Thursday, 12th December 2024

ಟಿಆರ್’ಪಿ ತಿರುಚಿದ ಪ್ರಕರಣ: ವಿಕಾಸ್ ಖನ್ಚಾಂದಾನಿಗೆ ಜಾಮೀನು

ಮುಂಬೈ : ಟಿಆರ್’ಪಿ ತಿರುಚಿದ ಪ್ರಕರಣದಲ್ಲಿ ಜೈಲು ಸೇರಿದ್ದ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ಸಿಇಒ ವಿಕಾಸ್ ಖನ್ಚಾಂದಾನಿ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.

ಪ್ರಕರಣದಲ್ಲಿ  ಕಳೆದ ಭಾನುವಾರ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ನಿಂದ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ 2 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಕಳೆದ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಮರುದಿನವೇ ಈ ಬೆಳವಣಿಗೆ ನಡೆ ದಿದೆ. ವಿಕಾಸ್ ಖನ್ಚಾಂದಾನಿ ಇಂದು ಸಂಜೆ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಡಿ.13ರಂದು ಬೆಳಗ್ಗೆ 8.30ಕ್ಕೆ ನಕಲಿ ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ವಿಕಾಸ್ ಖನ್ಚಾಂದನಿ ಅವರನ್ನು ಅವರ ನಿವಾಸ ದಿಂದ ಬಂಧಿಸಲಾಗಿತ್ತು. ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ನ ಸಹಾಯಕ ಉಪಾಧ್ಯಕ್ಷ ಘನಶ್ಯಾಮ್ ಸಿಂಗ್ 26 ದಿನಗಳ ಕಾಲ ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.