Sunday, 15th December 2024

Vikrant Massey: ನಟನೆಯಿಂದ ಬ್ರೇಕ್‌… ದಿಢೀರ್‌ ನಿರ್ಧಾರಕ್ಕೆ ಕಾರಣ ಬಿಚ್ಚಿಟ್ಟ ನಟ ವಿಕ್ರಾಂತ್‌ ಮಾಸ್ಸೆ

ಮುಂಬೈ: ಯಶಸ್ಸಿನ ಉತ್ತುಂಗದಲ್ಲಿದ್ದ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದ, ಬಾಲಿವುಡ್‌ನ(Bollywood) ಹೆಸರಾಂತ ನಟ ವಿಕ್ರಾಂತ್‌ ಮಾಸ್ಸೆ(Vikrant Massey) ಇತ್ತೀಚೆಗಷ್ಟೇ ತಮ್ಮ ಸಿನಿಮಾ ಜರ್ನಿಗೆ(Cinema Journey) ನಿವೃತ್ತಿ(Retirement) ಘೋಷಿಸಿದ್ದರು. ನಟನ ಈ ನಿರ್ಧಾರದ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದಲ್ಲದೆ, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ವಿಕ್ರಾಂತ್‌ ಮಾಸ್ಸೆ ತಮ್ಮ ನಟನೆಯ ವಿರಾಮದ ಹಿಂದಿರುವ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಮಾಸ್ಸೆ ಮತ್ತೆ ಸಿನಿಮಾರಂಗಕ್ಕೆ ಹಿಂದಿರುಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಇನ್ನು ಅವರ ಅಭಿಮಾನಿಗಳು ಸಖತ್‌ ಖುಷಿಯಲ್ಲಿದ್ದಾರೆ.

ಇತ್ತೀಚೆಗೆ, ವಿಕ್ರಾಂತ್ ಮಾಸ್ಸೆ 2025 ರಲ್ಲಿ ನಟನೆಯಿಂದ ವಿರಾಮ ತೆಗೆದುಕೊಳ್ಳುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ತಮ್ಮ ನಟ ನಿವೃತ್ತರಾಗುತ್ತಿದ್ದಾರೆ ಎಂದುಕೊಂಡು ಅಭಿಮಾನಿಗಳು ನಿರಾಶರಾಗಿದ್ದರು. ಈ ಮಧ್ಯೆ ವಿಕ್ರಾಂತ್‌ ಮಾಸ್ಸೆ ತಮ್ಮ ನಟನೆಯ ವಿರಾಮದ ಹಿಂದಿರುವ ಕಾರಣಗಳನ್ನು ಸಂದರ್ಶನವೊಂದರಲ್ಲಿ(Interview) ತಿಳಿಸಿದ್ದಾರೆ.

ಸಂದರ್ಶನದಲ್ಲಿ ಈ ಕುರಿತು ವಿವರವಾಗಿ ಮಾತನಾಡಿರುವ ವಿಕ್ರಾಂತ್‌ ಮಾಸ್ಸೆ ಕೆಲವು ಕೌಟುಂಬಿಕ ಕಾರಣಗಳನ್ನು ತಿಳಿಸಿದ್ದು, ಆತ್ಮೀಯ ಸ್ನೇಹಿತರು ಮತ್ತು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಅವರು ತಂದೆಯಾಗಿರುವ ಖುಷಿಯಲ್ಲಿದ್ದಾರೆ. ತನ್ನ ಮಗುವಿನೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸಬೇಕೆಂದಿದ್ದೇನೆ. ಹಾಗಾಗಿ ಸಿನಿಮಾದಿಂದ ಶಾರ್ಟ್‌ ಟೈಮ್‌ ನಿವೃತ್ತಿ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

“ನನಗೆ ಸಾಕಷ್ಟು ಕನಸುಗಳಿದ್ದವು. ಬಹುತೇಕ ಎಲ್ಲವೂ ನನಸಾಗಿವೆ. ಈಗ ಖುಷಿಯಾಗಿ ಕಾಲ ಕಳೆಯಬೇಕು. ಇದು ಬದುಕುವ ಸಮಯ. ನಾನು ಸ್ವಲ್ಪಮಟ್ಟಿಗೆ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ. ಇಲ್ಲಿ ಎಲ್ಲವೂ ಕ್ಷಣಿಕವಾಗಿದೆ. ಯಾವ ಕ್ಷಣವನ್ನೂ ಕಳೆದುಕೊಳ್ಳಬಾರದು. ನಾನು ಇದುವರೆಗೆ ನನ್ನ ಹೆಂಡತಿ ಮತ್ತು ಮಗುವಿನೊಂದಿಗೆ ಹೆಚ್ಚು ಸಮಯ ಕಳೆದಿಲ್ಲ. ಈಗ ಅವರೊಂದಿಗೆ ಇರಬೇಕು. ಮುಂದಿನ ವರ್ಷ ಒಂದು ಸಿನಿಮಾದಲ್ಲಿ ನಟಿಸಲಿದ್ದೇನೆ” ಎಂದು ಸಂದರ್ಶನದಲ್ಲಿ ವಿಕ್ರಾಂತ್‌ ಮಾಸ್ಸೆ ಮಾತನಾಡಿದ್ದಾರೆ.

ಡಿಸೆಂಬರ್‌ 2ರಂದು ನಟ ವಿಕ್ರಾಂತ್‌ ಮಾಸ್ಸೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. “ಕಳೆದ ಎರಡು ಸಿನಿಮಾಗಳು ಸಾಕಷ್ಟು ಯಶಸ್ಸು ಮತ್ತು ನೆನಪುಗಳನ್ನು ನೀಡಿವೆ. ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ. ಈಗ ನಾನು ನನ್ನ ಮನೆಯವರೊಂದಿಗೆ ಸಮಯ ಕಳೆಯಬೇಕು ಎಂದುಕೊಂಡಿದ್ದೇನೆ. 2025 ರಲ್ಲಿ ಮತ್ತೆ ಸಿಗೋಣ. ಒಳ್ಳೆಯ ಸಿನಿಮಾದೊಂದಿಗೆ ಬರುತ್ತೇನೆ” ಎಂದು ಪೋಸ್ಟ್‌ನಲ್ಲಿ ಬರೆದಿದ್ದರು. ನಟನ ಪೋಸ್ಟ್‌ ನೋಡಿ ಅಭಿಮಾನಿಗಳು ಶಾಶ್ವತ ನಿವೃತ್ತಿ ಘೋಷಿಸಿದ್ದಾರೆಂದು ಭಾವಿಸಿ ಕಂಗಾಲಾಗಿದ್ದರು.

12 ಫೇಲ್‌, ದಿ ಸಬರಮತಿ ರಿಪೋರ್ಟ್‌,ಎ ಡೆತ್‌ ಇನ್‌ ದಿ ಗುಂಜ್ ಮತ್ತು ಕಾರ್ಗೋ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ವಿಕ್ರಾಂತ್‌ ಮಾಸ್ಸೆ ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Bengaluru Techie: ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್‌- ಅತುಲ್ ಪತ್ನಿನಿಖಿತಾ, ಆಕೆಯ ತಾಯಿ ಮತ್ತು ಸಹೋದರ ಅರೆಸ್ಟ್‌