Sunday, 15th December 2024

ವೈಸ್‌ ಮಾರ್ಷಲ್‌ ಆಗಿ ಸಂದೀಪ್‌ ಸಿಂಗ್‌ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ವಾಯುಪಡೆಯ ವೈಸ್‌ ಮಾರ್ಷಲ್‌ ಆಗಿ ಸಂದೀಪ್‌ ಸಿಂಗ್‌ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

27ನೇ ಚೀಫ್ ಮಾರ್ಷಲ್‌ ಆಗಿ ವಿ.ಆರ್.ಚೌಧರಿ ಅಧಿಕಾರ ಸ್ವೀಕರಿಸಿದ ಬಳಿಕ ತೆರವಾದ ಸ್ಥಾನದಲ್ಲಿ ಸಿಂಗ್ ಅಧಿಕಾರ ವಹಿಸಿ ಕೊಂಡರು.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಿರಿಯ ವಿದ್ಯಾರ್ಥಿ ಐಎಎಫ್‌ನ ವಿಮಾನ ಹಾರಾಟ ವಿಭಾಗ ದಲ್ಲಿ 1983ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ. ಒಟ್ಟು 4,400 ಗಂಟೆಗಳ ವಿಮಾನ ಹಾರಾಟ ಅನುಭವ ಹೊಂದಿ ದ್ದಾರೆ.

38 ವರ್ಷಗಳ ಸೇವಾವಧಿಯಲ್ಲಿ ಏರ್‌ಕ್ರಾಫ್ಟ್‌, ಸಿಸ್ಟಮ್ಸ್‌ ಟೆಸ್ಟಿಂಗ್, ಆಪರೇಷನಲ್‌ ಫೈಟರ್‌ ಸ್ವಾಡ್ರನ್‌ ಆಗಿ ಕಾರ್ಯನಿರ್ವಹಿಸಿ ದ್ದಾರೆ. ಅತಿ ವಿಶಿಷ್ಟ ಸೇವಾ , ವಿಶಿಷ್ಟ ಸೇವಾ ಪದಕ ಪುರಸ್ಕೃತರೂ ಆಗಿದ್ದಾರೆ.