Thursday, 12th December 2024

ಒಲಿಂಪಿಕ್​ ಪದಕ ವಿಜೇತ ವಿಜೇಂದರ್​ ಸಿಂಗ್​ ರಾಜಕೀಯಕ್ಕೆ ಗುಡ್‌ ಬೈ

ವದೆಹಲಿ: ಒಲಿಂಪಿಕ್​ ಚಿನ್ನದ ಪದಕ ವಿಜೇತ ವಿಜೇಂದರ್​ ಸಿಂಗ್​ ರಾಜಕೀಯ ತೊರೆಯುವುದಾಗಿ ಘೋಷಿಸಿದ್ದಾರೆ.

ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿನ ಬೆನ್ನಲ್ಲೇ ಅವರು ರಾಜಕೀಯ ತೊರೆಯುತ್ತಿರುವುದಾಗಿ ಘೋಷಿಸಿದ್ದಾರೆ.

ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ವಿಜೇಂದರ್​ ರಾಜನೀತಿ ಕೋ ರಾಮ್ ರಾಮ್ ಭಾಯಿ ಎಂದು ಹೇಳುವ ಮೂಲಕ ರಾಜಕೀಯ ತೊರೆಯು ತ್ತಿರುವುದಾಗಿ ತಿಳಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ರಾಜಕೀಯದಿಂದ ದೂರ ಉಳಿದಿದ್ದ ವಿಜೇಂದರ್​ ಸಿಂಗ್​ ಕೊನೆಯದಾಗಿ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್​ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರು. ನವದೆಹಲಿಯಲ್ಲಿ ನಡೆದ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ವಿಜೇಂದರ್​ ಭಾಗಿಯಾಗಿ ಬಿಜೆಪಿ ಸಂಸದ ಬ್ರಿಜ್​​ ಭೂಷಣ್​ ವಿರುದ್ಧ ಹರಿಹಾಯ್ದಿದ್ದರು.

ನನ್ನ 20 ವರ್ಷಗಳ ಬಾಕ್ಸಿಂಗ್​ ಕೆರಿಯರ್​ನಲ್ಲಿ ನಾನು ನನ್ನ ದೇಶವನ್ನು ಹೆಮ್ಮೆಪಡುವ ಕೆಲಸ ಮಾಡಿದ್ದೇನೆ. ಈಗ ನನ್ನ ದೇಶವಾಸಿಗಳಿಗಾಗಿ ಏನನ್ನಾದರೂ ಮಾಡಲು ಮತ್ತು ಅವರ ಸೇವೆ ಮಾಡುವ ಸಮಯ ಬಂದಿದೆ. ನಾನು ಈ ಅವಕಾಶವನ್ನು ಸ್ವೀಕರಿಸಲು ಬಯಸುತ್ತೇನೆ ಎಂದು 2019ರಲ್ಲಿ ಕಾಂಗ್ರೆಸ್​ ಸೇರುವ ವೇಳೆ ಹೇಳಿದ್ದರು.

2019 ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ವಿಜೇಂದರ್ ಸಿಂಗ್ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಬಾಕ್ಸರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದರು.