ಎಂಟಿವಿ ಇಂಡಿಯಾ ಈಗ ಪ್ರಖ್ಯಾತ ಫುಟ್‌ಬಾಲ್ ಲೀಗ್‌ನ ವಿಶೇಷ ತಾಣವಾಗಿದೆ
೩- ವರ್ಷದ ವಿಶೇಷ ಸಹಯೋಗವು ಈಗ ಭಾರತೀಯ ಉಪಖಂಡದಲ್ಲಿ ಲೀನಿಯರ್ ಮತ್ತು ಡಿಜಿಟಲ್ ಹಕ್ಕುಗಳನ್ನು ನೆಟ್‌ವರ್ಕ್ಗೆ ನೀಡುತ್ತದೆ
ಮುಂಬೈ: ಭಾರತದ ಅತ್ಯಂತ ಕಿರಿಯ ಮತ್ತು ಮುಂಚೂಣಿಯ ಮಾಧ್ಯಮ ಸಂಸ್ಥೆ ವಯಾಕಾಮ್ ೧೮ ಮೀಡಿಯಾ ಭಾರತೀಯ ವೀಕ್ಷಕರಿಗೆ ವಿಭಿನ್ನವಾದ ಮತ್ತು ಹೊಸದಾದ ಮನರಂಜನೆ ನೀಡುವ ಮೂಲಕ ತನ್ನ ಅಳತೆಗೋಲನ್ನು ವಿಸ್ತರಿಸಿದೆ. ಭಾರತದ ಕೆಲ ಉತ್ಸಾಹಕರ ಮತ್ತು ಮನರಂಜನೆಯ ಕಾರ್ಯಕ್ರಮಗಳಿಗೆ ತವರಾದ ವಯಾಕಾಮ್ ೧೮ನ ಮುಂಚೂಣಿಯ ಯುವಜನರ ಬ್ರಾಂಡ್ ಎಂಟಿವಿ ಲಾಲಿಗಾದೊಂದಿಗೆ ಸ್ಪಾನಿಷ್ ಫುಟ್‌ಬಾಲ್ ಲೀಗ್ ಅನ್ನು ವಿಶೇಷವಾಗಿ ಭಾರತದ ಉಪಖಂಡಕ್ಕೆ ಮುಂದಿನ ೩ ವರ್ಷಗಳಿಗೆ ತರಲು ಸಹಯೋಗ ಹೊಂದಿದೆ. ರೈಸ್ ವರ್ಲ್ಡ್ವೈಡ್‌ನಿಂದ ಸನ್ನದ್ಧ ಹಾಗೂ ಬೆಂಬಲ ಪಡೆದ ಲಾಲಿಗಾ ಭಾರತದಲ್ಲಿ ಎಂಟಿವಿಯಿಂದ ಆಯ್ದ ರಾಷ್ಟ್ರೀಯ ಮತ್ತು ಪ್ರಾದೇಶಿಕ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತದೆ ಮತ್ತು ವೂಟ್ ಮತ್ತು ಜಿಯೊ ಪ್ಲಾಟ್‌ಫಾರಂ ಗಳಲ್ಲಿ ಲೈವ್-ಸ್ಟ್ರೀಮ್ ಆಗುತ್ತದೆ.
