Thursday, 12th December 2024

Viral News: ಈ ವಿವಾಹ ಆಮಂತ್ರಣ ಪತ್ರಿಕೆ ನೋಡಿದ್ರೆ ಹೊಟ್ಟೆ ಹುಣ್ಣಾಗುವ ಹಾಗೇ ನಗುತ್ತೀರಿ; ಅಂಥದ್ದೇನಿದೆ ಇದರಲ್ಲಿ?

Viral News

ವಿವಾಹದಲ್ಲಿ ಅನೇಕ ರೀತಿಯ ಶಾಸ್ತ್ರ ಸಂಪ್ರದಾಯಗಳಿರುತ್ತದೆ. ಇಲ್ಲೊಂದು ಕುಟುಂಬ ಭಾರತೀಯ ವಿವಾಹಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ನಿಯಮಗಳನ್ನು ವಿಶಿಷ್ಟ ಮತ್ತು ಹಾಸ್ಯಮಯವಾಗಿ ತೆಗೆದುಕೊಂಡಿದೆ. ಹಾಗಾಗಿ ಆ ವಿವಾಹ ಆಮಂತ್ರಣವು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದ್ದು, ಎಲ್ಲರ ಗಮನ ಸೆಳೆದಿದೆ.

ಅತಿಥಿಗಳು ಕಡ್ಡಾಯವಾಗಿ ಆಹಾರ ಸೇವಿಸಬೇಕು ಮತ್ತು ವಧು ಮತ್ತು ವರನ ಶೈಕ್ಷಣಿಕ ಅಥವಾ ವೃತ್ತಿಪರ ಸಾಧನೆಗಳಂತಹ ಸಾಮಾನ್ಯ ವಿವರಣೆಗಳನ್ನು ಕಾರ್ಡ್‍ನಲ್ಲಿ  ಹಾಸ್ಯಮಯವಾಗಿ ತೋರಿಸಲಾಗಿದೆ.   ವಧುವನ್ನು “ಶರ್ಮಾ ಜಿ ಕಿ ಲಡ್ಕಿ” (ಶರ್ಮಾ ಜಿ ಅವರ ಮಗಳು) ಎಂದು ಪರಿಚಯಿಸಿದೆ ಮತ್ತು ವರನನ್ನು “ಗೋಪಾಲ್ ಜಿ ಕಾ ಲಡ್ಕಾ” (ಗೋಪಾಲ್ ಜಿ ಅವರ ಮಗ) ಎಂದು ಪರಿಚಯಿಸಿದೆ, ಅವರು B.Tech ಪೂರ್ಣಗೊಳಿಸಿದ್ದಾರೆ, ಆದರೆ ಈಗ ಅಂಗಡಿಯೊಂದನ್ನು ನಿರ್ವಹಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಮದುವೆಯ ದಿನಾಂಕವನ್ನು ಮೂವರು ಪುರೋಹಿತರು ಆಯ್ಕೆ ಮಾಡಿದ್ದರಿಂದ “ಪವಿತ್ರ ದಿನ” ಎಂದು ಹಾಸ್ಯಮಯವಾಗಿ ವಿವರಿಸಲಾಗಿದೆ.

ಆರತಕ್ಷತೆಯ ಬಗ್ಗೆ ಕೂಡ ಕಾರ್ಡ್‍ನಲ್ಲಿ  ತಮಾಷೆಯಾಗಿ ಉಲ್ಲೇಖಿಸಲಾಗಿದೆ.  ಇದರಲ್ಲಿ ಅತಿಥಿಗಳಿಗೆ ತಮ್ಮ ಮಕ್ಕಳನ್ನು ನಿಯಂತ್ರಿಸಲು ಸಲಹೆ ನೀಡಲಾಗಿದೆ ಮತ್ತು  ದುಬಾರಿ ವೇದಿಕೆಯು “ಅವರ ಆಟದ ಮೈದಾನವಲ್ಲ” ಎಂದು ಹಾಸ್ಯಮಯವಾಗಿ ಬರೆಯಲಾಗಿದೆ.  ಆರತಕ್ಷತೆಯ ಸಮಯದ ಬಗ್ಗೆಯೂ ತಮಾಷೆ ಮಾಡಲಾಗಿದೆ. ದಂಪತಿಗಳು ತಾವು ತಡವಾಗಿ ಬರುತ್ತೇವೆ ಎಂದು ಬರೆದಿದ್ದಾರೆ.

ಆಮಂತ್ರಣದ ಮೂರನೇ ಸ್ಲೈಡ್ ಮದುವೆಯ ಅತಿಥಿಗಳನ್ನು ಮತ್ತು ಅವರ ವಿಶಿಷ್ಟ ಪಾತ್ರಗಳನ್ನು ಗೇಲಿ ಮಾಡುವ ಮೂಲಕ ಹಾಸ್ಯಮಯವಾಗಿ ಬರೆಯಲಾಗಿದೆ.  ಆಎಸ್‍ವಿಪಿ ವಿಭಾಗದಲ್ಲಿ “ರಿಶ್ತೇದಾರ್ ಸಾರೆ ವಹಿ ಪಕಾವು” (ಎಲ್ಲರೂ ಅದೇ ನೀರಸ ಸಂಬಂಧಿಕರು) ಎಂದು ಬರೆಯಲಾಗಿದೆ.  ಅದರಲ್ಲಿ  ಕುಟುಂಬ ಸದಸ್ಯರನ್ನು ಪಟ್ಟಿ ಮಾಡಲಾಗಿದೆ. ಇದು “ಮಾಮಾ-ಮಾಮಿ” (ಅತ್ತೆ-ಮಾವ) ಅನ್ನು ಒಳಗೊಂಡಿದೆ. ಮತ್ತು  ಹಾಗೇ ಇಲ್ಲಿ ಅವರ ಹೆಸರುಗಳನ್ನು ಮೇಲ್ಭಾಗದಲ್ಲಿ ಏಕೆ ಇರಿಸಲಾಗಿದೆ ಎಂಬುದನ್ನು ವಿವರಿಸಿದ್ದಾರೆ. “ಬುವಾ-ಫುಫಾಜಿ” (ಸೋದರತ್ತೆ ಮತ್ತು ಚಿಕ್ಕಪ್ಪ) ಅವರನ್ನು “ಗಲಾಟೆ ತಜ್ಞರು” ಎಂದು ವಿವರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ವೈರಲ್‌ ಆಯ್ತು ನಿರಾಹುವಾ-ಅಮ್ರಪಾಲಿ ಸೂಪರ್‌ ಹಿಟ್‌ ಹಾಡು ‘ಜಡಾ ಲಗೆ ಬಡಾ ಕಾಡಾ’

ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, 1.94 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಕಾರ್ಡ್‍ನಲ್ಲಿ ಈ ರೀತಿ  ಹಾಸ್ಯಮಯವಾಗಿ ಬರೆದಿರುವುದನ್ನು ನೋಡಿ ನೆಟ್ಟಿಗರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.  ಅನೇಕ ನೆಟ್ಟಿಗರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಕಾಮೆಂಟ್ ಮಾಡಿದ್ದಾರೆ.