ಜ್ಞಾನ ಮತ್ತು ಕಲೆಗಳ ದೇವತೆ ಸರಸ್ವತಿ ದೇವಿಯ ವಿಗ್ರಹವನ್ನು ಮನೆಯಲ್ಲಿ ಇರಿಸುವುದು ಅತ್ಯಂತ ಶುಭದಾಯಕವೆಂದೇ ಪರಿಗಣಿಸಲಾಗಿದೆ. ಆದರೆ ಈ ದೇವಿಯ ವಿಗ್ರಹವನ್ನು ಇಡುವುದರಲ್ಲಿ ವಾಸ್ತು ನಿಯಮವನ್ನು (Vastu Tips) ಅನುಸರಿಸಿದರೆ ಶೈಕ್ಷಣಿಕ ಮತ್ತು ಕಲಾತ್ಮಕ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ಮನೆಯಲ್ಲಿ ಅನೇಕರು ಜ್ಞಾನ ಮತ್ತು ಸೃಜನಶೀಲತೆಯನ್ನು ಆಕರ್ಷಿಸಲು ಸರಸ್ವತಿ ದೇವಿಯ ವಿಗ್ರಹವನ್ನು ಸ್ಥಾಪಿಸುತ್ತಾರೆ. ಆದರೆ ಇದರಲ್ಲಿ ಧನಾತ್ಮಕ ಫಲಿತಾಂಶ ಸಿಗಬೇಕಾದರೆ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಅದು ಯಾವುದು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಜ್ಯೋತಿಷಿ ಪಂಡಿತ್ ಅರವಿಂದ್ ತ್ರಿಪಾಠಿ ಅವರು ಮನೆಯಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಇರಿಸುವುದಕ್ಕೆ ಪಾಲಿಸಬೇಕಾದ ನಿಯಮಗಳ ಕುರಿತು ವಿವರಿಸಿರುವುದು ಹೀಗೆ..
ಸರಸ್ವತಿ ದೇವಿಯು ಜ್ಞಾನ, ಕಲೆ ಮತ್ತು ಕಲಿಕೆಯ ದೇವತೆ. ಆಕೆಯನ್ನು ಮನೆಯಲ್ಲಿ ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು. ಮಾತ್ರವಲ್ಲದೆ ಜ್ಞಾನದ ಜೊತೆಗೆ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಬಹುದು.
ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಎಲ್ಲಾ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಸರಸ್ವತಿಯ ವಿಗ್ರಹವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಯಾವ ದಿಕ್ಕು ಸೂಕ್ತ?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸರಸ್ವತಿಯ ವಿಗ್ರಹವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಸರಸ್ವತಿ ದೇವಿಯ ವಿಗ್ರಹವನ್ನು ಪೂರ್ವ ದಿಕ್ಕಿನಲ್ಲಿ ಇರಿಸುವುದು ಒಳ್ಳೆಯದು. ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕಾಗಿರುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು.
ಸೂರ್ಯನನ್ನು ಜ್ಞಾನ ಮತ್ತು ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಪೂರ್ವ ದಿಕ್ಕು ಹೊಸ ಆರಂಭ ಮತ್ತು ಹೊಸ ಅವಕಾಶಗಳ ಸಂಕೇತವಾಗಿದೆ. ಮಾ ಸರಸ್ವತಿಯ ವಿಗ್ರಹವನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ವ್ಯಕ್ತಿಯ ಜ್ಞಾನವು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಈ ದಿಕ್ಕಿಗೆ ಮುಖಮಾಡಿ ಓದಿದರೆ ಸದಾ ಸಫಲರಾಗುತ್ತಾರೆ ಎನ್ನುತ್ತಾರೆ ಪಂಡಿತ್ ಜಿ.
ಉತ್ತರ ದಿಕ್ಕನ್ನು ಶಾಂತಿ, ಜ್ಞಾನ ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಇಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಮೃದ್ಧಿ ಉಂಟಾಗುತ್ತದೆ. ದೇವಿಯ ವಿಗ್ರಹವನ್ನು ಈ ದಿಕ್ಕಿನಲ್ಲಿ ಇರಿಸುವುದರ ಜೊತೆಗೆ ಪ್ರತಿದಿನ ತುಪ್ಪದ ದೀಪವನ್ನು ಬೆಳಗಿಸಿ, ಇದರಿಂದ ಧನಾತ್ಮಕ ಶಕ್ತಿಯೂ ಹರಡುತ್ತದೆ ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹದು.
Vastu Tips: ಉಪ್ಪಿನಿಂದ ದೂರ ಮಾಡಬಹುದು ಹಣದ ಸಮಸ್ಯೆ!
ಈಶಾನ್ಯ ದಿಕ್ಕನ್ನು ಜ್ಞಾನ, ಬುದ್ಧಿವಂತಿಕೆ ಮತ್ತು ಸೃಜನಶೀಲತೆಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ಇಶಾನ್ ಕೋನ್ ಎಂದೂ ಕರೆಯುತ್ತಾರೆ. ಇಲ್ಲಿ ಸರಸ್ವತಿಯ ವಿಗ್ರಹವನ್ನು ಇರಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಯಶಸ್ವಿಯಾಗುತ್ತಾರೆ. ವಿಗ್ರಹದ ಬಳಿ ಪುಸ್ತಕ ಅಥವಾ ಸಂಗೀತ ಉಪಕರಣಗಳನ್ನು ಇರಿಸಬಹುದು. ಮಗುವಿಗೆ ಅಧ್ಯಯನದಲ್ಲಿ ಆಸಕ್ತಿಯಿಲ್ಲದಿದ್ದರೆ ಈ ದಿಕ್ಕಿನಲ್ಲಿ ಕುಳಿತು ಕಲಿಸಬಹುದು ಮತ್ತು ಧರ್ಮಗ್ರಂಥಗಳ ಪ್ರಕಾರ ಇದು ತುಂಬಾ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ಪಂಡಿತ್ ಅರವಿಂದ್ ತ್ರಿಪಾಠಿ.