ಕಳೆದ ದಶಕದಿಂದ ಭಾರತದಲ್ಲಿ ಮುಖ್ಯವಾಗಿ ಯುವಜನರಲ್ಲಿ ಫುಟ್‌ಬಾಲ್ ವೀಕ್ಷಣೆ ಮತ್ತು ಅನುಸರಣೆ ಬಹಳ ಹೆಚ್ಚಾಗಿದೆ. ಪ್ರಸ್ತುತ ತನ್ನ ೯೧ನೇ ಋತುವಿನಲ್ಲಿ ಈ ಮಹತ್ತರವಾದ ಲೀಗ್ ವಿಶ್ವದಾದ್ಯಂತ ಅತ್ಯಂತ ಹೆಚ್ಚು ಅನುಸರಿಸಲ್ಪಡುವ ಲೀಗ್‌ಗಳಲ್ಲಿ ಒಂದಾಗಿದೆ ಮತ್ತು ಯೂರೋಪ್‌ನ ಅತ್ಯುತ್ತಮ ಪ್ರತಿಭೆ ಮತ್ತು ಫುಟ್‌ಬಾಲ್ ಕ್ಲಬ್‌ಗಳಾದ ಅಟ್ಲೆಟಿಕೊ ಮ್ಯಾಡ್ರಿಡ್, ರಿಯಲ್ ಮ್ಯಾಡ್ರಿಡ್, ಎಫ್‌ಸಿ ಬಾರ್ಸಿಲೋನಾ ಮತ್ತಿತರೆ ಒಳಗೊಂಡಿವೆ. ಎಂಟಿವಿ ಭಾರತದಲ್ಲಿ ಯುವಜನರ ಮನರಂಜನೆ ಮತ್ತು ಕಂಟೆAಟ್‌ಗೆ ಪ್ರಮುಖ ತಾಣವಾಗಿದ್ದು ತನ್ನ ಯಂಗ್-ಅಟ್-ಹಾರ್ಟ್ ವೀಕ್ಷಕರೊಂದಿಗೆ ಬಲವಾದ ಬಾಂಧವ್ಯ ಹೊಂದಿದೆ. ಭಾರತದಲ್ಲಿ ಪ್ರಸ್ತುತ ಫುಟ್‌ಬಾಲ್ ಅನ್ನು ಆನಂದಿಸುವ ಹಿನ್ನೆಲೆಯಲ್ಲಿ ವಯಾಕಾಮ್ ೧೮ ಮತ್ತು ಎಂಟಿವಿ ಲಾಲಿಗಾ ಸುತ್ತಲೂ ಸಮಗ್ರ ಮನರಂಜನೆ-ಪ್ರೇರಿತ ಇಕೊಸಿಸ್ಟಂ ನಿರ್ಮಿಸಲು ಬದ್ಧವಾಗಿದ್ದು ಆಟದ ಅಭಿಮಾನಿಗಳನ್ನು ಮತ್ತಷ್ಟು ಹೆಚ್ಚಿಸಲಿದೆ.
ಲಾಲಿಗಾ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಸ್ಕರ್ ಮಯೊ, “ವಯಾಕಾಮ್ ೧೮(ಎಂಟಿವಿ ಇಂಡಿಯಾ) ಜೊತೆಯಲ್ಲಿ ಸಹಯೋಗಕ್ಕೆ ಮತ್ತು ಲಾಲಿಗಾಗೆ ಭಾರತದಲ್ಲಿ ಹೆಚ್ಚಾಗುತ್ತಿರುವ ಫುಟ್‌ಬಾಲ್ ಅಭಿಮಾನಿಗಳನ್ನು ಹೆಚ್ಚಿಸಲು ನಾವು ಉತ್ಸಾಹಗೊಂಡಿದ್ದೇವೆ. ಜಾಗತಿಕವಾಗಿ ಫುಟ್‌ಬಾಲ್ ಸಮುದಾಯದ ಉನ್ನತ ಮಾನದಂಡ ಗಳನ್ನು ರೂಪಿಸುತ್ತಿದ್ದು ಮತ್ತು ಭಾರತದಲ್ಲಿ ಅಪಾರ ವೇಗ ಪಡೆಯುತ್ತಿರುವುದರಿಂದ ನಾವು ಎಂಟಿವಿಯ ಯುವ ವೀಕ್ಷಕರೊಂದಿಗೆ ಸಕ್ರಿಯವಾಗುವ ಮತ್ತು ತಲುಪುವ ಭರವಸೆ ಹೊಂದಿದ್ದೇವೆ” ಎಂದರು.
