Sunday, 17th November 2024

Vastu Tips: ಮಲಗುವ ಕೋಣೆಯಲ್ಲಿ ಇರುತ್ತೆ ದಂಪತಿಯ ನಡುವೆ ಜಗಳಕ್ಕೆ ಪ್ರೇರೇಪಿಸುವ ಅಂಶಗಳು!

Vastu Tips

ದಂಪತಿಯ ನಡುವೆ ಪದೇಪದೇ ಜಗಳವಾಗುತ್ತಿರುವುದಕ್ಕೆ ಮನೆಯಲ್ಲಿರುವ ವಾಸ್ತು ದೋಷವೂ ಕಾರಣವಾಗಿರುತ್ತದೆ. ಮಲಗುವ ಕೋಣೆಯಲ್ಲಿ ಕೆಲವೊಂದು ವಾಸ್ತು ತತ್ತ್ವಗಳನ್ನು (Vastu Tips) ಅಳವಡಿಸುವುದರಿಂದ ದಂಪತಿಯ ನಡುವೆ ಸುಮಧುರ ಸಂಬಂಧ ಏರ್ಪಡುವಂತೆ ಮಾಡಬಹುದು.

ಮಲಗುವ ಕೋಣೆಯಲ್ಲಿ ವಿಶ್ರಾಂತಿ, ಶಾಂತಿ ಮತ್ತು ಬಾಂಧವ್ಯಕ್ಕಾಗಿ ದಂಪತಿಯು ಮಲಗುವ ಕೋಣೆಯಲ್ಲಿ ವಾಸ್ತು ತತ್ತ್ವಗಳನ್ನು ಅಳವಡಿಸುವುದು ಬಹುಮುಖ್ಯವಾಗಿದೆ.

ಸಂಗಾತಿಯೊಂದಿಗೆ ಆಗಾಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ದರೆ ಮಲಗುವ ಕೋಣೆಯಲ್ಲಿ ಕೆಲವು ಸಾಮಾನ್ಯ ವಾಸ್ತು ದೋಷಗಳಿವೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ತಪ್ಪುಗಳನ್ನು ತಪ್ಪಿಸಲು ಮತ್ತು ಸಂಬಂಧದಲ್ಲಿ ಹೆಚ್ಚು ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ತರಲು ಕೆಲವು ವಾಸ್ತು ಸಲಹೆಗಳನ್ನು ಪಾಲಿಸಿ.

Vastu Tips

ಹಾಸಿಗೆಯ ಸ್ಥಾನ

ಮಲಗುವ ಕೋಣೆಯಲ್ಲಿನ ಹಾಸಿಗೆಯ ಸ್ಥಾನವು ಶಕ್ತಿಯ ಹರಿವಿನ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಉಂಟು ಮಾಡುತ್ತದೆ.

ಹಾಸಿಗೆಯನ್ನು ನೇರವಾಗಿ ಬಾಗಿಲಿನ ಎದುರು ಇಡಬಾರದು. ಮಲಗುವಾಗ ತಲೆಯು ಉತ್ತರ ದಿಕ್ಕಿಗೆ ಹಾಕಬಾರದು. ಒಂದು ವೇಳೆ ಈ ತಪ್ಪುಗಳನ್ನು ಮಾಡಿದರೆ ನಿದ್ರೆಗೆ ತೊಂದರೆಯಾಗಬಹುದು, ಸಂಗಾತಿಯೊಂದಿಗೆ ಜಗಳಕ್ಕೆ ಕಾರಣವಾಗಬಹುದು.

