Sunday, 24th November 2024

Viral News: 250 ಗ್ರಾಂ. ಆಲೂಗಡ್ಡೆ ಕಳುವಾಗಿದೆ, ಹುಡುಕಿ ಕೊಡಿ… ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ಕರೆ ಮಾಡಿದ ಭೂಪ!

ಲಖನೌ: ದೀಪಾವಳಿಯ (Deepavali) ಹಿಂದಿನ ದಿನ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ (Drunk man) ಪೊಲೀಸ್ ಠಾಣೆಗೆ ಕರೆ ಮಾಡಿ ಸಿಪ್ಪೆ ಸುಲಿದ ಆಲೂಗಡ್ಡೆ ಕಳವಾಗಿದ್ದು (potato theft), ಅದನ್ನು ಹುಡುಕಿಕೊಡುವಂತೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ (Uttarpradesh) ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral News) ಆಗಿದೆ.

ದೀಪಾವಳಿಯ ಹಿಂದಿನ ದಿನ ಪೊಲೀಸ್ ಠಾಣೆಗೆ ಕರೆ ಮಾಡಿದ ವಿಜಯ್ ವರ್ಮಾ ಎಂಬಾತ ತನ್ನ ಮನೆಯಲ್ಲಿ ಸಿಪ್ಪೆ ಸುಲಿದಿಟ್ಟಿರುವ ಆಲೂಗಡ್ಡೆ ಕಾಣೆಯಾಗಿದೆ ಎಂದು ದೂರು ನೀಡಿದ್ದಾನೆ. ಇದನ್ನು ಸ್ವೀಕರಿಸಿದ ಪೊಲೀಸರು ವಿಚಾರಣೆಗಾಗಿ ಆತನ ಮನೆಗೆ ಆಗಮಿಸಿದಾಗ ಆತ ಕುಡಿದ ಮತ್ತಿನಲ್ಲಿರುವುದು ತಿಳಿದು ಬಂದಿದೆ. ಆದರೂ ವಿಚಾರಣೆ ನಡೆಸಿದಾಗ ವಿಜಯ್ ಮದ್ಯದ ಅಮಲಿನಲ್ಲಿ ಕಳ್ಳತನದ ಬಗ್ಗೆ ದೂರು ನೀಡಿರುವುದು ಸ್ಪಷ್ಟವಾಗಿದೆ. ಆತನ ಮನೆಯಿಂದ ಸುಮಾರು 250 ಗ್ರಾಂ ಸಿಪ್ಪೆ ಸುಲಿದ ಆಲೂಗಡ್ಡೆ ಕಳವಾಗಿತ್ತು.

ಪೊಲೀಸರು ಆತನನ್ನು ಪ್ರಶ್ನಿಸುತ್ತಿದ್ದಂತೆ ಕಾಣೆಯಾಗಿರುವ ಆಲೂಗಡ್ಡೆ ಹುಡುಕಿಕೊಡುವಂತೆ ಒತ್ತಾಯಿಸಿದ್ದಾನೆ. ಈ ಪ್ರಕರಣದ ಕುರಿತು ತನಿಖೆ ನಡೆಸಲೇಬೇಕು ಎಂದು ವಿಜಯ್ ಒತ್ತಾಯಿಸಿದ್ದಾನೆ. ಈ ಕುರಿತು ಪೊಲೀಸರು ಹೇಳಿಕೆ ಪಡೆಯುತ್ತಿರುವುದು ಯಾರೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದು ಭಾರಿ ವೈರಲ್ ಆಗಿದೆ.

ವರ್ಮಾ ಪೊಲೀಸರೊಂದಿಗೆ ಮಾತನಾಡುವಾಗ ಕುಡಿದಿರುವುದನ್ನು ಸಮರ್ಥಿಸಿಕೊಂಡಿದ್ದಾನೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಮತ್ತು ಕೆಲವು ದಿನ ಸಂಜೆ ಮದ್ಯ ಸೇವಿಸುತ್ತೇವೆ. ಆದರೆ ಇಲ್ಲಿ ಪ್ರಶ್ನೆ ಮದ್ಯದ ಬಗ್ಗೆ ಅಲ್ಲ. ಆಲೂಗಡ್ಡೆ ಬಗ್ಗೆ. ಅವುಗಳನ್ನು ಹುಡುಕಿಕೊಡಿ ಎಂದು ಹೇಳಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಬಳಕೆದಾರರು ಕಾಮೆಂಟ್ ಮಾಡಿ ಜೋರಾಗಿ ನಗುವ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ.

Virat Kohli Dance: ಅಭಿಮಾನಿಗಳ ಹಾಡಿಗೆ ಮಸ್ತ್ ಸ್ಟೆಪ್ಸ್‌ ಹಾಕಿದ ಕೊಹ್ಲಿ; ವಿಡಿಯೊ ವೈರಲ್