Saturday, 26th October 2024

Vastu Tips: ಕನಸಿನಲ್ಲಿ ನೀರು ಕಂಡರೆ ಶುಭವೇ ಅಥವಾ ಅಶುಭವೇ?

Vastu Tips

ಕನಸು ಕಾಣದ ವ್ಯಕ್ತಿಗಳು ಯಾರೂ ಇಲ್ಲ. ಪ್ರತಿಯೊಬ್ಬರಿಗೂ ವಾರದಲ್ಲಿ ಒಂದೆರಡು ಬಾರಿಯಾದರೂ ಒಂದಲ್ಲ ಒಂದು ಕನಸು (dream) ಬಿದ್ದೇ ಬೀಳುತ್ತದೆ. ಕೆಲವು ಕನಸುಗಳು ನೆನಪಿನಲ್ಲಿ ಉಳಿದರೆ, ಇನ್ನು ಕೆಲವು ಕನಸುಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ನಾವು ಕಾಣುವ ಕನಸಿಗೂ ವಾಸ್ತು ಶಾಸ್ತ್ರಕ್ಕೂ (Vastu Tips) ಸಂಬಂಧವಿದೆ ಎನ್ನುತ್ತಾರೆ ವಾಸ್ತು ತಜ್ಞರು.

ಕನಸು ನಮ್ಮ ಮನಸ್ಸಿನ ಕಲ್ಪನೆಯೂ ಆಗಿರಬಹುದು. ಕನಸುಗಳು ನಮ್ಮ ದೈನಂದಿನ ಜೀವನದ ಕೆಲವು ಸನ್ನಿವೇಶಗಳು ಅಥವಾ ಘಟನೆಗಳನ್ನು ಒಳಗೊಂಡಿರುತ್ತದೆ. ಅದು ನಮ್ಮ ಮೆದುಳಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಕೆಲವೊಮ್ಮೆ ಈ ಘಟನೆಗಳು ನಿಜವಾಗುವ ಸಾಧ್ಯತೆಯೂ ಇರುತ್ತದೆ. ಕೆಲವು ಕನಸುಗಳು ನಮ್ಮನ್ನು ಹೆಚ್ಚು ಕಾಲ ಕಾಡುವುದು ಇದೆ. ಇದು ನಿದ್ರೆಯ ಮೇಲೂ ಪರಿಣಾಮ ಬೀರುವುದು. ಅನೇಕ ಜನರು ಒಂದೇ ಕನಸನ್ನು ಮತ್ತೆ ಮತ್ತೆ ನೋಡಬಹುದು. ಒಂದು ವೇಳೆ ಹೀಗಾದರೆ ಅದು ನಮ್ಮ ಜೀವನಕ್ಕೆ ಸಂಬಂಧಿಸಿದೆ ಎಂದರ್ಥ ಎನ್ನುತ್ತದೆ ಹಿಂದೂ ಧರ್ಮ ಗ್ರಂಥಗಳು.

ವಾಸ್ತು ಶಾಸ್ತ್ರದ ಪ್ರಕಾರ ನಾವು ಕಾಣುವ ಪ್ರತಿ ಕನಸಿಗೆ ಕೆಲವು ಅರ್ಥಗಳಿವೆ. ಅದರಲ್ಲೂ ಕನಸಿನಲ್ಲಿ ನೀರನ್ನು ಕಾಣುವುದು ಶುಭ ಮತ್ತು ಅಶುಭ ಪರಿಣಾಮಗಳನ್ನು ಉಂಟು ಮಾಡಬಹುದು.

ಪ್ರವಾಹ

ಕನಸಿನಲ್ಲಿ ಪ್ರವಾಹವನ್ನು ಕಂಡರೆ ಅದು ಮುಂಬರುವ ದುಃಖದ ಸಂಕೇತವಾಗಿದೆ. ಶೀಘ್ರದಲ್ಲೇ ಯಾವುದೇ ಕೆಟ್ಟ ಸುದ್ದಿಯನ್ನು ಕೇಳಲಿದ್ದೀರಿ ಎಂದರ್ಥ.

Vastu Tips

ಮಳೆ ಹನಿ

ಕನಸಿನಲ್ಲಿ ಮಳೆ ಹನಿಗಳನ್ನು ನೋಡುವುದು ಉತ್ತಮ ಸಂಕೇತ. ಕನಸಿನಲ್ಲಿ ಮಳೆಯ ಹನಿಗಳನ್ನು ನೋಡಿದರೆ ಹಿಂದಿನ ಸಮಸ್ಯೆಗಳು ಬಹುಬೇಗನೆ ನಿವಾರಣೆಯಾಗುತ್ತದೆ ಎಂದರ್ಥ.

