Friday, 15th November 2024

Vastu Tips: ವಾಸ್ತು ಪ್ರಕಾರ ಮದುವೆ ಆಮಂತ್ರಣ ಪತ್ರಿಕೆ ಹೀಗಿರಬೇಕು

Vastu Tips

ಮದುವೆಯ ಸೀಸನ್ (wedding season) ಪ್ರಾರಂಭವಾಗಿದೆ. ಹೆಚ್ಚಿನವರು ಈಗಾಗಲೇ ಮನೆಯಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಮೊದಲು ಬರುವ ಯೋಚನೆಯೇ ಮದುವೆಯ ಆಮಂತ್ರಣ ಪತ್ರಿಕೆ (Wedding invitation card). ಇದು ಹೀಗೆ ಇರಬೇಕು ಎನ್ನುವ ಕನಸು ಎಲ್ಲರದ್ದಾಗಿದ್ದರೂ ಇದರಲ್ಲೂ ವಾಸ್ತು ನಿಯಮ (Vastu Tips) ಪಾಲಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು.

ವಾಸ್ತು ಶಾಸ್ತ್ರದಲ್ಲಿ ಬಣ್ಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಎಲ್ಲದಕ್ಕೂ ಸರಿಯಾದ ಬಣ್ಣ, ಆಕೃತಿಗಳನ್ನು ಬಳಸುವುದು ಬಹಳ ಮುಖ್ಯ.

ಭಾರತೀಯ ಸಾಂಪ್ರದಾಯಿಕ ವಿವಾಹ ಪ್ರಕ್ರಿಯೆಗಳಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೀಗಾಗಿ ಮದುವೆಯ ಕಾರ್ಡ್ ಗಳಿಗೆ ಸರಿಯಾದ ಬಣ್ಣವನ್ನು ಆಯ್ಕೆ ಮಾಡುವುದರಿಂದ ದಂಪತಿಯ ವೈವಾಹಿಕ ಜೀವನವು ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲು ಸಾಧ್ಯ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ಫ್ಯಾಷನ್ ಯುಗದಲ್ಲಿ ಇಂದು ನಾವಿದ್ದೇವೆ. ಹೀಗಾಗಿ ಮದುವೆ ಕಾರ್ಡ್‌ಗಳ ಬಣ್ಣ, ವಿನ್ಯಾಸಗಳು ಬದಲಾದರೂ ಸಂಪ್ರದಾಯ ಮಾತ್ರ ಪರಂಪರೆಯಂತೆ ಮುಂದುವರಿದಿದೆ.

ಯಾವ ಬಣ್ಣ ?

ಜ್ಯೋತಿಶಾಚಾರ್ಯ ಡಾ. ಗೌರವ್ ಕುಮಾರ್ ದೀಕ್ಷಿತ್ ಪ್ರಕಾರ ಮದುವೆಯ ಕಾರ್ಡ್ ಯಾವಾಗಲೂ ಕೆಂಪು ಅಥವಾ ಹಳದಿ ಬಣ್ಣದಲ್ಲಿರಬೇಕು. ಕಪ್ಪು, ನೀಲಿ ಅಥವಾ ಕಂದು ಬಣ್ಣದ ಕಾರ್ಡ್ ಅನ್ನು ಎಂದಿಗೂ ಮಾಡಬೇಡಿ. ಯಾಕೆಂದರೆ ಈ ಬಣ್ಣಗಳು ನಕಾರಾತ್ಮಕತೆಯ ಸಂಕೇತವಾಗಿದೆ ಎನ್ನುತ್ತಾರೆ.

ಯಾವ ಆಕೃತಿ?

ಮದುವೆಯ ಕಾರ್ಡ್ ಯಾವಾಗಲೂ ಚೌಕಾಕೃತಿಯಲ್ಲಿ ಇರಬೇಕು. ಯಾಕೆಂದರೆ ಕಾರ್ಡ್‌ನ ನಾಲ್ಕು ಮೂಲೆಗಳು ಸಂತೋಷ, ಸಮೃದ್ಧಿ, ಯೋಗಕ್ಷೇಮ ಮತ್ತು ಅದೃಷ್ಟದ ಸಂಕೇತವಾಗಿದೆ. ಆದರೂ ಕೆಲವರು ಫ್ಯಾಶನ್ ಗಾಗಿ ಕಾರ್ಡ್ ತ್ರಿಕೋನ ಅಥವಾ ಎಲೆಯ ಆಕಾರವನ್ನು ಆಯ್ಕೆ ಮಾಡುತ್ತಾರೆ ಇದು ತಪ್ಪು ಎನ್ನುತ್ತಾರೆ ದೀಕ್ಷಿತ್.

Vastu Tips

ಮುದ್ರಣ ಹೇಗಿರಬೇಕು?

ಮದುವೆ ಕಾರ್ಡ್‌ನ ಮುದ್ರಣವು ಯಾವಾಗಲೂ ತಿಳಿ ಬಣ್ಣದಲ್ಲಿರಬೇಕು. ಮದುವೆ ಕಾರ್ಡ್‌ನಲ್ಲಿ ವಧು ಮತ್ತು ವರ ಅಥವಾ ಇತರ ಸಂಬಂಧಿಕರ ಹೆಸರನ್ನು ಯಾವುದೇ ಗಾಢ ಬಣ್ಣದಲ್ಲಿ ಬರೆಯಬಾರದು. ಆ ಶುಭ ಕಾರ್ಯದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ವಿಘ್ನವಿನಾಶಕನಾದ ಗಣೇಶನಿಗೆ ಮದುವೆ ಆಮಂತ್ರಣದ ಮೊದಲ ಕಾರ್ಡ್ ಅನ್ನು ಸಮರ್ಪಿಸಬೇಕು.

Vastu Tips: ಅಡುಗೆ ಮನೆಯಲ್ಲಿ ವಾಸ್ತು ದೋಷ; ಏನು ಪರಿಹಾರ?

ಈ ತಪ್ಪು ಎಂದಿಗೂ ಮಾಡಬೇಡಿ

ಮದುವೆ ಕಾರ್ಡ್‌ನಲ್ಲಿ ನೃತ್ಯ ಭಂಗಿಯಲ್ಲಿರುವ ಗಣೇಶನ ಚಿತ್ರಗಳನ್ನು ಎಂದಿಗೂ ಹಾಕಬೇಡಿ. ನೃತ್ಯ ದೇವತೆಗಳ ಚಿತ್ರಗಳು ಗೊಂದಲದ ಕಂಪನಗಳನ್ನು ಆಕರ್ಷಿಸುತ್ತವೆ. ಕೃಷ್ಣ ಮತ್ತು ರಾಧೆಯ ಚಿತ್ರಗಳು ಪ್ರತ್ಯೇಕತೆ ಮತ್ತು ನೋವನ್ನು ಚಿತ್ರಿಸುವುದರಿಂದ ಅವುಗಳನ್ನು ತಪ್ಪಿಸಬೇಕು ಎನ್ನುತ್ತಾರೆ ಡಾ. ಗೌರವ್ ಕುಮಾರ್ ದೀಕ್ಷಿತ್.