Thursday, 14th November 2024

Viral News: ಹೆರಿಗೆಯಾಗಿ 18 ವರ್ಷಗಳಾದರೂ ಮಹಿಳೆಗೆ ತಪ್ಪದ ನರಕಯಾತನೆ- ನರ್ಸ್‌ ಮಾಡಿದ ಎಡವಟ್ಟು ಕೇಳಿದ್ರೆ ಶಾಕ್‌ ಆಗ್ತೀರಾ!

Delivery Tragedy

ಥೈಲ್ಯಾಂಡ್ : ಶಸ್ತ್ರಚಿಕಿತ್ಸೆಯ ನಂತರ ರೋಗಿಯ ದೇಹದಲ್ಲಿ ಸೂಜಿ, ಕತ್ತರಿ, ಬ್ಲೇಡ್, ಕಾಟನ್ ಇತ್ಯಾದಿಗಳನ್ನು ಬಿಡುವಂತಹ ವೈದ್ಯರ ಎಡವಟ್ಟಿನ ಕಥೆಗಳು ಈ ಹಿಂದೆ ಬಹಳ ನಡೆದಿತ್ತು. ಇದೀಗ ಥೈಲ್ಯಾಂಡ್‍ನ ನಾರಾಥಿವಾಟ್ ಪ್ರಾಂತ್ಯದ 36 ವರ್ಷದ ಮಹಿಳೆಯೊಬ್ಬರಿಗೆ ಹೆರಿಗೆ(Delivery Tragedy) ಸಮಯದಲ್ಲಿ ನರ್ಸ್ ಯೋನಿಯಲ್ಲಿ ಆಕಸ್ಮಿಕವಾಗಿ ಸೂಜಿಯನ್ನು ಬಿಟ್ಟ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಈ ಘಟನೆ ನಡೆದ ಸುಮಾರು ಎರಡು ದಶಕಗಳ ಕಾಲ ಮಹಿಳೆ ತೀವ್ರವಾದ  ನೋವಿನಿಂದ ನರಳಿದ್ದು, ಇತ್ತೀಚೆಗೆ ನರ್ಸ್‌ ಮಾಡಿದ ಎಡವಟ್ಟು ಬಯಲಾಗಿತ್ತು. ಮಹಿಳೆ ಪಾವೆನಾ ಫೌಂಡೇಶನ್ ಫಾರ್ ಚಿಲ್ಡ್ರನ್ ಅಂಡ್ ವುಮೆನ್ ಸಹಾಯ ಕೋರಿದ್ದಾರಂತೆ(Viral News).

ಮಹಿಳೆ ಫೌಂಡೇಶನ್‍ಗೆ ನೀಡಿದ ವರದಿಯ ಪ್ರಕಾರ, 18 ವರ್ಷಗಳ ಹಿಂದೆ ಹೆರಿಗೆಯ ಸಮಯದಲ್ಲಿ ನರ್ಸ್ ಹೊಲಿಗೆ ಹಾಕುವಾಗ ಆಕಸ್ಮಿಕವಾಗಿ ಸೂಜಿಯನ್ನು ಯೋನಿಯಲ್ಲಿ ಬಿಟ್ಟಿದ್ದಾರೆ. ಇದನ್ನು ತಿಳಿದ ನಂತರ ವೈದ್ಯರು ಅದನ್ನು ಬೆರಳುಗಳಿಂದ ತೆಗೆಯಲು ಪ್ರಯತ್ನಿಸಿದರೂ, ಸೂಜಿಯನ್ನು ತೆಗೆಯಲು ಸಾಧ್ಯವಾಗಲಿಲ್ಲ. ಅತಿಯಾದ ರಕ್ತಸ್ರಾವವಾಗುತ್ತಿರುವ  ಆತಂಕದಿಂದಾಗಿ, ಸೂಜಿ ಯೋನಿಯೊಳಗೆ ಉಳಿದಿದ್ದರೂ ವೈದ್ಯರು ತಮ್ಮ ಕಾರ್ಯವನ್ನು ಪೂರ್ಣಗೊಳಿಸಲು ನಿರ್ಧರಿಸಿದರು ಎಂದು ಮಹಿಳೆ ತಿಳಿಸಿದ್ದಾರೆ.

