Saturday, 23rd November 2024

Viral News: ಜರ್ಮನ್ ಫ್ಲೀ ಮಾರ್ಕೆಟ್‍ನಲ್ಲಿ ಸಿಕ್ತು ದೇವನಾಗರಿ ಲಿಪಿಯ ಪ್ರಾಚೀನ ‘ಪಂಚಾಂಗ’; ಇದರ ವಿಶೇಷತೆ ಏನ್‌ ಗೊತ್ತಾ? ನೆಟ್ಟಿಗರು ಹೇಳಿದ್ದೇನು?

Viral News

ಬರ್ಲಿನ್‌: ಬಹಳ ಪ್ರಾಚೀನವಾದ ವಸ್ತುಗಳನ್ನು ನೋಡಲು ಹೆಚ್ಚಿನವರಿಗೆ ಕುತೂಹಲವಿರುತ್ತದೆ. ಇದೀಗ ಅಂತಹದೊಂದು ಪ್ರಾಚೀನ ವಸ್ತುವೊಂದು ಜರ್ಮನಿಯ ಹ್ಯಾಂಬರ್ಗ್‌ನ  ಫ್ಲೀ ಮಾರ್ಕೆಟ್‍ನಲ್ಲಿ ಕಂಡುಬಂದಿದೆ. ಅದನ್ನು ಬಳಕೆದಾರರೊಬ್ಬರು  ರೆಡ್ಡಿಟ್‍ನಲ್ಲಿ ಪೋಸ್ಟ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ಬಳಕೆದಾರರೊಬ್ಬರು  ರೆಡ್ಡಿಟ್‍ನಲ್ಲಿ “ಜರ್ಮನಿಯ ಹ್ಯಾಂಬರ್ಗ್‍ನ ಫ್ಲೀ ಮಾರ್ಕೆಟ್‍ನಲ್ಲಿ ಇದನ್ನು ನೋಡಿದ್ದೇವೆ ಏನು ಎಂದು ನೀವು ನನಗೆ ಹೇಳಬಲ್ಲಿರಾ?” ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ನೆಟ್ಟಿಗರು ಅವರು  ಹಂಚಿಕೊಳ್ಳಲಾದ ಚಿತ್ರಗಳು ದೇವನಾಗರಿ ಲಿಪಿಯಲ್ಲಿ ಬರೆಯಲಾದ ಪ್ರಾಚೀನ ದಾಖಲೆಯಾಗಿದೆ ಎಂಬುದಾಗಿ ಪ್ರತಿಕ್ರಯಿಸಿದ್ದಾರೆ.

Found this on a flea market in Hamburg, Germany. Can you tell me what it is?
byu/AcceptableTea8746 inindia

ಇದು ವಿಂಟೇಜ್ ಸೆಪಿಯಾ-ಬಣ್ಣದ ಕಾಗದದ ಮೇಲೆ ಕೆತ್ತಲಾದ ಸಂಸ್ಕೃತ ಲಿಪಿಯಂತೆ ತೋರುತ್ತದೆ. ಇದು ಪಂಚಾಂಗವನ್ನು ಹೋಲುತ್ತದೆ. ಇದು ಪ್ರಮುಖ ಸಮಯ ಮತ್ತು ಘಟನೆಗಳನ್ನು ಗಮನಿಸಲು ಉಲ್ಲೇಖಿಸಲಾದ ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ಆಗಿದೆ.

ಈ ರೆಡ್ಡಿಟ್ ಪೋಸ್ಟ್ ಎಲ್ಲರ ಗಮನ ಸೆಳೆದಿದೆ ಹಾಗಾಗಿ ಇದು  ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ತಿಂಗಳ ಆರಂಭದಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್  ಈಗಾಗಲೇ ನೂರಾರು ಕಾಮೆಂಟ್‍ಗಳನ್ನು ಪಡೆದಿದೆ. “ಇದು ಭಾರತದ ಉತ್ತರ ಪ್ರದೇಶ ರಾಜ್ಯದ ಬನಾರಸ್ ನಗರದಲ್ಲಿ (ಪ್ರಸ್ತುತ ವಾರಣಾಸಿ ಎಂದು ಕರೆಯಲ್ಪಡುತ್ತದೆ) ಮುದ್ರಿಸಲಾದ ಅತ್ಯಂತ ಹಳೆಯ ಪಂಚಾಂಗವಾಗಿದೆ. ಪಂಚಾಂಗವು ಹಿಂದೂ ಕ್ಯಾಲೆಂಡರ್ ಮತ್ತು ಪಂಚಾಂಗವಾಗಿದೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಲಾಲ್‌ ಬಾಗ್‌ ಅನ್ನು ಹಾಡಿಹೊಗಳಿದ ಡೊನಾಲ್ಡ್‌ ಟ್ರಂಪ್‌; ಹಾಸ್ಯನಟನ ಮಿಮಿಕ್ರಿಗೆ ಭೇಷ್‌ ಎಂದ ನೆಟ್ಟಿಗರು!

ಇದು ಪಂಚಾಂಗ ಎಂದು ಕರೆಯಲ್ಪಡುವ ಹಿಂದೂ ಕ್ಯಾಲೆಂಡರ್ ಆಗಿದ್ದು, ಇದನ್ನು ಭಾರ್ಗವ ಪ್ರೆಸ್ ಮುದ್ರಿಸುತ್ತದೆ. ಈ ಮುದ್ರಣಾಲಯವು ಪಂಡಿತ್ ನವಲ್ ಕಿಶೋರ್ ಭಾರ್ಗವ ಅವರ ಒಡೆತನದಲ್ಲಿತ್ತು ಮತ್ತು ಅವರು ಅದನ್ನು ನಿರ್ವಹಿಸಿದ್ದರು.  ಅವರು ಆ ಕಾಲದ ಅತಿದೊಡ್ಡ ಪ್ರಕಾಶಕರಲ್ಲಿ ಒಬ್ಬರಾಗಿದ್ದರು” ಎಂದು ಇನ್ನೊಬ್ಬರು ಬರೆದಿದ್ದಾರೆ.  “ಈ ದಾಖಲೆಯು ಅಂದಾಜಿನ ಪ್ರಕಾರ ಕನಿಷ್ಠ 150 ರಿಂದ 180 ವರ್ಷಗಳಷ್ಟು ಹಳೆಯದಾಗಿರಬಹುದು. ಏಕೆಂದರೆ ಅವರು ನಮ್ಮ ಪೂರ್ವಜರು, ಸುಮಾರು ಐದು ತಲೆಮಾರುಗಳ ಹಿಂದಿನ ನಮ್ಮ ಸಂಬಂಧಿ. ಅವರ ವಂಶಸ್ಥರು ಇನ್ನೂ ಲಕ್ನೋದಲ್ಲಿ ವಾಸಿಸುತ್ತಿದ್ದಾರೆ. ಎಂದು ಅವರು ಹೇಳಿದ್ದಾರೆ