ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ (Islamic preacher Zakir Naik) ಅವರನ್ನು ಆಹ್ವಾನಿಸಿರುವುದಕ್ಕೆ ಪಾಕಿಸ್ತಾನಿಗಳು (pakistan) ಸರ್ಕಾರವನ್ನು ಟೀಕಿಸಿದ್ದಾರೆ. ಇನ್ನು ಮುಂದೆ ಇಂತಹ ಅನಕ್ಷರಸ್ಥರನ್ನು ಆಹ್ವಾನಿಸಬೇಡಿ ಎಂದು ಹೇಳಿ ಝಾಕಿರ್ ನಾಯ್ಕ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಟ್ರೋಲ್ (Viral News) ಮಾಡಿದ್ದಾರೆ.
ಪಾಕಿಸ್ತಾನ ಪ್ರವಾಸದಲ್ಲಿರುವ ಝಾಕಿರ್ ನಾಯ್ಕ್ ಅವರು ದೇಶಾದ್ಯಂತ ವಿವಿಧ ನಗರಗಳಲ್ಲಿ ಮಾಡಿರುವ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಟೀಕೆಯನ್ನು ಮಾಡಿದ್ದಾರೆ. ಮದುವೆಯಾಗಲು ಬಯಸುವ ಒಂಟಿ ಮಹಿಳೆಯರಿಗೆ ಝಾಕಿರ್ ನಾಯ್ಕ್ ನೀಡಿರುವ ಸಲಹೆ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಬಳಕೆದಾರರು ಪರಾರಿಯಾಗಿರುವ ಬೋಧಕನನ್ನು ಯಾರು ದೇಶಕ್ಕೆ ಆಹ್ವಾನಿಸಿದರು. ದಯವಿಟ್ಟು ಅಂತಹ ಅನಕ್ಷರಸ್ಥರನ್ನು ಮುಂದಿನ ಬಾರಿ ಆಹ್ವಾನಿಸಬೇಡಿ ಎಂದು ಹೇಳಿ ಅನೇಕರು ಟ್ರೋಲ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು, ಮೂಲತಃ, ಪಾಕಿಸ್ತಾನಿಗಳು ಅವನನ್ನು ಕರೆದಿದ್ದಾರೆ. ಹೀಗಾಗಿ ಭಾರತ ಮತ್ತು ಇತರ ದೇಶಗಳು ಅವನನ್ನು ನಿಷೇಧಿಸಿವೆ ಎಂದು ಅವನಿಗೆ ತಿಳಿದಿದೆ ಎಂದು ಹೇಳಿದ್ದಾರೆ.
ಮಲೇಷ್ಯಾದಲ್ಲಿ ನೆಲೆಸಿರುವ ನಾಯಕ್, ಕಳೆದ ವಾರ ಪಾಕಿಸ್ತಾನಕ್ಕೆ ಆಗಮಿಸಿದ್ದು, ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಝಾಕಿರ್ ವಿರುದ್ಧ ಆಕ್ರೋಶಗಳು ಹೆಚ್ಚಾಗಿದ್ದು, ಅವನು ಧಾರ್ಮಿಕವಾಗಿ ಉಗ್ರಗಾಮಿ. ಈ ವ್ಯಕ್ತಿ ನಮ್ಮ ದೇಶವನ್ನು ಯಾವಾಗ ತೊರೆಯುತ್ತಾನೆ ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು ಕಾಮೆಂಟ್ ಮಾಡಿ, ಮರುಮದುವೆಯಾಗಲು ಇಷ್ಟಪಡದ ಯಾವುದೇ ಮಹಿಳೆ ಒಂಟಿ, ವಿಚ್ಛೇದಿತ ಅಥವಾ ವಿಧವೆ ಸಾರ್ವಜನಿಕ ಸರಕು ಎಂದು ಅವನು