ಎಂಟಿವಿಯಲ್ಲಿ ಲಾಲಿಗಾ ಕುರಿತು ಯೂಥ್, ಮ್ಯೂಸಿಕ್ ಅಂಡ್ ಇಂಗ್ಲಿಷ್ ಎಂಟರ್‌ಟೈನ್‌ಮೆAಟ್ ಬ್ಯುಸಿನೆಸ್ ಹೆಡ್ ಅನ್ಷುಲ್ ಅಯ್ಲಾವಾಡಿ, “ನಾವು ಎಂಟಿವಿಯಲ್ಲಿ ಫುಟ್‌ಬಾಲ್ ಯಂಗ್-ಅಟ್-ಹಾರ್ಟ್ ಭಾರತೀಯರಲ್ಲಿ ಅತ್ಯುತ್ತಮ ಬೆಂಬಲ ಆನಂದಿಸುತ್ತದೆ ಎಂದು ನಮಗೆ ಗೊತ್ತಿದೆ. ಮುಖ್ಯವಾಗಿ ಲಾಲಿಗಾ ವಿಶ್ವದಾದ್ಯಂತ ಸಾಂಸ್ಕೃತಿಕ ವಿದ್ಯಮಾನವಾಗಿದೆ. ರೈಸ್ ವರ್ಲ್ಡ್ವೈಡ್‌ನಿಂದ ನಮಗೆ ಲಾಲಿಗಾ ತಂಡಕ್ಕೆ ಪರಿಚಯಿಸಿದಾಗ ನಾವು ಈ ಸಹಯೋಗದ ನಮ್ಮ ಗುರಿ ಒಂದೇ ಆಗಿತ್ತು, ಭಾವನೆಗಳು ಒಳ್ಳೆಯವಾಗಿದ್ದವು ಮತ್ತು ತ್ವರಿತವಾಗಿ ಈ ಸಹಯೋಗ ರೂಪಿಸಿದೆವು” ಎಂದರು.
ಲಾಲಿಗಾ ಆಗಸ್ಟ್ ೧೩, ೨೦೨೧ರಂದು ಪ್ರಾರಂಭವಾಗಲಿದೆ ಮತ್ತು ವಯಾಕಾಮ್ ೧೮ ನೆಟ್‌ವರ್ಕ್ನ ಶಕ್ತಿಯನ್ನು ಭಾರತೀಯ ವೀಕ್ಷಕರ ವ್ಯಾಪ್ತಿ ವಿಸ್ತರಣೆ ಮತ್ತು ಅನುರಣನವನ್ನು ಲೀಗ್‌ಗೆ ನಿರ್ಮಿಸಲಿದೆ. ವಯಾಕಾಮ್ ೧೮ ತನ್ನ ಬೃಹತ್ ಮಾರ್ಕೆಟಿಂಗ್ ಮತ್ತು ಅಭಿಯಾನದ ಮೂಲಕ ಫುಟ್‌ಬಾಲ್ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಲಿದ್ದು ಭಾರತದಲ್ಲಿ ಲಾಲಿಗಾ ಅಭಿಮಾನಿಗಳು ಮತ್ತು ಔಟ್‌ರೀಚ್ ಹೆಚ್ಚಿಸಲಿದೆ.
ಎಂಟಿವಿಯ ವಿಸ್ತಾರ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ರಭಾವದಿಂದ ಲಾಲಿಗಾ ಅಭಿಮಾನಿಗಳನ್ನು ಮಲ್ಟಿ-ಪ್ಲಾಟ್‌ಫಾರಂ ಅಪ್ರೋಚ್ ಮೂಲಕ ಫುಟ್ ಬಾಲ್ ಅನ್ನು ಭಾರತದ ಮನೆಗಳಲ್ಲಿ ಭೋಜನ ಸಂದರ್ಭದ ಸಂವಹನಗಳಲ್ಲಿ ಕೇಳುವಂತೆ ಮಾಡುವ ಮತ್ತು ಎಂಟಿವಿ ಮತ್ತು ವಯಾಕಾಮ್ ೧೮ ಕೊಡುಗೆಗಳನ್ನು ತನ್ನ ವೀಕ್ಷಕರಿಗೆ ಮತ್ತಷ್ಟು ವಿಸ್ತರಿಸುವುದನ್ನು ದೃಢಪಡಿಸುತ್ತದೆ.