ಲಾಸ್ ವೇಗಾಸ್: ಮನೆಯ ಮೇಲೆ ದಾಳಿ ಮಾಡಿದ ಮಹಿಳೆಯೊಂದಿಗೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಲಾಸ್ ವೇಗಾಸ್ ಪೊಲೀಸ್ ಅಧಿಕಾರಿ ಅವರ ಮನೆಯೊಳಗೆ ಗುಂಡಿಕ್ಕಿ ಕೊಂದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಮಹಿಳೆ ಹಲ್ಲೆ ಮಾಡಲು ಪ್ರಯತ್ನಿಸಿದ ನಂತರ ವ್ಯಕ್ತಿ ಸಹಾಯಕ್ಕಾಗಿ 911 ಗೆ ಕರೆ ಮಾಡಿದ್ದರು. ಆದರೆ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಬಿಟ್ಟು ಕರೆ ಮಾಡಿದ ವ್ಯಕ್ತಿಯನ್ನೇ ಗುಂಡಿಕ್ಕಿ ಕೊಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸುದ್ದಿ ವೈರಲ್(Viral News) ಆಗಿದೆ.
🚨| NEW: A BLACK MAN WHO CALLED 911 FOR HELP DURING A HOME INVASION WAS SHOT AND KILLED BY A WHITE COP
— i Expose Racists & Pedos (@SeeRacists) November 17, 2024
Brandon Durham, 43, called 911, stating he was inside his home with his 15-year-old daughter while two thugs tried to break in.
When police arrived, they heard screaming and… pic.twitter.com/8kwsViSxaR
ವೈರಲ್ ವಿಡಿಯೊದಲ್ಲಿ ಸೈರನ್‍ಗಳು ಕೂಗುವಾಗ ಪೊಲೀಸ್ ಅಧಿಕಾರಿಗಳು ಇಳಿದು ಮನೆಯ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ತಕ್ಷಣ, ಕೈಯಲ್ಲಿ ಬಂದೂಕು ಹಿಡಿದ ಪೊಲೀಸ್ ಅಧಿಕಾರಿ ಮುಂದೆ ಹೋಗುತ್ತಾ ನೋಡಿದಾಗ ಅಲ್ಲಿ ಒಬ್ಬ ವ್ಯಕ್ತಿಯು ಕೋಣೆಯ ಬಾಗಿಲಲ್ಲಿ ಚಾಕು ಹಿಡಿದು ಮಹಿಳೆಯೊಂದಿಗೆ ಹೋರಾಡುವುದನ್ನು ನೋಡಿದ್ದಾರೆ. ಅದನ್ನು ಕಂಡು ಭಯಭೀತರಾದ ಪೊಲೀಸ್ ಅಧಿಕಾರಿ ವ್ಯಕ್ತಿಗೆ ಗುಂಡು ಹಾರಿಸಿದ್ದಾರೆ. ಎನ್‌ಕೌಂಟರ್ ಮಾಡಿದ ನಂತರ, ಅವರು ಕೊಂದಿದ್ದು, ಸಹಾಯಕ್ಕಾಗಿ ಕರೆಮಾಡಿದ್ದವನನ್ನೇ ಎಂಬುದು ಪೊಲೀಸರಿಗೆ ಅರಿವಾಗಿದೆ.
ವರದಿ ಪ್ರಕಾರ, 43 ವರ್ಷದ ಬ್ರಾಂಡನ್ ಡರ್ಹಾಮ್ ತನ್ನ ಮನೆಯ ಹೊರಗೆ ಅನೇಕ ಜನರು ಗುಂಡು ಹಾರಿಸುತ್ತಿದ್ದಾರೆ ಎಂದು ಸಹಾಯಕ್ಕಾಗಿ 911 ಗೆ ಕರೆ ಮಾಡಿದ್ದಾರಂತೆ. ಬಾತ್‍ರೂಂನಲ್ಲಿ ಅಡಗಿ ಕುಳಿತು 911 ಕ್ಕೆ ಕರೆ ಮಾಡಿ ಸಹಾಯ ಕೇಳಿ ತಾನು ತನ್ನ 15 ವರ್ಷದ ಮಗಳೊಂದಿಗೆ ಮನೆಯಲ್ಲಿರುವುದಾಗಿ ತಿಳಿಸಿದ್ದಾರೆ. ಆದರೆ ಸ್ಥಳಕ್ಕೆ ಬಂದ ಪೊಲೀಸರು ಇಂತಹ ಅನಾಹುತ ಮಾಡಿದ್ದಾರೆ. ಮಾರಣಾಂತಿಕ ಆಯುಧದಿಂದ ಹಲ್ಲೆ, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಹಿಂಸಾಚಾರಕ್ಕಾಗಿ ಪೊಲೀಸರು ಅಲೆಜಾಂಡ್ರಾ ಬೌಡಿಕ್ಸ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ವಾರದಲ್ಲಿ 84 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬೇಕು ಎಂದ ಭಾರತೀಯ-ಅಮೆರಿಕನ್ ಸಿಇಒಗೆ ಜೀವ ಬೆದರಿಕೆ
ಡರ್ಹಾಮ್ ಅವರ ಮಗಳು ಇಸಾಬೆಲ್ಲಾ ತಂದೆಯ ಸಾವಿನ ನಂತರ ಮಾತನಾಡುತ್ತಾ, “ಮೆಟ್ರೋಪಾಲಿಟನ್ ಪೊಲೀಸರ ಬಗ್ಗೆ ಅಸಹ್ಯವಾಗುತ್ತಿದೆ” ಎಂದು ಬೇಸರದಿಂದ ಹೇಳಿದ್ದಾಳೆ. “ಮೆಟ್ರೋಪಾಲಿಟನ್ ಪೊಲೀಸರು ನನ್ನ ಜೀವನದುದ್ದಕ್ಕೂ ತಂದೆಯಿಲ್ಲದೆ ಬದುಕುವಂತೆ ಮಾಡಿದ್ದಾರೆ ” ಎಂದು ಆಕೆ ಹೇಳಿದ್ದಾಳೆ.