Monday, 18th November 2024

Vastu Tips: ಮನೆಗೆ ಸಕಾರಾತ್ಮಕತೆ, ಸಮೃದ್ಧಿ ತರುವ ಗಾಜು ಎಲ್ಲಿದ್ದರೆ ಸೂಕ್ತ?

Vastu Tips

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಗಾಜಿನ ವಸ್ತುಗಳು (Glass Items) ಇದ್ದೇ ಇರುತ್ತವೆ. ಹೆಚ್ಚಿನವರು ಇದನ್ನು ಅಲಂಕಾರಕ್ಕೆ ಬಳಸಿಕೊಳ್ಳುತ್ತಾರೆ. ಆದರೆ ಈ ಗಾಜಿನ ವಸ್ತುಗಳನ್ನು ಸರಿಯಾಗಿ ಇರಿಸದೇ ಇದ್ದರೆ ಅದು ಮನೆಯಲ್ಲಿ ನಕಾರಾತ್ಮಕತೆಯನ್ನು ತುಂಬಬಹುದು ಎನ್ನುತ್ತದೆ ವಾಸ್ತು (Vastu Tips) ಶಾಸ್ತ್ರ.

ಮನೆಯನ್ನು ಅಲಂಕರಿಸಲು ಗಾಜಿನ ವಸ್ತುಗಳನ್ನು ಬಳಸುವುದಾದರೆ ಅದನ್ನು ಸರಿಯಾಗಿ ಇರಿಸಿ. ಆಗ ಅದು ವಾಸಸ್ಥಳವನ್ನು ಸುಂದರಗೊಳಿಸುವುದು ಮಾತ್ರವಲ್ಲ ಸಕಾರಾತ್ಮಕತೆ ಮತ್ತು ಸಮೃದ್ಧಿಯ ಕೇಂದ್ರವನ್ನಾಗಿ ಮಾಡುತ್ತದೆ.

ಜ್ಯೋತಿಷಿ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ ಅವರು ಮನೆಯಲ್ಲಿ ಗಾಜಿನ ವಸ್ತುಗಳನ್ನು ಇಡಲು ಕೆಲವು ವಾಸ್ತು ಸಲಹೆಗಳನ್ನು ನೀಡಿರುವುದು ಹೀಗೆ..

ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತಪ್ಪಿಸಲು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಸ್ವಾಗತಿಸಲು ಗಾಜಿನ ವಸ್ತುಗಳು ಸಹಾಯ ಮಾಡುತ್ತದೆ. ಗಾಜು ವಿಶೇಷವಾಗಿ ಪಾರದರ್ಶಕವಾಗಿರುವುದರಿಂದ, ಬೆಳಕನ್ನು ಪ್ರತಿಬಿಂಬಿಸುತ್ತದೆ ಮತ್ತು ಮನೆಯಲ್ಲಿ ಪ್ರಕಾಶವನ್ನು ಹೆಚ್ಚಿಸುತ್ತದೆ. ಮನೆಯ ವಾತಾವರಣವನ್ನು ಸಂತೋಷ ಮತ್ತು ಸಮತೋಲಿತವಾಗಿ ಇರಿಸುತ್ತದೆ ಎನ್ನುತ್ತಾರೆ ಪಂಡಿತ್ ರಮೇಶ್.

Vastu Tips

ಗಾಜಿನ ವಸ್ತುಗಳ ಮಹತ್ವ

ವಾಸ್ತು ಶಾಸ್ತ್ರದಲ್ಲಿ ಗಾಜಿನ ವಸ್ತುಗಳಿಗೆ ವಿಶೇಷ ಮಹತ್ವವಿದೆ. ಗಾಜು ಒಂದು ಪಾರದರ್ಶಕ ವಸ್ತುವಾಗಿದೆ. ಇದು ಬೆಳಕನ್ನು ಪ್ರತಿಬಿಂಬಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡಲು ಸಹಾಯ ಮಾಡುತ್ತದೆ.

ಗಾಜಿನ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಇರಿಸಿದರೆ ಅದು ಮನೆಯ ವಾತಾವರಣವನ್ನು ಸಂತೋಷ ಮತ್ತು ಪ್ರಗತಿಪರವಾಗಿಸುತ್ತದೆ. ಈ ಕಾರಣಕ್ಕಾಗಿ ಗಾಜಿನ ವಸ್ತುಗಳನ್ನು ಇರಿಸಲು ಸರಿಯಾದ ದಿಕ್ಕನ್ನು ಆರಿಸುವುದು ಬಹಳ ಮುಖ್ಯ.

ಪ್ರತಿಯೊಂದು ದಿಕ್ಕು ಜೀವನದ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ ಮತ್ತು ಗಾಜಿನ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಬಹುದು.

ಎಲ್ಲಿ ಇಡಬಹುದು?

ಗಾಜಿನ ವಸ್ತುಗಳನ್ನು ಇಡಲು ಪೂರ್ವ ದಿಕ್ಕು ಅತ್ಯಂತ ಮಂಗಳಕರ. ಗಾಜಿನ ಅಲಂಕಾರಿಕ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ಉಂಟಾಗುತ್ತದೆ. ಪೂರ್ವ ದಿಕ್ಕು ಸೂರ್ಯನಿಗೆ ಸಂಬಂಧಿಸಿದೆ. ಇದು ಜೀವ ನೀಡುವ ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಗಾಜಿನ ಅಲಂಕಾರಿಕ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡುವುದರಿಂದ ನೈಸರ್ಗಿಕ ಬೆಳಕು ಮನೆಯೊಳಗೆ ನೇರವಾಗಿ ಪ್ರವೇಶಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಉಂಟು ಮಾಡುತ್ತದೆ.

