Sunday, 15th December 2024

Vastu Tips: ಮನೆಗೆ ಸಮೃದ್ಧಿ ತರುವ ಮನಿ ಪ್ಲಾಂಟ್ ನೆಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Vastu Tips

ಹಣದ ಗಿಡ (Money plant) ಎಂದೇ ಕರೆಯಲ್ಪಡುವ ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಹಣದ ಸಮಸ್ಯೆ (Money problem) ಎಂದಿಗೂ ಬರುವುದಿಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips). ಆದರೆ ಈ ಗಿಡವನ್ನು ನೆಡುವಾಗ ಕೆಲವೊಂದು ವಾಸ್ತು ನಿಯಮಗಳನ್ನು ಅನುಸರಿಸಬೇಕು. ಇಲ್ಲವಾದರೆ ಸರಿಯಾದ ಫಲ ಸಿಗಲಾರದು ಎನ್ನುತ್ತಾರೆ ವಾಸ್ತು ತಜ್ಞರು.

ಹೆಚ್ಚಾಗಿ ಮನೆ ಅಥವಾ ಕಚೇರಿಯಲ್ಲಿ ಮನಿ ಪ್ಲಾಂಟ್ ನೆಡಲಾಗುತ್ತದೆ. ಈ ಸಸ್ಯ ಮನೆಯನ್ನು ಸುಂದರಗೊಳಿಸುವುದು ಮಾತ್ರವಲ್ಲದೆ ನೆಡುವುದು, ಆರೈಕೆ ಮಾಡುವುದು ಕೂಡ ಸುಲಭವಾಗಿದೆ. ಈ ಸಸ್ಯಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಅದನ್ನು ಯಾವುದೇ ಬಾಟಲಿ ಅಥವಾ ಹೂವಿನ ಪಾತ್ರೆಯಲ್ಲಿ ಇಡಬಹುದು.

ವಾಸ್ತು ಪ್ರಕಾರ ಮನಿ ಪ್ಲಾಂಟ್ ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಆದರೆ ಮನಿ ಪ್ಲಾಂಟ್ ಅನ್ನು ನೆಡುವಾಗ ಈ ನಿಯಮಗಳನ್ನು ಅನುಸರಿಸಿ. ಇದರಿಂದ ಎಂದಿಗೂ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ.

Vastu Tips

ಕದ್ದ ಮನಿ ಪ್ಲಾಂಟ್ ನೆಡಬೇಡಿ

ಕದ್ದ ಮನಿ ಪ್ಲಾಂಟ್ ಅನ್ನು ಎಂದಿಗೂ ನೆಡಬಾರದು. ಹಾಗೆ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ನಕಾರಾತ್ಮಕತೆ ಮತ್ತು ಆರ್ಥಿಕ ತೊಂದರೆಗಳಿಗೆ ಕಾರಣವಾಗುತ್ತದೆ.

ನೆಲಕ್ಕೆ ತಾಗದಿರಲಿ

ಮನಿ ಪ್ಲಾಂಟ್ ವೇಗವಾಗಿ ಬೆಳೆಯುತ್ತದೆ. ಆದ್ದರಿಂದ, ಸಸ್ಯದ ಬಳ್ಳಿಗಳು ನೆಲಕ್ಕೆ ತಾಗದಂತೆ ನೋಡಿಕೊಳ್ಳಿ. ಅದರ ಬಳ್ಳಿಗಳು ಮೇಲಕ್ಕೆ ಏರುವಂತೆ ಹಗ್ಗದ ಮೂಲಕ ಸಹಾಯ ಮಾಡಬೇಕು. ವಾಸ್ತು ಪ್ರಕಾರ, ಬೆಳೆಯುತ್ತಿರುವ ಬಳ್ಳಿಗಳು ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಮನಿ ಪ್ಲಾಂಟ್ ಲಕ್ಷ್ಮಿ ದೇವಿಯ ರೂಪವೆಂದು ನಂಬಲಾಗಿದೆ ಮತ್ತು ಈ ಕಾರಣಕ್ಕಾಗಿ ಅದನ್ನು ನೆಲವನ್ನು ಸ್ಪರ್ಶಿಸಲು ಬಿಡಬಾರದು. ಒಂದು ವೇಳೆ ಮನಿ ಪ್ಲಾಂಟ್ ನ ಬಳ್ಳಿ ನೆಲಕ್ಕೆ ತಾಗಿದರೆ ಅದು ಅಶುಭವೆಂದು ಪರಿಗಣಿಸಲಾಗಿದೆ.

ಅತ್ಯುತ್ತಮ ಸ್ಥಳ

ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ನೆಡಿ. ಈ ಸ್ಥಳವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಧನಾತ್ಮಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.