ಅರ್ಥೈಸುತ್ತಾನೆಯೇ? ಯಾವುದೇ ಮಹಿಳೆ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗದೇ ಇರಲು ಬಯಸುತ್ತಾಳೆ ಎಂಬ ಕಲ್ಪನೆಯು ಈ ವ್ಯಕ್ತಿಯನ್ನು ಯೋಗ್ಯ ಪುರುಷ ಎಂದು ಪರಿಗಣಿಸುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಭಾರತದಲ್ಲಿ ಝಾಕಿರ್ ಅವರ ಹೆಚ್ಚುವರಿ ಸಾಮಗ್ರಿಗಳ ಶುಲ್ಕವನ್ನು ಮನ್ನಾ ಮಾಡಲು ಕೇಳಿ ಅವಮಾನಕ್ಕೆ ಒಳಗಾಗಿದ್ದರು. ಆದರೆ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ಝಾಕಿರ್ ಗೆ ಶೇ. 50ರಷ್ಟು ರಿಯಾಯಿತಿಯನ್ನು ನೀಡಿತು. ಆದರೆ ತಾನು ಅದನ್ನು ನಿರಾಕರಿಸಿರುವುದಾಗಿ ಹೇಳಿರುವ ಝಾಕಿರ್, ಇದು ಭಾರತ ಮತ್ತು ಮುಸ್ಲಿಂ-ಬಹುಸಂಖ್ಯಾತ ಪಾಕಿಸ್ತಾನದ ನಡುವಿನ ವ್ಯತ್ಯಾಸ. ಇಲ್ಲಿ ಹಿಂದೂ ಅಧಿಕಾರಿಯೂ ಸಹ ತನಗೆ ಲಗೇಜ್ ಉಚಿತವಾಗಿ ಸಾಗಿಸಲು ಅನುಮತಿಸುತ್ತಾರೆ ಎಂದು ಹೇಳಿರುವುದು ವೈರಲ್ ಆಗಿತ್ತು.
ಝಾಕಿರ್ ತಮ್ಮ ಭಾಷಣದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುವವರಿಗಿಂತ ಪಾಕಿಸ್ತಾನದಲ್ಲಿ ನೆಲೆಸಿರುವವರಿಗೆ ಸ್ವರ್ಗಕ್ಕೆ ಹೋಗಲು ಉತ್ತಮ ಅವಕಾಶವಿದೆ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಪಾಕಿಸ್ತಾನದಲ್ಲಿ ವಾಸಿಸುವವರೂ ಖಂಡಿಸಿದ್ದಾರೆ. ಇದನ್ನು ಮರು ಪೋಸ್ಟ್ ಮಾಡಿರುವ ಪಾಕಿಸ್ತಾನಿ ಪ್ರಜೆಯೊಬ್ಬರು, ಈ ವ್ಯಕ್ತಿ ಒಬ್ಬ ವಂಚಕ ಮಾತ್ರವಲ್ಲ, ನಾಚಿಕೆಗೇಡಿನವನು ಎಂದು ಹೇಳಿದ್ದಾರೆ.
ಪಾಕಿಸ್ತಾನವು ಝಾಕಿರ್ ಅವರನ್ನು ಗೌರವಿಸಿದ ರೀತಿ ಖಂಡನೀಯ. ಆದರೆ ಇದು ಆಶ್ಚರ್ಯಕರವಲ್ಲ ಎಂದು ಇತ್ತೀಚೆಗೆ ಭಾರತ ಹೇಳಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಪ್ರತಿಕ್ರಿಯಿಸಿ ಭಾರತದಿಂದ ಪಲಾಯನಗೈದ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸ್ವಾಗತ ಸಿಕ್ಕಿರುವುದರಲ್ಲಿ ನಮಗೆ ಆಶ್ಚರ್ಯವೇನಿಲ್ಲ. ಇದು ನಿರಾಶಾದಾಯಕ ಮತ್ತು ಖಂಡನೀಯ ಎಂದು ಹೇಳಿದ್ದರು.