ಮಲಗುವಾಗ ತಲೆಯು ದಕ್ಷಿಣ ಅಥವಾ ಪೂರ್ವಕ್ಕೆ ಮುಖ ಮಾಡುವಂತೆ ಹಾಸಿಗೆಯನ್ನು ಇರಿಸಿ. ಹಾಸಿಗೆಯನ್ನು ಮಲಗುವ ಕೋಣೆಯ ಬಾಗಿಲು ಅಥವಾ ಕಿಟಕಿಯೊಂದಿಗೆ ಜೋಡಿಸುವುದನ್ನು ತಪ್ಪಿಸಿ. ಯಾಕೆಂದರೆ ಅದು ದುರ್ಬಲತೆಯ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಸ್ವಚ್ಛವಾಗಿರಲಿ

ಮಲಗುವ ಕೊನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸಲು ವಾಸ್ತು ಶಾಸ್ತ್ರವು ಗೊಂದಲ ಮುಕ್ತ ವಾತಾವರಣಕ್ಕೆ ಆದ್ಯತೆ ನೀಡುವಂತೆ ಹೇಳುತ್ತದೆ.

ಹಾಸಿಗೆಯ ಕೆಳಗೆ ಹಳೆಯ ಬಟ್ಟೆ, ಬೂಟು ಅಥವಾ ಮುರಿದ ವಸ್ತುಗಳನ್ನು ಇಡಬೇಡಿ. ಈ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದು ದಂಪತಿಯ ನಡುವೆ ಕಿರಿಕಿರಿ ಅಥವಾ ಪರಿಹರಿಸಲಾಗದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಹಾಸಿಗೆಯ ಕೆಳಗಿರುವ ಜಾಗವನ್ನು ವಸ್ತುಗಳ ಶೇಖರಣೆಗಾಗಿ ಬಳಸುವುದನ್ನು ತಪ್ಪಿಸಿ. ಧನಾತ್ಮಕ ಶಕ್ತಿಯ ಮುಕ್ತ ಹರಿವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಸಂಗಾತಿಯ ನಡುವಿನ ಭಾವನಾತ್ಮಕ ಗೊಂದಲವನ್ನು ಕಡಿಮೆ ಮಾಡಲು ಈ ಪ್ರದೇಶವನ್ನು ಸ್ವಚ್ಛವಾಗಿ ಮತ್ತು ಖಾಲಿಯಾಗಿ ಇರಿಸಿ.

Vastu Tips

ಕನ್ನಡಿಗಳು

ಕನ್ನಡಿಗಳು ಶಕ್ತಿಯುತವಾದ ಶಕ್ತಿ ಪ್ರತಿಫಲಕಗಳಾಗಿವೆ. ಅವುಗಳನ್ನು ಸರಿಯಾಗಿ ಇರಿಸದೇ ಇದ್ದರೆ ಚಡಪಡಿಕೆಯನ್ನು ಉಂಟುಮಾಡಬಹುದು ಮತ್ತು ನಕಾರಾತ್ಮಕ ಶಕ್ತಿಯನ್ನು ವರ್ಧಿಸಬಹುದು.

ಹಾಸಿಗೆಯನ್ನು ನೇರವಾಗಿ ಪ್ರತಿಬಿಂಬಿಸುವ ಕನ್ನಡಿ ಸಾಮರಸ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಸಂಘರ್ಷವನ್ನು ಹೆಚ್ಚಿಸುತ್ತದೆ.

ಹಾಸಿಗೆಯನ್ನು ನೇರವಾಗಿ ಪ್ರತಿಬಿಂಬಿಸುವಲ್ಲಿ ಕನ್ನಡಿಯನ್ನು ಇಡುವುದನ್ನು ತಪ್ಪಿಸಿ. ಇದು ಅನಿವಾರ್ಯವಾದರೆ ಮಲಗಿರುವಾಗ ಕನ್ನಡಿಯನ್ನು ಮುಚ್ಚಿ. ಮಲಗುವ ವ್ಯಕ್ತಿಯನ್ನು ಪ್ರತಿಬಿಂಬ ಶಕ್ತಿಯನ್ನು ಕುಂದಿಸುತ್ತದೆ ಮತ್ತು ಮನ ಶಾಂತಿಯನ್ನು ಹಾಳು ಮಾಡುತ್ತದೆ.

