Sunday, 15th December 2024

ನವದೆಹಲಿಯಲ್ಲಿರುವ ವಾಲ್ಮೀಕಿ ಮಂದಿರಕ್ಕೆ ವಿನಯ್ ಗುರೂಜಿ ಭೇಟಿ

ನವದೆಹಲಿ: ವಾಲ್ಮೀಕಿ ರವರು ತಪಸ್ಸು ಮಾಡಿದಂತಹ ಸ್ಥಳ ಹಾಗೂ ಮಹಾತ್ಮಾ ಗಾಂಧೀಜಿಯವರು ದೆಹಲಿಗೆ ಬಂದಾಗ ಉಳಿಯುತ್ತಿದ್ದ ಮಂದಿರ ವಿದು ಹಾಗೂ ಮಹಾತ್ಮಾ ಗಾಂಧೀಜಿಯವರೇ ಮಕ್ಕಳಿಗೆ ಶಿಕ್ಷಣವನ್ನು ಹೇಳಿ ಕೊಡುತ್ತಿರುವ ಮಂದಿರ ವಿದು.

ಇನ್ನೊಂದು ವಿಶೇಷವೇನೆಂದರೆ ಪ್ರಧಾನಿ ನರೇಂದ್ರ ಮೋದಿಜಿಯವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದಂತಹ ಸ್ಥಳವಿದು.

ಶುಕ್ರವಾರ ಬೆಳಿಗ್ಗೆ ಮಹಾತ್ಮಾಗಾಂಧಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ವಿನಯ್ ಗುರೂಜಿ ರವರು, ಕರ್ನಾಟಕ ಕರಕುಶಲ ನಿಗಮ ಮಂಡಳಿ ಅಧ್ಯಕ್ಷರು ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ಮಹಾತ್ಮಾಗಾಂಧಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಗಳಾದ ಎಸಿ ಶಿವರಾಜ್ ಟ್ರಸ್ಟಿಗಳಾದ ರಾಕೇಶ್ ಮತ್ತು ಶಿವಕುಮಾರ್ ರವರು ಉಪಸ್ಥಿತರಿದ್ದರು.