ಪಾತ್ರೆ ಆಯ್ಕೆ

ಮನಿ ಪ್ಲಾಂಟ್ ಅನ್ನು ನೇರವಾಗಿ ಮಣ್ಣಿನಲ್ಲಿ ನೆಡುವುದು ಒಳ್ಳೆಯದಲ್ಲ. ಬದಲಿಗೆ, ಮಣ್ಣಿನ ಮಡಕೆ ಅಥವಾ ಗಾಜಿನ ಬಾಟಲಿಯನ್ನು ಬಳಸಿ. ಇದರಿಂದ ಸಸ್ಯ ಚೆನ್ನಾಗಿ ಬಾಳುವುದು ಮಾತ್ರವಲ್ಲ ನೋಡಲು ಆಕರ್ಷಕವಾಗಿ ಕಾಣುವುದು.

Vastu Tips

ಈ ದಿಕ್ಕಿನಲ್ಲಿ ನೆಡಬೇಡಿ

ಮನಿ ಪ್ಲಾಂಟ್‌ಗಳನ್ನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ನೆಡಬೇಕು. ಅದನ್ನು ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಆರ್ಥಿಕ ನಷ್ಟವಾಗುತ್ತದೆ. ಇದಲ್ಲದೆ, ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಮನಿ ಪ್ಲಾಂಟ್‌ಗಳನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಗಣೇಶನು ಈ ದಿಕ್ಕಿನಲ್ಲಿ ನೆಲೆಸಿರುವ ದೇವರು. ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಇದು ಆಕರ್ಷಿಸುತ್ತದೆ.

ಒಣಗಲು ಬಿಡಬೇಡಿ

ವಾಸ್ತು ಪ್ರಕಾರ ಒಣಗಿದ ಮನಿ ಪ್ಲಾಂಟ್ ದುರದೃಷ್ಟದ ಸಂಕೇತ. ಇದು ಮನೆಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ಮನಿ ಪ್ಲಾಂಟ್‌ಗೆ ನಿಯಮಿತವಾಗಿ ನೀರುಣಿಸುತ್ತಿರಿ. ಎಲೆಗಳು ಒಣಗಲು ಪ್ರಾರಂಭಿಸಿದರೆ ಅವುಗಳನ್ನು ಕತ್ತರಿಸಿ ತೆಗೆದುಹಾಕಿ.

Vastu Tips: ಕನಸಿನಲ್ಲಿ ನೀರು ಕಂಡರೆ ಶುಭವೇ ಅಥವಾ ಅಶುಭವೇ?

ಮನೆಯ ಹೊರಗೆ ಇಡಬೇಡಿ

ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆಯೊಳಗೆ ಇಟ್ಟುಕೊಳ್ಳಿ. ಈ ಸಸ್ಯಕ್ಕೆ ಹೆಚ್ಚು ಸೂರ್ಯನ ಬೆಳಕು ಅಗತ್ಯವಿಲ್ಲ, ಆದ್ದರಿಂದ ಇದನ್ನು ಮನೆಯೊಳಗೆ ನೆಡಬೇಕು. ವಾಸ್ತು ಪ್ರಕಾರ ಮನಿ ಪ್ಲಾಂಟ್ ಅನ್ನು ಮನೆಯ ಹೊರಗೆ ನೆಡುವುದು ಶುಭವಲ್ಲ. ಇದು ಹೊರಗಿನ ವಾತಾವರಣದಲ್ಲಿ ಬೇಗ ಒಣಗುತ್ತದೆ ಮತ್ತು ಬೆಳೆಯುವುದಿಲ್ಲ. ಗಿಡದ ಬೆಳವಣಿಗೆ ಕುಂಠಿತವಾಗುವುದು ಅಶುಭ ಎಂದು ಪರಿಗಣಿಸಲಾಗಿದೆ. ಇದು ಆರ್ಥಿಕ ಕೊರತೆಗೆ ಕಾರಣವಾಗುತ್ತದೆ.

ಇತರರಿಗೆ ನೀಡಬೇಡಿ

ವಾಸ್ತು ಪ್ರಕಾರ ಮನಿ ಪ್ಲಾಂಟ್‌ಗಳನ್ನು ಇತರರಿಗೆ ನೀಡಬಾರದು. ಇದು ಶುಕ್ರ ಗ್ರಹವನ್ನು ಕೋಪಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಶುಕ್ರವು ಸಮೃದ್ಧಿ ಮತ್ತು ಯೋಗಕ್ಷೇಮದ ಸಂಕೇತವಾಗಿದೆ.