Thursday, 12th December 2024

ವಿಜಯ್ ಹಜಾರೆ ಟ್ರೋಫಿ: ಚಾಂಪಿಯನ್‌ಪಟ್ಟ ಅಲಂಕರಿಸಿದ ಮುಂಬೈ

ನವದೆಹಲಿ: ಬಲಿಷ್ಠ ತಂಡ ಮುಂಬೈ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿತು.

2018-19ನೇ ಸಾಲಿನಲ್ಲಿ ಕಡೇ ಬಾರಿಗೆ ಚಾಂಪಿಯನ್ ಆಗಿದ್ದ ಮುಂಬೈ ಮರಳಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 16 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಯುಪಿ ಮತ್ತೊಮ್ಮೆ ನಿರಾಸೆ ಕಂಡಿತು.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾಳಗ ದಲ್ಲಿ ಯುವ ಆಟಗಾರ, ನಾಯಕ ಪೃಥ್ವಿ ಷಾ ಸಾರಥ್ಯದ ಮುಂಬೈ 6 ವಿಕೆಟ್‌ಗಳಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ತಂಡ ಮಾಧವ್ ಕೌಶಿಕ್ (158*ರನ್) ಹಾಗೂ ಸಮರ್ಥ್ ಸಿಂಗ್ (55ರನ್) ಜೋಡಿ ಬಿರುಸಿನ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 312 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ ತಂಡ ಆದಿತ್ಯ ತಾರೆ (118*ರನ್) ಹಾಗೂ ನಾಯಕ ಪೃಥ್ವಿ ಷಾ (73ರನ್) ಬಿರುಸಿನ ಬ್ಯಾಟಿಂಗ್ ಫಲವಾಗಿ 41.3 ಓವರ್‌ಗಳಲ್ಲಿ 4 ವಿಕೆಟ್ ಕಳೆದು ಕೊಂಡು 315 ರನ್‌ಗಳಿಸಿ ಜಯದ ನಗೆ ಬೀರಿತು.

ಉತ್ತರ ಪ್ರದೇಶ: 4 ವಿಕೆಟ್‌ಗೆ 312

ಮುಂಬೈ: 41.3 ಓವರ್‌ಗಳಲ್ಲಿ 4 ವಿಕೆಟ್‌ಗೆ 315