Delivery Tragedy

ಅಂದಿನಿಂದ, ಸುಮಾರು ಎರಡು ದಶಕಗಳವರೆಗೆ, ಮಹಿಳೆಗೆ ಈ ವಿಚಾರ ತಿಳಿಯದ ಕಾರಣ ತೀವ್ರವಾದ ಹೊಟ್ಟೆ ನೋವನ್ನು ಸಹಿಸಿಕೊಂಡು ಬಂದಿದ್ದಳು. ಆದರೆ  ಕಳೆದ ವರ್ಷ ಎಕ್ಸ್-ರೇಯಲ್ಲಿ ಅವರ ಯೋನಿಯಲ್ಲಿ  ಸೂಜಿ ಇರುವುದನ್ನು ತಿಳಿದುಬಂದಿದೆ. ಇದನ್ನು ಹೊರತೆಗೆಯಲು ಮತ್ತೊಂದು ಸರ್ಜರಿಗೂ ಅವರು ಒಳಗಾಗಬೇಕಿತ್ತು. ಆದರೆ, ದೇಹದಲ್ಲಿಯೇ ಸೂಜಿ ಅತ್ತಿತ್ತ ಹೋಗುತ್ತಿದ್ದ ಕಾರಣಕ್ಕೆ ಸರ್ಜರಿ ಕೂಡ ವಿಳಂಬವಾಗಿದೆ.

ಮಹಿಳೆಯ ದೇಹದಲ್ಲಿ ಸೂಜಿ ಇನ್ನೂ ಇರುವುದರಿಂದ, ನಿಯಮಿತ ತಪಾಸಣೆಗಾಗಿ ತಿಂಗಳಿಗೆ ನಾಲ್ಕು ಬಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆಯಂತೆ. ಅವರ ವೈದ್ಯಕೀಯ ವಿಮೆಯು ಹೆಚ್ಚಿನ ಚಿಕಿತ್ಸೆಯನ್ನು ಒಳಗೊಂಡಿದ್ದರೂ, ಸಾರಿಗೆಯಂತಹ ಹೆಚ್ಚುವರಿ ವೆಚ್ಚಗಳು ಅವರ ಮೇಲೆ ಆರ್ಥಿಕವಾಗಿ ಒತ್ತಡವನ್ನುಂಟು ಮಾಡಿವೆ. ಈ ಹೆಚ್ಚುವರಿ ವೆಚ್ಚಗಳನ್ನು ಭರಿಸಲಾಗದ ಕಾರಣ ಮಹಿಳೆ  ಬೆಂಬಲಕ್ಕಾಗಿ ಪಾವೆನಾ ಫೌಂಡೇಶನ್ ಫಾರ್ ಚಿಲ್ಡ್ರನ್ ಅಂಡ್ ವುಮೆನ್ ಸಹಾಯ ಕೇಳಿದ್ದಾರೆ.

ಪ್ರತಿಷ್ಠಾನದ ಮುಖ್ಯಸ್ಥೆ ಪವೇನಾ ಹೊಂಗ್ಸಾಕುಲ್ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸುವ ಮೂಲಕ ಮಹಿಳೆಗೆ ಸಹಾಯ ಮಾಡಿದ್ದಾರೆ. ಸೂಜಿಯನ್ನು ಯಾವಾಗ ತೆಗೆದುಹಾಕಲಾಗುತ್ತದೆ ಅಥವಾ ಮಹಿಳೆಯ ಚಿಕಿತ್ಸೆ ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ. ಈ ಘಟನೆಗೆ ಆಸ್ಪತ್ರೆ ಇನ್ನೂ ಪ್ರತಿಕ್ರಿಯಿಸಿಲ್ಲ ಮತ್ತು ಯಾವುದೇ ಕಾನೂನು ಕ್ರಮ ಅಥವಾ ಪರಿಹಾರ ಇರುತ್ತದೆಯೇ ಎಂಬುದು ಸಹ ತಿಳಿದಿಲ್ಲ.

ಇದನ್ನೂ ಓದಿ:ಪಾಕಿಸ್ತಾನದ ಮತ್ತೊಬ್ಬ ಟಿಕ್ ಟಾಕ್ ಸ್ಟಾರ್ ಖಾಸಗಿ ವಿಡಿಯೊ‌ ಲೀಕ್; ಇದು ಪ್ರಚಾರದ ಗಿಮಿಕಾ…ಎಂದ ನೆಟ್ಟಿಗರು!

ಆದರೆ ಈ ಘಟನೆಯ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಆಸ್ಪತ್ರೆಯ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ. ಇನ್ನು ಕೆಲವರು ಅವರು ಅನುಭವಿಸಿದ ವರ್ಷಗಳ ನೋವಿಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.