ಗೊಂದಲದ ಕಲಾಕೃತಿ

ಮಲಗುವ ಕೊನೆಯಲ್ಲಿ ಇರಿಸುವ ಚಿತ್ರವು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ದುಃಖ, ಒಂಟಿತನ ಅಥವಾ ಆಕ್ರಮಣಶೀಲತೆಯನ್ನು ಚಿತ್ರಿಸುವ ಕಲೆಯು ಸಂಬಂಧದ ಮೇಲೂ ಪರಿಣಾಮ ಬೀರುತ್ತವೆ.

ಪ್ರೀತಿ, ಒಗ್ಗಟ್ಟು ಮತ್ತು ಶಾಂತಿಯನ್ನು ಪ್ರತಿನಿಧಿಸುವ ಹಿತವಾದ ಕಲಾಕೃತಿಯನ್ನು ಮಲಗುವ ಕೊನೆಯಲ್ಲಿ ಇರಿಸಿ. ಸುಂದರವಾದ ಭೂದೃಶ್ಯಗಳು, ಜೋಡಿ ಚಿತ್ರಣಗಳು ಅಥವಾ ಪ್ರಶಾಂತವಾದ ಪ್ರಕೃತಿಯ ದೃಶ್ಯಗಳು ಸೂಕ್ತ. ಇವು ಸಂಬಂಧದಲ್ಲಿ ಸಕಾರಾತ್ಮಕತೆ ಮತ್ತು ಶಾಂತತೆಯನ್ನು ಉತ್ತೇಜಿಸುತ್ತವೆ.

ಎಲೆಕ್ಟ್ರಾನಿಕ್ ಸಾಧನಗಳು

ಎಲೆಕ್ಟ್ರಾನಿಕ್ಸ್ ವಸ್ತುಗಳು ವಿಕಿರಣ ಮತ್ತು ವಿದ್ಯುತ್ಕಾಂತೀಯ ತರಂಗಗಳನ್ನು ಹೊರಸೂಸುತ್ತದೆ. ಇದು ವಿಶ್ರಾಂತಿ, ನಿದ್ರೆ ಮತ್ತು ಭಾವನಾತ್ಮಕ ಸಮತೋಲನಕ್ಕೆ ಅಗತ್ಯವಾದ ಶಾಂತ ಶಕ್ತಿಯ ಹರಿವಿಗೆ ಅಡ್ಡಿಯುಂಟು ಮಾಡುತ್ತದೆ.

ಮಲಗುವ ಕೋಣೆಯನ್ನು ಸಾಧ್ಯವಾದಷ್ಟು ಗ್ಯಾಜೆಟ್ ಮುಕ್ತವಾಗಿಡಿ. ವಿಶೇಷವಾಗಿ ಹಾಸಿಗೆಯ ಸಮೀಪವಿರುವ ಪ್ರದೇಶ. ಎಲೆಕ್ಟ್ರಾನಿಕ್ಸ್‌ಗಾಗಿ ಮಲಗುವ ಕೋಣೆಯ ಹೊರಗೆ ಜಾಗವನ್ನು ಮೀಸಲಿಡಿ.

ಅಸಮರ್ಪಕ ಬೆಳಕು ಮತ್ತು ಗಾಢ ಬಣ್ಣಗಳು

ಮಲಗುವ ಕೋಣೆಯ ಬೆಳಕು ಮತ್ತು ಬಣ್ಣಗಳು ಮನಸ್ಥಿತಿ ಮತ್ತು ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ತುಂಬಾ ಕತ್ತಲೆ ಅಥವಾ ಕಠಿಣ ಬೆಳಕು ಉದ್ವೇಗ ಅಥವಾ ಚಡಪಡಿಕೆಯನ್ನು ಉಂಟು ಮಾಡುತ್ತದೆ.

ಮಲಗುವ ಕೋಣೆಯಲ್ಲಿ ಹಿತವಾದ ಬೆಳಕನ್ನು ಬಳಸಿ. ಅದು ಸ್ನೇಹಶೀಲ ವಾತಾವರಣವನ್ನು ಸೃಷ್ಟಿಸುತ್ತದೆ. ಶಾಂತ ವಾತಾವರಣವನ್ನು ಕಾಪಾಡಿಕೊಳ್ಳಲು ನೀಲಿ ಬಣ್ಣವನ್ನು ಆಯ್ಕೆ ಮಾಡಿ. ಗೋಡೆ, ಅಲಂಕಾರಕ್ಕೆ ತಿಳಿ ಬಣ್ಣಗಳನ್ನು ಆಯ್ಕೆ ಮಾಡಿ.

