ಅಮೆರಿಕ: ಜೀವನದಲ್ಲಿ ಎರಡನೇ ಅವಕಾಶ ಸಿಗುವುದು ತೀರಾ ಕಡಿಮೆ. ಅಂತಹ ಅವಕಾಶ ಸಿಕ್ಕರೆ ಮಾತ್ರ ಅದು ಬದುಕಿನ ರೀತಿಯನ್ನೇ ಸಂಪೂರ್ಣವಾಗಿ ಬದಲಿಸಿ ಬಿಡುತ್ತದೆ. ಅದಕ್ಕೆ ಉತ್ತರ ಉದಾಹರಣೆಯೇ ಈ ವ್ಯಕ್ತಿ. ಬದುದು ಸಾಕೆಂದು ಆತ್ಮಹತ್ಯೆ ಯತ್ನಿಸಿದ್ದಾತ ಪವಾಡ ರೀತಿಯಲ್ಲಿ ಬದುಕುಳಿದಿದ್ದು, ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಕಮ್ ಬ್ಯಾಕ್ ಮಾಡಿದ್ದಾನೆ. ಅಮೆರಿಕದ ಮಿಚಿಗನ್‌ನಲ್ಲಿನಲ್ಲಿ ಈ ಘಟನೆ ನಡೆದಿದ್ದು, ಡೆರೆಕ್ ಪ್ಲಾಫ್ (30) ಎಂಬಾತ ಆತ್ಮಹತ್ಯೆಗೆ ಯತ್ನಿಸಿ ಬಳಿಕ ವಿಕಾರಗೊಂಡಿದ್ದ ಮುಖವನ್ನು ಫೇಸ್ ಕಸಿ ಶಸ್ತ್ರ ಚಿಕಿತ್ಸೆ ಮೂಲಕ ಸರಿಮಾಡಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿದೆ.
ಏನಿದು ಘಟನೆ?
ಡೆರೆಕ್ ಪ್ಲಾಫ್ (30) ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ ಫೇಸ್ ಕಸಿ ಮಾಡಿಕೊಂಡ ವ್ಯಕ್ತಿ. ಜೆರ್ರಿ ಮತ್ತು ಲಿಸಾ ಪ್ಲಾಫ್ ಅವರ ಮಗನಾದ ಪ್ಲಾಫ್ ಮಾರ್ಚ್ 5, 2014 ರ ರಾತ್ರಿ, ಮನೆಯಲ್ಲಿದ್ದಾಗ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರಂತೆ. ಅದೃಷ್ಟವಶಾತ್ ಅವರ ಪೋಷಕರು ಅವರನ್ನು ಕಂಡು ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಬದುಕಿಸಿದ್ದಾರೆ. ಆದರೆ ಈ ಘಟನೆಯಲ್ಲಿ ಅವರ ಮುಖ ವಿಕಾರಗೊಂಡಿದೆ. ಹಾಗಾಗಿ ವೈದ್ಯರು ಫೇಸ್ ಕಸಿ ಮಾಡಲು ತಿಳಿಸಿದ್ದಾರೆ.
ಅದರಂತೆ ಈ ವರ್ಷದ ಆರಂಭದಲ್ಲಿ ರೋಚೆಸ್ಟರ್‌ನ ಮಾಯೋ ಕ್ಲಿನಿಕ್‍ನಲ್ಲಿ 50 ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಫೇಸ್ ಕಸಿ ಶಸ್ತ್ರಚಿಕಿತ್ಸೆಗೆ ಪ್ಲಾಫ್ ಒಳಗಾಗಿದ್ದರು ಮತ್ತು ಅದಕ್ಕಾಗಿ 80 ಆರೋಗ್ಯ ತಜ್ಞರನ್ನು ನೇಮಿಸಿಕೊಳ್ಳಲಾಗಿತ್ತು. ಕಳೆದ 20 ವರ್ಷಗಳಲ್ಲಿ, ವಿಶ್ವಾದ್ಯಂತ ಕೇವಲ 50 ಕ್ಕೂ ಹೆಚ್ಚು ಮುಖ ಕಸಿಗಳನ್ನು ಮಾಡಲಾಗಿದೆ. ಅದರಲ್ಲಿ ಪ್ಲಾಫ್ ಅವರ ಶಸ್ತ್ರಚಿಕಿತ್ಸೆ ಅಪರೂಪವಾಗಿ ಯಶಸ್ವಿಯಾಗಿದೆ. ಮಾಯೋ ಕ್ಲಿನಿಕ್‍ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು, ಪ್ಲಾಫ್ 10 ವರ್ಷಗಳಲ್ಲಿ 58 ಫೇಸ್ ಕಸಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರಂತೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಅವರಿಗೆ ಮೂಗು ಇಲ್ಲದ ಕಾರಣ, ಪ್ಲಾಫ್ ಕನ್ನಡಕವನ್ನು ಧರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಮಾಯೋ ಕ್ಲಿನಿಕ್ ಈ ಕೆಲಸವನ್ನು ಯಶಸ್ವಿಯಾಗಿಸಿದೆ ಎನ್ನಲಾಗಿದೆ. ಹಾಗಾಗಿ ಪ್ಲಾಫ್ ತನಗೆ ಈ ಎರಡನೇ ಅವಕಾಶವನ್ನು ನೀಡಿದ ತನ್ನ ದಾನಿ, ಅವರ ಕುಟುಂಬ ಮತ್ತು ಮಾಯೋ ಕ್ಲಿನಿಕ್‍ನಲ್ಲಿ ತನ್ನ ಆರೈಕೆ ಮಾಡಿದ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೊ ನೋಡಿ
ವೈದ್ಯರು ತಿಳಿಸಿದ ಪ್ರಕಾರ, ಪ್ಲಾಫ್ ಅವರ ಮುಖದ ಸುಮಾರು 85 ಪ್ರತಿಶತವನ್ನು ಪುನರಚಿಸಲಾಗಿದೆ ಮತ್ತು ದಾನಿ ಅಂಗಾಂಶದಿಂದ ಬದಲಾಯಿಸಲಾಗಿದೆ. ಮೇಲಿನ ಮತ್ತು ಕೆಳಗಿನ ಕಣ್ಣುರೆಪ್ಪೆಗಳು, ಮೇಲಿನ ಮತ್ತು ಕೆಳಗಿನ ದವಡೆಗಳು, ಹಲ್ಲುಗಳು, ಮೂಗು, ಕೆನ್ನೆ ರಚನೆ ಮತ್ತು ಕುತ್ತಿಗೆಯ ಚರ್ಮವು ಪುನರ್‌ರಚಿಸಲಾಗಿದೆ.