Friday, 22nd November 2024

Vastu Tips: ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುವ ಹಳದಿ ಬಣ್ಣ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು?

Vastu Tips

ಬಣ್ಣಗಳು (colours) ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಂದೊಂದು ಬಣ್ಣವು ಬದುಕಿನ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತವೆ. ವಾಸ್ತು ಶಾಸ್ತ್ರದಲ್ಲೂ (Vastu Tips) ಬಣ್ಣಗಳಿಗೆ ಮಹತ್ವವಿದೆ. ಹೀಗಾಗಿ ನಾವು ಧರಿಸುವ ಬಟ್ಟೆಯಿಂದ ಹಿಡಿದು ನಮ್ಮ ಸುತ್ತಮುತ್ತಲಿನ ವಸ್ತುಗಳಿಗೂ ನಿರ್ದಿಷ್ಟ ಬಣ್ಣಗಳಿದ್ದರೆ ಅದು ನಮ್ಮ ಬದುಕಿನ ಮೇಲೆ ಬೇರೆಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ವಾಸ್ತು ತತ್ತ್ವಗಳ ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಇರಿಸಿದರೆ ಅದು ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದೇ ರೀತಿ ಮನೆಯ ಸರಿಯಾದ ದಿಕ್ಕು ಅಥವಾ ಮೂಲೆಯಲ್ಲಿ ಸರಿಯಾದ ಬಣ್ಣವನ್ನು ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಅತ್ಯಂತ ಮಹತ್ವದ್ದಾಗಿದೆ.

ಹಳದಿ ಬಣ್ಣ (Yellow colour) ಬಹುತೇಕ ಮಂದಿಗೆ ಪ್ರಿಯವಾಗಿರುತ್ತದೆ. ಹಳದಿ ಬಣ್ಣವು ಶಾಖ, ಶಕ್ತಿ, ಸುರಕ್ಷತೆ ಮತ್ತು ಸಂತೋಷಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಮನೆಯಲ್ಲಿ ಈ ಬಣ್ಣವನ್ನು ಎಲ್ಲಿ ಇಟ್ಟರೆ ಒಳ್ಳೆಯದು ಎಂಬುದನ್ನು ಖ್ಯಾತ ವಾಸ್ತು ತಜ್ಞರಾದ ಜ್ಯೋತಿಷಿ ಪಂಡಿತ್ ಅರವಿಂದ್ ತ್ರಿಪಾಠಿ ಹೇಳಿರುವುದು ಹೀಗೆ..

Vastu Tips

ಯಾವ ದಿಕ್ಕು?

ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕು ಹೆಚ್ಚಾಗಿ ಸಾವಿನ ದೇವರಾದ ಯಮರಾಜನಿಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಯಾವುದೇ ಬಣ್ಣವನ್ನು ಇರಿಸಿದರೆ ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಹಳದಿ ಸೂರ್ಯನ ಬಣ್ಣವಾಗಿದ್ದು, ಶಕ್ತಿ ಮತ್ತು ಉತ್ಸಾಹವನ್ನು ಸಂಕೇತಿಸುತ್ತದೆ. ಆದ್ದರಿಂದ ಮನೆಯ ದಕ್ಷಿಣ ದಿಕ್ಕಿನಲ್ಲಿ ಹಳದಿ ಬಣ್ಣದ ವಸ್ತುಗಳನ್ನು ಇರಿಸಿದರೆ ಅದು ನಕಾರಾತ್ಮಕ ಶಕ್ತಿಯನ್ನು ನಾಶಮಾಡಲು ಸಹಾಯ ಮಾಡುತ್ತದೆ. ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.

ಪಶ್ಚಿಮ ದಿಕ್ಕಿನಲ್ಲಿ ಹಳದಿ ಬಣ್ಣವನ್ನು ಇಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ದಿಕ್ಕು ಸಂಪತ್ತು, ಮಾನಸಿಕ ಶಾಂತಿ ಮತ್ತು ಧನಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ. ಹಳದಿ ಬಣ್ಣದ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಟ್ಟರೆ ನಾನಾ ರೀತಿಯ ಆರ್ಥಿಕ ಹಾಗೂ ಆರೋಗ್ಯ ಲಾಭ ಪಡೆಯಬಹುದು ಎಂದರು.

ಪೂರ್ವ ದಿಕ್ಕು ಸೂರ್ಯ ದೇವರ ದಿಕ್ಕು. ಹಳದಿ ಬಣ್ಣವನ್ನು ಸೂರ್ಯ ದೇವರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಹಳದಿ ವಸ್ತುಗಳನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಸೂರ್ಯ ದೇವರ ಆಶೀರ್ವಾದವನ್ನು ಪಡೆಯಬಹುದು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಿಯುತ್ತದೆ.

Vastu Tips: ಅಡುಗೆ ಮನೆಯ ಸ್ಲ್ಯಾಬ್ ಮೇಲೆ ಚಪಾತಿ, ರೊಟ್ಟಿ ಮಾಡುವುದು ಸರಿಯೇ?

ಹಳದಿ ಬಣ್ಣವನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಳದಿ ವಸ್ತುಗಳನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಮನೆಗೆ ಸಂಪತ್ತು ಬರುತ್ತದೆ ಮತ್ತು ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ ಎನ್ನುತ್ತಾರೆ ಜ್ಯೋತಿಷಿ ಅರವಿಂದ್.