ಪುಣೆ: ಈಗೀಗ ನಡುರಾತ್ರಿ ಬಿಡಿ ಹಾಡಗಲೇ ರಸ್ತೆಯಲ್ಲಿ ನಡೆಯವುದು ಕಷ್ಟವಾಗಿದೆ. ಅದರಲ್ಲೂ ಹೆಂಗಸರು ವೃದ್ಧರು ರಸ್ತೆಯಲ್ಲಿ ಸಾಗಬೇಕಾದರೆ ಎಷ್ಟೇ ಎಚ್ಚರವಾಗಿದ್ದರೂ ಸಾಲಲ್ಲ. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಕೈಯಲ್ಲಿದ್ದ ವಸ್ತುಗಳನ್ನು ಎಗರಿಸಿ ಎಸ್ಕೇಪ್ ಆಗುವ ಕಿರಾತಕರು ಇದ್ದಾರೆ. ಇದೀಗ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ವಡಾ ಪಾವ್ ತಿನ್ನುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದ ವೃದ್ಧ ದಂಪತಿಯನ್ನು ಕಿರಾತಕರು ದೋಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ:https://x.com/pulse_pune/status/1829510460917641330
ಪುಣೆಯಲ್ಲಿ ಈ ಘಟನೆ ನಡೆದಿದ್ದು, ವಡಾಪಾವ್ ತಿನ್ನುತ್ತಾ ರಸ್ತೆ ಪಕ್ಕದಲ್ಲಿ ನಿಂತಿದ್ದ ವೃದ್ಧ ದಂಪತಿಯಿಂದ ದರೋಡೆಕೋರರು ಬರೋಬ್ಬರಿ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಗುರುವಾರ ಮಧ್ಯಾಹ್ನ ದಂಪತಿ ದ್ವಿಚಕ್ರ ವಾಹನದಲ್ಲಿ ಬ್ಯಾಂಕ್‌ನಿಂದ ಹಿಂದಿರುಗುತ್ತಿರುವಾಗ ರಸ್ತೆ ಬಡಿಯಲ್ಲಿ ವಡಾಪಾವ್ ಅಂಗಡಿ ಕಂಡು ಅಲ್ಲಿ ನಿಲ್ಲಿಸಿದ್ದಾರೆ. ದಂಪತಿಗಳು ಹೊಟೇಲ್‌ಗೆ ಪ್ರವೇಶಿಸುವ ಮೊದಲು ರಸ್ತೆಬದಿಯಲ್ಲಿ ತಮ್ಮ ಬಿಳಿ ಸ್ಕೂಟರ್ ಅನ್ನು ನಿಲ್ಲಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ವ್ಯಕ್ತಿ ವಡಾ ಪಾವ್ ಖರೀದಿಸಲು ಒಳಗೆ ಹೋದಾಗ, ಮಹಿಳೆ ಸ್ಕೂಟರ್ ಬಳಿ ಕಾಯುತ್ತಾಳೆ. ಬ್ಯಾಗ್‌ನಲ್ಲಿ ಬ್ಯಾಂಕ್ ದಾಖಲೆಗಳು ಮತ್ತು ಅವರ ಮೊಬೈಲ್ ಫೋನ್ ಕೂಡ ಇತ್ತು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.