Thursday, 19th September 2024

Viral News: ಈರುಳ್ಳಿ ಸಣ್ಣದಿರಲಿ, ಆಲೂಗಡ್ಡೆಯಲ್ಲಿ ಕಣ್ಣಿರಲಿ, ಮೆಣಸು ಫ್ರೀ ಕೇಳಿ; ಐಎಫ್ಎ‌ಸ್‌ ಅಧಿಕಾರಿ ಪತ್ನಿಯ ತರಕಾರಿ ಚೀಟಿ ಫುಲ್ ವೈರಲ್‌!

Viral News

ಟೊಮೋಟೊ (tomato) ಸ್ವಲ್ಪ ಹಳದಿ ಮತ್ತು ಸ್ವಲ್ಪ ಕೆಂಪು ಬಣ್ಣದಲ್ಲಿರಬೇಕು, ಈರುಳ್ಳಿ (onion) ಸಣ್ಣದು ಮತ್ತು ರೌಂಡ್ ಆಕೃತಿಯಲ್ಲಿರಬೇಕು. ಮೆಂತೆ ಸೊಪ್ಪು (methi) ಎತ್ತರ, ಗಿಡ್ಡವಾಗಿರುವ ಹಸಿರು ಸೊಪ್ಪು. ಈ ರೀತಿಯ ಮನೆ ಸಾಮಗ್ರಿಯ ಚೀಟಿ ಬರಿದಿದ್ದು ಮಾಜಿ ಐಎಫ್‌ ಅಧಿಕಾರಿಯೊಬ್ಬರ ಪತ್ನಿ. ಹೀಗಾಗಿ ಈ ಚೀಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತೀಯ ವಿದೇಶಾಂಗ ಸೇವೆ ನಿವೃತ್ತ ಅಧಿಕಾರಿ ಮೋಹನ್ ಪರ್ಗೈನ್ ಅವರು ತರಕಾರಿ ಶಾಪಿಂಗ್‌ಗೆಂದು ಮಾರುಕಟ್ಟೆಗೆ ಹೋಗುವಾಗ ಪತ್ನಿ ನೀಡಿದ ಸಲಹೆ, ಸೂಚನೆಯ ಚೀಟಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಇತರರು ತರಕಾರಿಗಳನ್ನು ಖರೀದಿಸಲು ಮಾರ್ಗದರ್ಶಿಯಾಗಿ ಬಳಸಬಹುದು ಎಂದೂ ಹೇಳಿದ್ದಾರೆ.

ಪರ್ಗೈನ್ ಅವರ ಪತ್ನಿ 1.5 ಕೆ.ಜಿ ಟೊಮೋಟೊಗಳನ್ನು ತರಲು ಹೇಳಿದ್ದಾರೆ. ಅದಕ್ಕಾಗಿ ನಿಯಮ ತಿಳಿಸಿದ್ದಾರೆ. ಟೊಮೋಟೊ ಸ್ವಲ್ಪ ಹಳದಿ ಮತ್ತು ಕೆಂಪು ಬಣ್ಣದಲ್ಲಿರಬೇಕು. ಟೊಮೋಟೊ ರಂಧ್ರಗಳನ್ನು ಹೊಂದಿರಬಾರದು ಎಂದು ಸೂಚಿದ್ದಾರೆ. ಹೀಗೆ ಪ್ರತಿಯೊಂದು ತರಕಾರಿಗೂ ಅವರು ಸೂಚನೆಯನ್ನು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಆಲೂಗಡ್ಡೆ, ಈರುಳ್ಳಿ, ಮೆಂತೆ ಸೊಪ್ಪು, ಬೆಂಡೆಗೂ ಸೂಚನೆಗಳನ್ನು ನೀಡಿದ್ದಾರೆ. ಯಾವುದನ್ನೂ ಎಷ್ಟು, ಹೇಗೆ ಖರೀದಿ ಮಾಡಬೇಕು ಎಂದು ತಿಳಿಸಿದ್ದಾರೆ. ಕೆಲವೊಂದರ ಚಿತ್ರವನ್ನೂ ಪಕ್ಕದಲ್ಲಿ ಬರೆದಿದ್ದಾರೆ.

ಹಾಲು, ಮೊಸರನ್ನು ಹಲ್ದಿರಾಮ್‌ನಿಂದ ತರಬೇಕು, ಬೇರೆಯದ್ದು ಬೇಡ, ಕಾಯಿ ಮೆಣಸನ್ನು ಉಚಿತವಾಗಿ ಅಂಗಡಿಯವನಲ್ಲಿ ಕೇಳಲು ಹೇಳಿದ್ದಾರೆ. ಕೊನೆಯಲ್ಲಿ ಈ ಎಲ್ಲವನ್ನೂ ಹಾರ್ಡ್‌ವೇರ್ ಅಂಗಡಿಯ ಹೊರಗೆ ಇರುವ ತರಕಾರಿಯವನ ಬಳಿ ಖರೀದಿ ಮಾಡಿ ಎಂದು ಹೇಳಿದ್ದಾರೆ.

2017ರಲ್ಲೂ ಇಂತಹ ಒಂದು ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಒಟ್ಟಿನಲ್ಲಿ ಈ ದಿನಸಿ ಪಟ್ಟಿ ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ.

ವೈರಲ್ ಆಗಿರುವ ಪೋಸ್ಟ್ ಅನ್ನು ಈಗಾಗಲೇ 25,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರೆ. ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬರು, ಇದು ತುಂಬಾ ಸ್ಪಷ್ಟವಾಗಿದೆ, ನೀವು ಸರಿಯಾಗಿ ಖರೀದಿ ಮಾಡಿದ್ದೀರಿ ಎಂದು ನಂಬುತ್ತೇನೆ ಎಂದು ಹೇಳಿದ್ದರೆ, ಇನ್ನೊಬ್ಬರು ತರಕಾರಿ ಮಾರುಕಟ್ಟೆ ಹೊಸದಾಗಿ ಹೋಗುವವರಿಗೆ ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇನ್ನೊಬ್ಬರು, ಇದು ಮಹಾನ್ ವಿದ್ವಾಂಸರು ಬರೆದ ಧಾರ್ಮಿಕ ಪುಸ್ತಕದಂತೆ ಕಾಣುತ್ತದೆ. ಏನಾದರೂ ತಪ್ಪಾದರೆ ಭಯವಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಮೆಣಸು ಉಚಿತವಾಗಿ ಕೇಳಿ.. .ವಾವ್ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

Manu Bhaker: ನೀರಜ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಮನು ಭಾಕರ್‌; ಪ್ರೇಮಾಂಕುರ ಖಚಿತ ಎಂದ ನೆಟ್ಟಿಗರು

ಮತ್ತೊಬ್ಬರು, ಅದ್ಭುತವಾಗಿದೆ ಹ್ಯಾಟ್ಸ್ ಆಫ್. ತರಕಾರಿ ಮತ್ತು ಹಣ್ಣುಗಳಿಗೆ ಪೂರ್ಣ ಮಾರ್ಗದರ್ಶಿಯಾಗಿದೆ. ಆದರೆ ಇದು ಪತಿಗೆ ಅಪಾಯ. ಯಾಕೆಂದರೆ ಯಾವುದೇ ದೋಷಕ್ಕೆ ಇಲ್ಲಿ ಆಸ್ಪದವಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *