ಸ್ ಯಾವಾಗಲೂ ಹಣದಿಂದ ತುಂಬಿರುತ್ತದೆ ಮತ್ತು ಹಣದ ನಷ್ಟದ ಸಾಧ್ಯತೆಗಳಿಲ್ಲ. ಪರ್ಸ್‌ನಲ್ಲಿ ಲವಂಗವನ್ನು ಇಟ್ಟುಕೊಳ್ಳುವುದು ಜೀವನವನ್ನು ಸಂಪತ್ತು ಮತ್ತು ಸಮೃದ್ಧಿಯಿಂದ ಆಶೀರ್ವದಿಸುತ್ತದೆ.

ಲವಂಗವು ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ. ವಾಸ್ತು ಶಾಸ್ತ್ರದಲ್ಲಿ ಲವಂಗವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಹಣಕ್ಕೆ ಸಂಬಂಧಿಸಿದ ಶಕ್ತಿಯ ಶುದ್ಧೀಕರಣವಾಗುತ್ತದೆ. ಹಣದ ಸಮೃದ್ಧಿಗೆ ಇದು ಅನುಕೂಲಕರವಾಗಿಸುತ್ತದೆ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ. ಈ ಪ್ರಕ್ರಿಯೆಯು ಅನಗತ್ಯ ಖರ್ಚುಗಳನ್ನು ದೂರ ಮಾಡುತ್ತದೆ.

Vastu Tips: ಜ್ಞಾನ ದೇವತೆ ಸರಸ್ವತಿ ದೇವಿಯ ವಿಗ್ರಹ ಯಾವ ದಿಕ್ಕಿನಲ್ಲಿಡುವುದು ಸೂಕ್ತ?

ಶುಕ್ರವಾರದಂದು ಮೂರು ಲವಂಗವನ್ನು ದುರ್ಗಾ ದೇವಿಗೆ ಅರ್ಪಿಸಿ ಅದನ್ನು ಬಳಿಕ ಪರ್ಸ್‌ನಲ್ಲಿ ಇರಿಸಿದರೆ ಅದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ಡಾ. ಆರತಿ.