Thursday, 12th December 2024

Vastu Tips: ನವರಾತ್ರಿಯಲ್ಲಿ ಪಾಲಿಸಬೇಕಾದ ವಾಸ್ತು ನಿಯಮಗಳು

Vastu Tips

ಒಂಬತ್ತು ರಾತ್ರಿ ದೇವಿಯ ಒಂಬತ್ತು ರೂಪಗಳನ್ನು ಪೂಜಿಸುವ ನವರಾತ್ರಿಯ (Navaratri) ಪ್ರತಿಯೊಂದು ದಿನ ವಿಶೇಷವಾಗಿದೆ. ನಮ್ಮೊಳಗಿನ ಋಣಾತ್ಮಕತೆ (Negativity) ಕಳೆದು ಧನಾತ್ಮಕ ಶಕ್ತಿಯನ್ನು (Positive energy) ಪಡೆಯಲು ಇದು ಅತಂತ ಶುಭ ಸಮಯವಾಗಿದೆ. ಆದರೆ ಇದಕ್ಕಾಗಿ ಕೆಲವು ವಾಸ್ತು ತತ್ತ್ವಗಳನ್ನು (Vastu Tips) ಅಳವಡಿಸಿಕೊಳ್ಳಬೇಕಾಗುತ್ತದೆ.

ನವರಾತ್ರಿಯಲ್ಲಿ ಧನಾತ್ಮಕ ಶಕ್ತಿಯೊಂದಿಗೆ ಸಮೃದ್ಧಿಯನ್ನು ಪಡೆಯಲು ಮತ್ತು ಬದುಕಿನಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳನ್ನು ತೊಡೆದು ಹಾಕಲು ಜೀವನದಲ್ಲಿ ಕೆಲವು ವಾಸ್ತು ನಿಯಮಗಳನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿದೆ.

Vastu Tips

ಯಾವ ದಿಕ್ಕು?

ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಈ ಆಚರಣೆಗಳನ್ನು ಮಾಡುವಾಗ ದಿಕ್ಕಿಗೆ ಹೆಚ್ಚಿನ ಮಹತ್ವವಿದೆ.

ಪೂಜೆಯ ಸಮಯದಲ್ಲಿ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡುವುದು ಒಳ್ಳೆಯದು. ಪೂರ್ವಕ್ಕೆ ಮುಖ ಮಾಡುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇದು ಉದಯಿಸುವ ಸೂರ್ಯನನ್ನು ಸಂಕೇತಿಸುತ್ತದೆ. ಹೊಸ ಆರಂಭ ಮತ್ತು ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ.

ಉತ್ತರದ ಕಡೆಗೆ ಮುಖ ಮಾಡುವುದು ಸಮೃದ್ಧಿಯನ್ನು ಆಕರ್ಷಿಸುತ್ತದೆ. ಈ ದಿಕ್ಕು ಸಂಪತ್ತಿನ ದೇವತೆಯಾದ ಭಗವಾನ್ ಕುಬೇರನಿಗೆ ಸಂಬಂಧಿಸಿದೆ.

ತೋರಣ

ಮನೆಯ ಬಾಗಿಲಿಗೆ ಮಾವಿನ ಎಲೆಗಳನ್ನು ಕಟ್ಟುವುದು ಶುದ್ಧವೆಂದು ಪರಿಗಣಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ. ಮಾವಿನ ಎಲೆಗಳ ತೋರಣವನ್ನು ಬಾಗಿಲಿನಲ್ಲಿ ನೇತು ಹಾಕಿದರೆ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದಿಲ್ಲ. ಈ ಸಾಂಪ್ರದಾಯಿಕ ಅಭ್ಯಾಸವು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಸಮೃದ್ಧಿ ಮತ್ತು ಅದೃಷ್ಟವನ್ನು ಆಹ್ವಾನಿಸುತ್ತದೆ.

Vastu Tips

ಅಖಂಡ ಜ್ಯೋತಿ

ನವರಾತ್ರಿಯ ಒಂಬತ್ತು ದಿನಗಳ ಕಾಲ ಅಖಂಡ ಜ್ಯೋತಿ ಬೆಳಗಿಸುವುದು ಭಕ್ತಿ ಮತ್ತು ಆಧ್ಯಾತ್ಮಿಕ ಬದ್ಧತೆಯನ್ನು ಸಂಕೇತಿಸುತ್ತದೆ. ಇದು ನಕಾರಾತ್ಮಕತೆಯನ್ನು ನಿವಾರಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಇದು ದೇವಿಯ ಆಶೀರ್ವಾದ ಪಡೆಯಲು ಪ್ರಬಲ ಮಾರ್ಗವಾಗಿದೆ. ಎತ್ತರದ ವೇದಿಕೆಯಲ್ಲಿ ಇದನ್ನು ಇರಿಸುವುದು ಒಳ್ಳೆಯದು.

ಸ್ವಸ್ತಿಕ್ ಚಿಹ್ನೆ

ಮನೆಯ ದ್ವಾರದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಮಾಡುವುದರಿಂದ ಮನೆಗೆ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಇದಕ್ಕಾಗಿ ಅರಿಶಿನ ಅಥವಾ ಸಿಂಧೂರವನ್ನು ಬಳಸಿ ಈ ಚಿಹ್ನೆಯನ್ನು ರಚಿಸಬಹುದು. ಮನೆಯಲ್ಲಿ ವಾಸ್ತು ದೋಷಗಳನ್ನು ಸರಿಪಡಿಸಲು ಅಥವಾ ನಿವಾರಿಸಲು ಇದು ಸಹಾಯ ಮಾಡುತ್ತದೆ.

Vastu Tips: ಸಂಪತ್ತು, ಸಂತೋಷವನ್ನೂ ತರಬಲ್ಲದು ಗೋಡೆ ಗಡಿಯಾರ!

ಕರ್ಪೂರವನ್ನು ಉರಿಸುವುದು

ಸಂಜೆ ಆರತಿ ಸಮಯದಲ್ಲಿ ಕರ್ಪೂರವನ್ನು ಉರಿಸಿ. ಇದು ಹಲವಾರು ಆಧ್ಯಾತ್ಮಿಕ ಪ್ರಯೋಜನಗಳನ್ನು ನೀಡುತ್ತದೆ. ಕರ್ಪೂರವನ್ನು ತುಪ್ಪದೊಂದಿಗೆ ಸುಡುವುದು ಮನೆಯಲ್ಲಿನ ವಾಸ್ತು ದೋಷಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದು ನಕಾರಾತ್ಮಕ ಶಕ್ತಿಯನ್ನು ಓಡಿಸುತ್ತದೆ ಮತ್ತು ಅದೃಷ್ಟವನ್ನು ಆಕರ್ಷಿಸುತ್ತದೆ.