ಜೀವನದಲ್ಲಿ ಹಣದ ಸಮಸ್ಯೆ ಎಲ್ಲರಿಗೂ ಒಂದಲ್ಲಾ ಒಂದು ಬಾರಿ ಬಂದೇ ಬರುತ್ತದೆ. ಕೆಲವೊಂದು ಬಾರಿ ಇದು ನಮ್ಮನ್ನು ಸಂಪೂರ್ಣ ಕುಸಿಯುವಂತೆ ಮಾಡಿದರೆ ಇನ್ನು ಕೆಲವೊಮ್ಮೆ ನಿಧಾನವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಹಣದ ಸಮಸ್ಯೆಯನ್ನು (Money problem) ದೂರ ಮಾಡಲು ವಾಸ್ತು ಶಾಸ್ತ್ರವು (Vastu Tips) ಕೆಲವು ನಿಯಮಗಳನ್ನು ಹೇಳಿದೆ.
ಮನೆಯ ಮುಖ್ಯ ಬಾಗಿಲಿನಲ್ಲಿ ಈ ಒಂದು ವಸ್ತುವನ್ನು ಇಡುವುದರಿಂದ ಹಣದ ಸಮಸ್ಯೆಗಳು ಬಹುಬೇಗನೆ ದೂರವಾಗುತ್ತದೆ. ಹಣವಿದ್ದರೆ ಮಾತ್ರ ನಮ್ಮ ಜೀವನ ಸುಗಮವಾಗಿ ಸಾಗಲು ಸಾಧ್ಯವಿದೆ.
ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಬಯಸಿದರೆ ಮನೆಯ ಮುಖ್ಯ ಬಾಗಿಲಿನಲ್ಲಿ ಕೆಲವು ವಸ್ತುಗಳನ್ನು ಸರಿಯಾಗಿ ಇಡುವುದು ಮುಖ್ಯ. ಇದರಿಂದ ಮನೆಯ ಮೇಲೆ ಜನರ ಕೆಟ್ಟ ಕಣ್ಣು ಬೀಳುವುದಿಲ್ಲ. ಅಲ್ಲದೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನಿರಂತರವಾಗಿ ಉಳಿಯುತ್ತದೆ.
ಎಲ್ಲರೂ ಹಣ ಸಂಪಾದಿಸಲು ಹೊರಡುತ್ತಾರೆ. ಯಾಕೆಂದರೆ ಎಲ್ಲರಿಗೂ ತಮ್ಮ ಮನೆಯಲ್ಲಿ ಎಲ್ಲಾ ಸೌಕರ್ಯಗಳು ಇರಬೇಕು ಎಂದು ಬಯಸುತ್ತಾರೆ. ಇದರಿಂದ ಕುಟುಂಬದ ಪ್ರತಿಯೊಂದು ಕಾರ್ಯವು ಸುಸೂತ್ರವಾಗಿ ಸಾಗಲು ನೆರವಾಗುತ್ತದೆ.
ಕೆಲವೊಮ್ಮೆ ವಾಸ್ತು ಅಥವಾ ಮನೆಯಲ್ಲಿ ತಪ್ಪು ವಸ್ತುಗಳನ್ನು ಇಡುವುದರಿಂದ ಎಲ್ಲವೂ ಹಾಳಾಗಲು ಪ್ರಾರಂಭಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಮನೆಯ ವಾಸ್ತು. ಯಾವುದೇ ಕೆಲಸವನ್ನು ಕಾಳಜಿ ವಹಿಸದೆ ಮಾಡಿದರೆ ಅದು ನಮ್ಮ ಜೀವನದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡುತ್ತದೆ. ಇದಕ್ಕಾಗಿಯೇ ಮನೆಯಲ್ಲಿ ವಾಸ್ತು ನಿಯಮ ಪಾಲಿಸುವುದು ಬಹುಮುಖ್ಯ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ಕೆಲವು ವಸ್ತುಗಳನ್ನು ಮನೆಯ ಮುಖ್ಯ ಬಾಗಿಲಿಗೆ ತೂಗು ಹಾಕಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಈ ಕುರಿತು ದೆಹಲಿಯ ಸಂಖ್ಯಾಶಾಸ್ತ್ರಜ್ಞ ಮತ್ತು ನ್ಯೂಮೆರೋವಾನಿ ಸಂಸ್ಥಾಪಕ ಸಿದ್ಧಾರ್ಥ್ ಎಸ್. ಕುಮಾರ್ ಹೇಳಿರುವುದು ಹೀಗೆ..
