ನವದೆಹಲಿ: ಜಾರ್ಖಂಡ್ ನಲ್ಲಿ ಪುಂಡಾನೆ ಅಟ್ಟಹಾಸಕ್ಕೆ ಕನಿಷ್ಠ 16 ಮಂದಿ ಗ್ರಾಮಸ್ಥರು ಮೃತಪಟ್ಟಿದ್ದಾರೆ.
ಸುಮಾರು 22 ಆನೆಗಳ ಹಿಂಡಿನಲ್ಲಿದ್ದ 15-16 ವರ್ಷದ ಈ ಗಂಡಾನೆ ಎರಡು ತಿಂಗಳ ಹಿಂದೆ ತನ್ನ ಗುಂಪಿನಿಂದ ಪ್ರತ್ಯೇಕವಾಗಿ ಹೊರಬಂದಿತ್ತು. ಬಳಿಕ ಜಾರ್ಖಂಡ್ ನ ಬುಡಕಟ್ಟು ಪ್ರದೇಶದ ಸಂತಲ್ ಪರ್ಗನದಲ್ಲಿ ದಾಂಧಲೆ ನಡೆಸಿದ ಪರಿಣಾಮ 15ಕ್ಕೂ ಅಧಿಕ ಗ್ರಾಮಸ್ಥರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಆನೆಗೆ ಮದವೇರಿರಬಹುದು. ಅಥವಾ ಇತರ ಗಂಡಾನೆಗಳ ಜತೆಗಿನ ದ್ವೇಷದಿಂದ ತಮ್ಮ ಗುಂಪಿನಿಂದ ಈ ಆನೆಯನ್ನು ಹೊರ ಹಾಕಿರಬಹುದು ಎಂದು ಪ್ರಾದೇಶಿಕ ಅರಣ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.
ನಾವು ಆನೆಯ ನಡವಳಿಕೆಯನ್ನು ಅಧ್ಯಯನ ಮಾಡುತ್ತಿದ್ದು, ಇದಕ್ಕಾಗಿ 20 ಜನರ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಯಾಕೆಂದರೆ ಜನರು ಮತ್ತು ಪ್ರಾಣಿಗಳನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ವಿವರಿಸಿದ್ದಾರೆ.