Thursday, 21st November 2024

Viral News: ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಕಿಡಿಗೇಡಿ ಮೇಲೆ ಏಕಾಏಕಿ ಕೋತಿಗಳ ಅಟ್ಯಾಕ್‌; 6 ವರ್ಷದ ಬಾಲಕಿ ಬಚಾವ್‌

viral News

ಲಕ್ನೋ: ಕೆಲವೊಮ್ಮೆ ನಾವು ಸಂಕಷ್ಟದಲ್ಲಿ ಸಿಲುಕಿದಾಗ ದೇವರು ಯಾವ ರೂಪದಲ್ಲಾದರೂ ಬಂದು ಸಹಾಯ ಮಾಡುತ್ತಾನೆ ಅಂತಾ ನಮ್ಮ ಹಿರಿಯರ ಮಾತಿದೆ. ವಿಶೇಷ ಎಂಬಂತೆ ಮೂಕ ಪ್ರಾಣಿಗಳೂ ಅದೆಷ್ಟೋ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಬಂದಿರುವ ಅಥವಾ ಅಪಾಯದಿಂದ ಕಾಪಾಡಿರುವ ಉದಾಹರಣೆಗಳಿವೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿದೆ. ಬಾಲಕಿ ಮೇಲೆ ಅತ್ಯಾಚಾರ(Physical Abuse) ನಡೆಯುತ್ತಿದ್ದ ಯತ್ನವನ್ನು ಕೋತಿಗಳು ಬಂದು ತಪ್ಪಿಸಿರುವ ಘಟನೆ(Viral News)ಯೊಂದು ಉತ್ತರಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ.

ಏನಿದು ಘಟನೆ?

ಯುಕೆಜಿ ಓಡುತ್ತಿದ್ದ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಕಿಡಿಗೇಡಿಯೊಬ್ಬ ಯತ್ನಿಸುತ್ತಿದ್ದ. ಆ ಸಂದರ್ಭದಲ್ಲಿ ಕೋತಿಗಳ ಗುಂಪೊಂದು ಆ ವ್ಯಕ್ತಿಯ ಮೇಲೆ ದಾಳಿ ಮಾಡಿ, ಅತ್ಯಾಚಾರ ನಡೆಯುವುದನ್ನು ತಪ್ಪಿಸಿವೆ. ಕೂಡಲೇ ಬಾಲಕಿ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ಪೋಷಕರಿಗೆ ಈ ವಿಚಾರ ತಿಳಿಸಿದ್ದಾಳೆ. ಹಾಗೆನೇ ದೇವರಂತೆ ಬಂದು ಕೋತಿಗಳು ನನ್ನ ಪ್ರಾಣ ಉಳಿಸಿರುವುದಾಗಿ ಕೂಡಾ ಹೇಳಿದ್ದಾಳೆ.

ಸೆಪ್ಟೆಂಬರ್ 20ರಂದು ಬಾಗ್​ಪತ್​ನ ದೌಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಈ ಘಟನೆ ಸೆ.20 ರಂದು ನಡೆದಿದೆ. ಪರಾರಿಯಾಗಿದ್ದ ಆರೋಪಿ ವಿರುದ್ದ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆತನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

ಪೊಲೀಸರ ಪ್ರಕಾರ ಆರೋಪಿ ಬಾಲಕಿಯನ್ನು ಅಪಹರಿಸಿ, ಒಂದೆಡೆ ಕರೆದೊಯ್ದು ಆಕೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದರು. ಇದ್ದಕ್ಕಿದ್ದಂತೆ ಕೋತಿಗಳು ಸ್ಥಳಕ್ಕೆ ಬಂದಿದ್ದವು, ಆ ಕೋತಿಗಳನ್ನು ನೋಡಿ ಆರೋಪಿ ಪರಾರಿಯಾಗಿದ್ದಾನೆ. ಗ್ರಾಮದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ದೃಶ್ಯಾವಳಿಗಳಿಂದ ಆರೋಪಿ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

ಆಟ ಆಡ್ತಿದ್ದ ಮಗುವನ್ನು ಹೊತ್ತೊಯ್ದಿದ್ದ ಪಾಪಿ

ಇನ್ನು ಆರೋಪಿ ಬೇರೆ ಗ್ರಾಮದವನಾಗಿದ್ದು, ಮನೆಯ ಹೊರಗಡೆ ಆಟ ಆಡ್ತಿದ್ದಬಾಲಕಿಯನ್ನು ಕಿಡಿಗೇಡಿ ಎತ್ತಿಕೊಂಡು ಹೋಗಿದ್ದ. ಬಾಲಕಿಯ ಮನೆಯ ಹೊರಗೆ ಆಟವಾಡುತ್ತಿರುವುದನ್ನು ಗಮನಿಸಿದ ಆತ ತನ್ನೊಂದಿಗೆ ಬರುವಂತೆ ಮನವೊಲಿಸಿದ್ದ. ವಿರೋಧಿಸಿದರೆ ತನ್ನನ್ನು ಮತ್ತು ತನ್ನ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಗಿ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಇನ್ನು ಬಾಲಕಿಯ ಪೋಷಕರು ನೀಡಿದ ದೂರಿನಾಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಅಲ್ಲದೇ ಬಾಲಕಿಯನ್ನು ವೈದ್ಯಕೀಯ ತಪಾಸನೆಗೊಳಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ: PM Modi and US: ಅ‍ದ್ಭುತ ಪ್ರದರ್ಶನದ ಮೂಲಕ ಅಮೆರಿಕದಲ್ಲಿ ಮೋದಿ ಮನಗೆದ್ದ ಭಾರತೀಯ ಕಲಾವಿದರು; ವೈರಲ್‌ ವಿಡಿಯೊ ಇಲ್ಲಿದೆ