ನದಿ ನೀರು

ಕನಸಿನಲ್ಲಿ ನದಿ ನೀರನ್ನು ನೋಡಿದರೆ ಅದು ಒಳ್ಳೆಯ ಸಂಕೇತ. ನದಿ ನೀರನ್ನು ಕನಸಿನಲ್ಲಿ ಕಂಡರೆ ಆಸೆ ಆಕಾಂಕ್ಷೆಗಳು ಬಹುಬೇಗ ಈಡೇರಿ ಅದೃಷ್ಟ ಬದಲಾಗುತ್ತದೆ ಎನ್ನಲಾಗುತ್ತದೆ.

ಸಮುದ್ರದ ನೀರು

ಸಮುದ್ರದ ನೀರನ್ನು ಕನಸಿನಲ್ಲಿ ಕಂಡರೆ ಏನೋ ತಪ್ಪು ನಿಮ್ಮಿಂದಾಗಿದೆ ಎಂದರ್ಥ. ಇದನ್ನು ಶೀಘ್ರದಲ್ಲೇ ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು.

ಶುದ್ಧ ನೀರು

ಶುದ್ಧ ನೀರಿನ ಕನಸು ಬಿದ್ದರೆ ಉತ್ತಮ ಅವಕಾಶಗಳು ಲಭ್ಯವಾಗಲಿದೆ ಎಂದರ್ಥ. ಯಶಸ್ಸು ಶೀಘ್ರದಲ್ಲೇ ಸಿಗಲಿದೆ ಎಂಬುದನ್ನು ಇದು ಸೂಚಿಸುತ್ತದೆ.

ಕೆಸರಿನ ನೀರು

ಕೊಳಕು ಮತ್ತು ಕಲುಷಿತ ನೀರು ಕನಸಿನಲ್ಲಿ ಬಂದರೆ ಜೀವನದಲ್ಲಿ ಶೀಘ್ರದಲ್ಲೇ ಬಹಳಷ್ಟು ತೊಂದರೆಗಳಿವೆ ಎಂದರ್ಥ. ಹೀಗಾಗಿ ಶುಭ ಕಾರ್ಯವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಅದನ್ನು ಸ್ವಲ್ಪ ಸಮಯದವರೆಗೆ ಮುಂದೂಡುವುದು ಉತ್ತಮ.

ಕುದಿಯುವ ಬಿಸಿ ನೀರು

ಕನಸಿನಲ್ಲಿ ಬಿಸಿ ನೀರು ಕುದಿಯುತ್ತಿರುವುದನ್ನು ನೋಡಿದರೆ ನಿಮ್ಮೊಳಗೆ ಭಾವನೆಗಳ ಪ್ರವಾಹ ಉಂಟಾಗುತ್ತಿದೆ. ಇದು ದೊಡ್ಡ ನಷ್ಟವನ್ನು ಸೂಚಿಸುವ ಲಕ್ಷಣವಾಗಿದೆ.

Vastu Tips

ಜಲಪಾತ

ಎತ್ತರದಿಂದ ನೀರು ಕೆಳಗೆ ಬೀಳುವುದನ್ನು ನೋಡಿದರೆ ಇದು ಅನಾರೋಗ್ಯವನ್ನು ಸೂಚಿಸುತ್ತದೆ. ದೀರ್ಘಕಾಲದ ಕಾಯಿಲೆ ಉಲ್ಬಣಗೊಳ್ಳುವ ಸಂಕೇತವಾಗಿದೆ.

ಅಲೆಗಳ ಶಬ್ದ

ಕನಸಿನಲ್ಲಿ ನೀರು, ಸಮುದ್ರದ ಅಲೆಗಳ ಶಬ್ದವನ್ನು ಕೇಳಿದರೆ ಜೀವನವು ಶಾಂತಿಯುತವಾಗಿ ನಡೆಯುತ್ತಿದೆ, ಯಾವುದೇ ನೋವು ಇಲ್ಲ ಎಂದು ಅರ್ಥ.

Vastu Tips: ಸಂಪತ್ತು, ಸಂತೋಷವನ್ನೂ ತರಬಲ್ಲದು ಗೋಡೆ ಗಡಿಯಾರ!

ಸುನಾಮಿ

ಕನಸು ಸುನಾಮಿ ದುರಂತವನ್ನು ತೋರಿಸಿದರೆ ಶೀಘ್ರದಲ್ಲೇ ಅನಿರೀಕ್ಷಿತವಾಗಿ ತುಂಬಾ ಕೆಟ್ಟ ಪರಿಸ್ಥಿತಿ ಎದುರಾಗಿಳಿದೆ ಎಂಬುದನ್ನು ಸೂಚಿಸುತ್ತದೆ.