ತಾಜಾ ಗಾಳಿ ಮತ್ತು ನೈಸರ್ಗಿಕ ಬೆಳಕು

ಮಲಗುವ ಕೋಣೆಗೆ ತಾಜಾ ಗಾಳಿ, ಬೆಳಕು ಬರುವಂತಿರಲಿ. ಯಾಕೆಂದರೆ ಇದು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಕೋಣೆಯ ಕಿಟಕಿಗಳನ್ನು ಎಲ್ಲಾ ಸಮಯದಲ್ಲೂ ಮುಚ್ಚುವುದು ಅಥವಾ ಪರದೆಗಳನ್ನು ಹಾಕಿರುವುದು ತಾಜಾ ಗಾಳಿ ಮತ್ತು ಸೂರ್ಯನ ಬೆಳಕಿನ ಹರಿವಿಗೆ ನಿರ್ಬಂಧ ಉಂಟು ಮಾಡುತ್ತದೆ. ನೈಸರ್ಗಿಕ ಗಾಳಿ, ಬೆಳಕು ಕೊಠಡಿಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.

Vastu Tips: ಮನೆಯ ಪ್ರವೇಶ ದ್ವಾರದಲ್ಲಿ ಕನ್ನಡಿ ಇಡಬಹುದೇ?

Vastu Tips

ಎರಡು ಮಂಚದ ಮೇಲೆ ಒಂದು ಹಾಸಿಗೆ

ಒಂದೇ ಹಾಸಿಗೆ ಏಕತೆ ಮತ್ತು ಸಾಮರಸ್ಯವನ್ನು ಸೂಚಿಸುತ್ತದೆ. ಆದರೆ ಎರಡು ಪ್ರತ್ಯೇಕ ಹಾಸಿಗೆಗಳು ವಿಭಜನೆಯನ್ನು ಸಂಕೇತಿಸುತ್ತವೆ. ದಂಪತಿ ಸಾಮಾನ್ಯವಾಗಿ ವೈಯಕ್ತಿಕ ಸೌಕರ್ಯಕ್ಕಾಗಿ ಎರಡು ಮಂಚದ ಮೇಲೆ ಎರಡು ಸಿಂಗಲ್ ಹಾಸಿಗೆಗಳನ್ನು ಬಳಸುತ್ತಾರೆ. ಆದರೆ ಇದು ಪ್ರತ್ಯೇಕತೆಯನ್ನು ಪ್ರತಿನಿಧಿಸುತ್ತದೆ. ಏಕತೆಯನ್ನು ಪ್ರತಿನಿಧಿಸಲು ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಉತ್ತೇಜಿಸಲು ಒಂದು ಮಂಚಕ್ಕೆ ಒಂದೇ ಬೆಡ್ ಬಳಸಿ.

ನೀರಿನ ಹರಿವು

ನೀರು ಹರಿವು ಶಕ್ತಿಯ ಸಂಕೇತವಾಗಿದ್ದರೂ ಮಲಗುವ ಕೋಣೆಯಲ್ಲಿ ಇರಿಸಿದಾಗ ಅದು ಸಮತೋಲನಕ್ಕೆ ತೊಂದರೆ ಉಂಟು ಮಾಡುತ್ತದೆ. ಇದು ಭಾವನೆಗಳನ್ನು ಪ್ರಚೋದಿಸುತ್ತದೆ. ಮಲಗುವ ಕೋಣೆಯಲ್ಲಿ ಅಕ್ವೇರಿಯಂ, ನೀರಿನ ಕಾರಂಜಿಗಳನ್ನು ಇರಿಸುವುದು ಸಾಮರಸ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ.