Saturday, 5th October 2024

ಕಾರ್ಟೂನ್ ಚಿತ್ರ ಕಲಾವಿದ ಕೆ. ಸಿ. ಶಿವಶಂಕರ್ ನಿಧನ

ಚೆನ್ನೈ: ಮಕ್ಕಳ ಬಾಲ್ಯವನ್ನು ಪೌರಾಣಿಕ, ನೀತಿ ಭರಿತ ಚಿತ್ರಕಥೆಗಳಿಂದ ಪ್ರೇರೇಪಿಸುತ್ತಿದ್ದ ಚಿತ್ರ ಕಲಾವಿದ ಕೆ. ಸಿ. ಶಿವಶಂಕರ್ (97)ಅವರು ಬುಧವಾರ ನಿಧನರಾದರು.

ತಮ್ಮ 50 ವರ್ಷಗಳ ಚಿತ್ರಕಲಾ ಜೀವನದಲ್ಲಿ ಶಿವಶಂಕರ್ ಅವರು ಹಲವಾರು ಕಾರ್ಟೂನ್ ಚಿತ್ರಗಳನ್ನು ರಚಿಸಿದ್ದರು. ಅದರಲ್ಲಿ ಜನಪ್ರಿಯವಾಗಿದ್ದಿದ್ದು ‘ಚಂದಮಾಮ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ವಿಕ್ರಮ ಮತ್ತು ಬೇತಾಳ’ಕ್ಕೆ ರಚಿಸುತ್ತಿದ್ದ ಜೀವಂತ ವೆಣಿಸುವ ರೀತಿಯ ಚಿತ್ರಗಳು.

‘ಚಂದಮಾಮ’ ಅಥವಾ ‘ಅಂಬುಲಿಮಾಮ’ ಎಂದೇ ಹೆಸರುವಾಸಿಯಾಗಿದ್ದ ಮಕ್ಕಳ ಕಾರ್ಟೂನ್ ಪತ್ರಿಕೆಯಲ್ಲಿ ಇವರು ರಚಿಸು ತ್ತಿದ್ದ ವಿವಿಧ ಕಾರ್ಟೂನ್ ಗಳು ಆ ಕಾಲದ ಮಕ್ಕಳ ಅಚ್ಚುಮೆಚ್ಚಾಗಿತ್ತು.