ಜೀವನದಲ್ಲಿ ಹಣ ಬಂದರೆ ಅದು ಬೇಗನೆ ಖರ್ಚಾಗುತ್ತದೆ. ಇದರಿಂದಾಗಿ ದಿನೇದಿನೇ ಸಾಲದ ಸುಳಿಯಲ್ಲಿ ಸಿಲುಕುತ್ತೇವೆ. ಹೀಗಾಗಿ ವಾಸ್ತು ಪರಿಹಾರಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಯಾಕೆಂದರೆ ವಾಸ್ತು ಪ್ರಕಾರ ದಿಕ್ಕನ್ನು ಬದಲಾಯಿಸಿದಾಗ ಜೀವನದಲ್ಲಿ ಸುಧಾರಣೆ ಕಾಣಲು ಪ್ರಾರಂಭವಾಗುತ್ತದೆ. ಇದಕ್ಕೆ ಮುಖ್ಯ ಪರಿಹಾರವೆಂದರೆ ಮನೆಯ ಗೇಟ್ ಅಂದರೆ ಪ್ರತಿದಿನ ಮನೆ ಪ್ರವೇಶಿಸುವ ಸ್ಥಳ.
ಮನೆಯ ಪ್ರವೇಶ ದ್ವಾರದಲ್ಲಿ ಉಪ್ಪಿನ ಗಂಟು ಇಡುವುದರಿಂದ ಮನೆಯಲ್ಲಿ ಆರ್ಥಿಕ ಸಮೃದ್ಧಿಯಾಗುತ್ತದೆ. ನಾವು ನಮ್ಮ ಪ್ರತಿ ಆಹಾರದಲ್ಲೂ ಉಪ್ಪನ್ನು ಸೇರಿಸುತ್ತೇವೆ. ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದೆನಿಸಿದಾಗಲೂ ಅದನ್ನು ಕಡಿಮೆ ಮಾಡಲು ಉಪ್ಪನ್ನು ಬಳಸುತ್ತೇವೆ. ಈ ಕಾರಣದಿಂದಾಗಿ ಮನೆಯಲ್ಲಿ ಸಕಾರಾತ್ಮಕ ಪರಿಣಾಮ ವೃದ್ಧಿಸುತ್ತದೆ.
ಉಪ್ಪಿನ ಗಂಟು ಮಾಡಿ ಮನೆಯ ಪ್ರವೇಶ ದ್ವಾರದ ಬಳಿ ಇಡುವುದರಿಂದ ಶುಕ್ರನು ಬಲಶಾಲಿಯಾಗುತ್ತಾನೆ. ಅಲ್ಲದೆ ಮನೆಗೆ ಬರುವ ನಕಾರಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದ ಯಾವುದೇ ಹಣದ ಸಮಸ್ಯೆ ಎದುರಾಗುವುದಿಲ್ಲ. ಬರಲು ಬಾಕಿ ಇರುವ ಹಣವು ಬೇಗನೆ ಕೈಸೇರುತ್ತದೆ.
Vastu Tips: ರತ್ನದ ಬಳೆಗಳನ್ನು ಖರೀದಿಸುವಾಗ ತಿಳಿದಿರಲಿ ವಾಸ್ತು ನಿಯಮ
ಪ್ರಯೋಜನಗಳು ಹಲವು
ಮನೆಯ ಮುಖ್ಯ ಬಾಗಿಲಿಗೆ ಉಪ್ಪಿನ ಕಟ್ಟು ನೇತು ಹಾಕುವುದರಿಂದ ಹಲವು ಪ್ರಯೋಜನಗಳಿವೆ. ಇದರಿಂದ ಋಣಾತ್ಮಕತೆಯ ಪರಿಣಾಮ ಜೀವನದ ಮೇಲೆ ಆಗುವುದಿಲ್ಲ. ವೈವಾಹಿಕ ಜೀವನದಲ್ಲೂ ಸಕಾರಾತ್ಮಕತೆ ತುಂಬುತ್ತದೆ. ಮನೆಯ ವಾಸ್ತು ದೋಷ ಪರಿಹಾರವಾಗುತ್ತದೆ.