ನವದೆಹಲಿ: ಮುಂಬರುವ ವರ್ಷ 2026ರ ನಂತರವೇ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.
ಈ ಎರಡು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆಯನ್ನು ಜಮ್ಮು ಮತ್ತು ಕಾಶ್ಮೀರದೊಂದಿಗೆ ತೆಗೆದುಕೊಳ್ಳ ಲಾಗುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾಹಿತಿ ನೀಡಿದರು.
ಪ್ರತಿ ರಾಜ್ಯದ ವಿಧಾನಸಭೆಯಲ್ಲಿನ ಒಟ್ಟು ಸ್ಥಾನಗಳ ಸಂಖ್ಯೆಯನ್ನು 2026 ರ ನಂತರ ಮೊದಲ ಜನಗಣತಿ ಪ್ರಕಟಿಸಿದ ನಂತರ ಸರಿಪಡಿಸಲಾಗುವುದು” ಎಂದು ರೇವಂತ್ ರೆಡ್ಡಿಗೆ ಉತ್ತರ ನೀಡಿದರು.
ಕೇಂದ್ರ ಸರ್ಕಾರದ ಈ ಹೇಳಿಕೆಯ ಪ್ರಕಾರ, 2023ರಲ್ಲಿ ತೆಲಂಗಾಣ ಹಾಗೂ 2024ರಲ್ಲಿ ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯು ಈಗಿರುವ ಕ್ಷೇತ್ರಗಳಿಗಷ್ಟೇ ನಡೆಯಲಿದೆ.
ಕಳೆದ ಏಳು ವರ್ಷಗಳಿಂದ ಈವೆರಡು ರಾಜ್ಯ ಸರ್ಕಾರಗಳಿಂದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಮನವಿ ಮಾಡುತ್ತಲೇ ಬರುತ್ತಿದೆ.