ಗಾಜಿನ ವಸ್ತುಗಳನ್ನು ಇಡಲು ಉತ್ತರ ದಿಕ್ಕನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಈ ದಿಕ್ಕಿನಲ್ಲಿ ಗಾಜಿನ ವಸ್ತುಗಳನ್ನು ಇಡುವುದರಿಂದ ಕುಟುಂಬದ ಸದಸ್ಯರ ಆರ್ಥಿಕ ಸ್ಥಿತಿಯನ್ನು ಬಲವಾಗುತ್ತದೆ. ಹೊಸ ಉದ್ಯೋಗಾವಕಾಶಗಳನ್ನು ಒದಗಿ ಬರುತ್ತದೆ.

ಎಲ್ಲಿ ಇಡಬಾರದು?

ವಾಸ್ತು ಶಾಸ್ತ್ರದ ಪ್ರಕಾರ ಗಾಜಿನ ವಸ್ತುಗಳನ್ನು ಇಡಲು ದಕ್ಷಿಣ ದಿಕ್ಕನ್ನು ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಈ ದಿಕ್ಕಿನಲ್ಲಿ ಗಾಜನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುತ್ತದೆ. ಇದು ಕುಟುಂಬದ ಸದಸ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮನೆಯ ವಾತಾವರಣದಲ್ಲಿ ಉದ್ವಿಗ್ನತೆ ಮತ್ತು ಅಸಮತೋಲನಕ್ಕೆ ಕಾರಣವಾಗಬಹುದು. ಆದ್ದರಿಂದ ದಕ್ಷಿಣ ದಿಕ್ಕಿನಲ್ಲಿ ಯಾವುದೇ ರೀತಿಯ ಗಾಜಿನ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು ಎಂದು ಪಂಡಿತ್ ರಮೇಶ್.

ಅಲ್ಲದೇ ಗಾಜಿನ ವಸ್ತುಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಈ ದಿಕ್ಕಿಗೆ ಗಾಜನ್ನು ಇಡುವುದರಿಂದ ಮನೆಯ ಸದಸ್ಯರ ನಡುವಿನ ಸಂಬಂಧ ಹಳಸಬಹುದು. ಕುಟುಂಬದ ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Vastu Tips

ಕನ್ನಡಿ ಎಲ್ಲಿ ಇಡಬಹುದು?

ಮನೆಯಲ್ಲಿ ಕನ್ನಡಿಗೆ ಸರಿಯಾದ ಸ್ಥಳವನ್ನು ಹೊಂದಿರುವುದು ಬಹಳ ಮುಖ್ಯ. ಯಾಕೆಂದರೆ ಕನ್ನಡಿಯಿಂದ ಬರುವ ಶಕ್ತಿಯು ಮನೆಯ ಪ್ರತಿಯೊಬ್ಬ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ.

ಕನ್ನಡಿಗಳನ್ನು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ಕುಟುಂಬದ ಸದಸ್ಯರ ಪ್ರಗತಿಗೆ ಸಹಾಯ ಮಾಡುತ್ತದೆ. ದಕ್ಷಿಣ ದಿಕ್ಕಿನಲ್ಲಿ ಕನ್ನಡಿ ಇಡುವುದನ್ನು ತಪ್ಪಿಸಿ. ಯಾಕೆಂದರೆ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ ಮತ್ತು ಕುಟುಂಬ ಸದಸ್ಯರ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Vastu Tips: ಮಲಗುವ ಕೋಣೆಯಲ್ಲಿ ಇರುತ್ತೆ ದಂಪತಿಯ ನಡುವೆ ಜಗಳಕ್ಕೆ ಪ್ರೇರೇಪಿಸುವ ಅಂಶಗಳು!

Vastu Tips

ಗಾಜಿನ ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳು

ಜಿನ ಪೀಠೋಪಕರಣಗಳನ್ನು ಲಿವಿಂಗ್ ರೂಮ್ ಅಥವಾ ಡ್ರಾಯಿಂಗ್ ರೂಮ್‌ನಲ್ಲಿ ಇಡುವುದು ಒಳ್ಳೆಯದು. ಇದರಿಂದ ಮನೆಗೆ ಬರುವ ಅತಿಥಿಗಳ ಮೇಲೆ ಉತ್ತಮ ಪ್ರಭಾವ ಬೀರಿ ಮನೆಯ ಘನತೆ ಹೆಚ್ಚುತ್ತದೆ.

ಗಾಜಿನ ಅಲಂಕಾರಿಕ ವಸ್ತುಗಳಾದ ಶೋಪೀಸ್, ಫೋಟೋ ಫ್ರೇಮ್‌ಗಳು, ಗೋಡೆಗೆ ಜೋಡಿಸಲಾದ ವಸ್ತುಗಳು ಇತ್ಯಾದಿಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಕೂಡಿರುತ್ತದೆ ಎನ್ನುತ್ತಾರೆ ಪಂಡಿತ್ ರಮೇಶ್.