ಮನೆ ಕಟ್ಟುವಾಗ ಮನೆಯ ವಿನ್ಯಾಸ ಮತ್ತು ವಸ್ತುಗಳ ಬಗ್ಗೆ ಮಾತ್ರ ಕಾಳಜಿ ವಹಿಸೋದಲ್ಲ. ವಾಸ್ತು ನಿಯಮಗಳನ್ನು (Vastu Tips) ಅನುಸರಿಸಬೇಕು. ಯಾಕೆಂದರೆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಗಾಗಿ ಹಲವಾರು ಅಂಶಗಳನ್ನು ಪರಿಗಣಿಸುವುದು ಮುಖ್ಯವಾಗಿರುತ್ತದೆ. ಇದರಲ್ಲಿ ವಾಸ್ತು ನಿಯಮಗಳ ಪಾಲನೆಯಿಂದ ಮನೆಯಲ್ಲಿ ಧನಾತ್ಮಕತೆ (positivity) ವೃದ್ಧಿಸುತ್ತದೆ.
ಮನೆಯನ್ನು, ಮನೆಯವರನ್ನು ಸಂತೋಷವಾಗಿರಿಸುವುದು ಅಡುಗೆ ಮನೆ (Kitchen vastu). ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಡುಗೆ ಮನೆಯನ್ನು ನಿರ್ಮಿಸುವಾಗ ಅದರ ಬಾಗಿಲಿನ ಚೌಕಟ್ಟಿಗೆ ವಿಶೇಷ ಪ್ರಾಮುಖ್ಯತೆ ನೀಡಬೇಕು.
ಅಡುಗೆ ಮನೆಯ ಬಾಗಿಲು ಸರಿಯಾದ ದಿಕ್ಕಿನಲ್ಲಿಲ್ಲದಿದ್ದರೆ ಆಗ ಮನೆಯಲ್ಲಿ ನಕಾರಾತ್ಮಕತೆ ಉಂಟು ಮಾಡುತ್ತದೆ ಮತ್ತು ಮನೆಯಲ್ಲಿ ಅಡೆತಡೆಗಳು ಪ್ರಾರಂಭವಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ಆಧುನಿಕ ಮನೆಗಳಲ್ಲಿ ತೆರೆದ ಅಡುಗೆ ಮನೆಯ ಹೆಚ್ಚು ಪ್ರಚಲಿತದಲ್ಲಿದೆ. ಆದರೆ ಇದರ ಹೊರತಾಗಿಯೂ ಹೆಚ್ಚಿನವರು ಅಡುಗೆ ಮನೆಯ ಬಾಗಿಲಿಗೆ ವಿಶೇಷ ಪ್ರಾಧಾನ್ಯತೆ ನೀಡುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯ ಬಾಗಿಲು ನಿರ್ಧಿಷ್ಟ ದಿಕ್ಕಿನಲ್ಲಿ ಇರಬೇಕು. ಇಲ್ಲವಾದರೆ ಮನೆ, ಮನಸ್ಸಿನ ಮೇಲೆ ಇದು ಪರಿಣಾಮ ಬೀರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಡುಗೆ ಮನೆಯ ಬಾಗಿಲು ಯಾವಾಗಲೂ ಪೂರ್ವ, ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಒಂದು ವೇಳೆ ಅಡುಗೆ ಮನೆ ತೆರೆದಿದ್ದರೆ ಪೂರ್ವ ದಿಕ್ಕು ಅದು ತೆರೆದಿರುವ ಬದಿಯ ಮುಂದೆ ಇರಬೇಕು. ಇದಲ್ಲದೆ ಉತ್ತರ ದಿಕ್ಕಿಗೆ ಕೂಡ ಅಡುಗೆ ಮನೆಯ ಪ್ರವೇಶವನ್ನು ತೆರೆದಿರುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮ ಶಾಸ್ತ್ರದಲ್ಲಿ ಅಡುಗೆ ಮನೆಗೆ ಹೆಚ್ಚು ಪ್ರಾಧಾನ್ಯತೆ ಇದೆ. ಯಾಕೆಂದರೆ ಇಲ್ಲಿ ಎಲ್ಲ ಗ್ರಹಗಳು ಒಟ್ಟಿಗೆ ವಾಸಿಸುತ್ತವೆ. ಇದು ತಾಯಿ ಅನ್ನಪೂರ್ಣೆ ವಾಸ ಮಾಡುವ ಸ್ಥಳವೆಂದು ಪರಿಗಣಿಸಲಾಗಿದೆ. ಅಲ್ಲದೇ ತಾಯಿ ಲಕ್ಷ್ಮಿಯು ಅಡುಗೆ ಮನೆಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾಳೆ ಎಂದು ಪರಿಗಣಿಸಲಾಗಿದೆ.
ಧರ್ಮಗ್ರಂಥಗಳ ಪ್ರಕಾರ ಇದು ಕೇವಲ ಆಹಾರಕ್ಕಾಗಿ ಮಾತ್ರವಲ್ಲದೆ ಸಂಪತ್ತು, ಸಂತೋಷ, ಸಮೃದ್ಧಿಯ ಪ್ರಧಾನ ಸ್ಥಳವೆಂದು ಪರಿಗಣಿಸಲಾಗಿದೆ.
ಅಡುಗೆ ಮನೆಯ ಬಾಗಿಲು ವಾಸ್ತು ಶಾಸ್ತ್ರ ಸೂಚಿಸಿರುವ ದಿಕ್ಕುಗಳಿಗೆ ಅನುಸಾರವಾಗಿಲ್ಲದಿದ್ದಲ್ಲಿ ಅಂದರೆ ದಕ್ಷಿಣ ಅಥವಾ ಪಶ್ಚಿಮದ ಕಡೆಗೆ ಇದ್ದರೆ ಮನೆಯಲ್ಲಿ ಅಡುಗೆ ಮಾಡುವ ಸ್ಥಳ ಯಾವಾಗಲೂ ಪೂರ್ವ, ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿರುವಂತೆ ಮಾಡಿ.
Vastu Tips: ಜಾಗವಿಲ್ಲವೆಂದು ದೇವರ ಮಂಟಪವನ್ನು ಗೋಡೆ ಮೇಲೆ ತೂಗು ಹಾಕುವುದು ಸರಿಯೇ?
ಅಲ್ಲದೇ ಅಡುಗೆಮನೆಯಲ್ಲಿ ಕಪ್ಪು ಎಳ್ಳು ಅಥವಾ ಕರಿಮೆಣಸಿನ ಕಟ್ಟುಗಳನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ವಾಸ್ತುದೋಷ ಉಂಟಾಗುವುದಿಲ್ಲ.