Saturday, 14th December 2024

Viral Video: ವಿವಾಹಿತ ಮಹಿಳೆಯ ಮನೆಗೆ ಬಂದ ಪ್ರಿಯಕರನಿಗೆ ಕುಟುಂಬಸ್ಥರಿಂದ ಬಿತ್ತು ಗೂಸಾ!

Viral Video

ಅಮೇಥಿ: ಪ್ರೀತಿಗಾಗಿ ಜನ ಎಂತೆಂಥ ದುಸ್ಸಾಹಸಗಳನ್ನು ಮಾಡುತ್ತಾರೆ. ತಮ್ಮ ಪ್ರೇಮಿಯನ್ನು ನೋಡಲು ಎಂತಹ ಅಪಾಯವನ್ನೂ ಎದುರಿಸಲು ತಯಾರಾಗಿರುತ್ತಾರೆ ಎಂಬುದನ್ನು ನೀವು ಕೇಳಿರಬಹುದು. ಅಂಥದ್ದೇ ಒಂದು ಘಟನೆ ಅಮೇಥಿ ಜಿಲ್ಲೆಯಲ್ಲಿ ನಡೆದಿದೆ. ಯುವಕನೊಬ್ಬ ತನ್ನ ವಿವಾಹಿತ ಪ್ರೇಮಿಯ ಮನೆಗೆ ಭೇಟಿ ನೀಡಿದ್ದು, ಆತ ಬಂದಿರುವ ವಿಚಾರ ತಿಳಿದ ನಂತರ, ಆಕೆಯ ಕುಟುಂಬ ಸದಸ್ಯರು ಕೋಪಗೊಂಡು ಯುವಕನ ಮೇಲೆ ದೊಣ್ಣೆಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆದರೆ ಎರಡೂ ಕಡೆಯಿಂದ ಯಾವುದೇ ಔಪಚಾರಿಕ ದೂರು ಸ್ವೀಕರಿಸಲಾಗಿಲ್ಲ. ಹಾಗಾಗಿ ಆರೋಪಿಗಳ ವಿರುದ್ಧ ಇನ್ನೂ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮುನ್ಶಿಗಂಜ್ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು,  ಸೋಶಿಯಲ್ ಮೀಡಿಯಾದಲ್ಲಿ  ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಪ್ರೇಯಸಿಯ ಕುಟುಂಬಸ್ಥರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನರು ಅವನನ್ನು ಹೊಡೆಯುವುದನ್ನು ತಡೆಯಲು ಮಹಿಳೆ ಕೂಡ ಪ್ರಯತ್ನಿಸಿದ್ದಾಳೆ. ದಾಳಿಯ ನಂತರ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ.

ವರದಿ ಪ್ರಕಾರ, ಯುವಕ ಮಹಿಳೆಯೊಂದಿಗೆ ಬಹಳ ಸಮಯದಿಂದ ಅಕ್ರಮ ಸಂಬಂಧ ಹೊಂದಿದ್ದ. ಅವನು ಇದ್ದಕ್ಕಿದ್ದಂತೆ ಅವಳನ್ನು ಅವಳ ಮನೆಯಲ್ಲೇ ಭೇಟಿ ಮಾಡಲು ನಿರ್ಧರಿಸಿದ. ಇದು ತಿಳಿದಾಗ ಅವಳ ಕುಟುಂಬದವರು ಕೋಪಗೊಂಡಿದ್ದಾರೆ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದರೂ ಕೂಡ ಆಕೆಯನ್ನು ಸೇರಲು ಯುವಕ ಅವಳ ಮನೆಗೆ ಬಂದಿದ್ದ.

ಇದನ್ನೂ ಓದಿ:ಈ ಊರಿನ ಜನ ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ! ಏಕೆ ಈ ಸಂಪ್ರದಾಯ?

ಈ ಘಟನೆಯ ಬಗ್ಗೆ ಪೊಲೀಸರಿಗೆ ಇನ್ನೂ ಯಾವುದೇ ಔಪಚಾರಿಕ ದೂರು ಬಂದಿಲ್ಲ. ಆದರೆ, ಸಾರ್ವಜನಿಕ ಶಾಂತಿಗೆ ಭಂಗ ತರುವ ನೆಪದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.  ಅಮೇಥಿ ಪೊಲೀಸ್ ಕಚೇರಿಯ ಪ್ರಕಾರ, ಮುನ್ಶಿಗಂಜ್ ಪೊಲೀಸರಿಗೆ ಘಟನೆಯ ಬಗ್ಗೆ ತಿಳಿದಿದೆ, ಆದರೆ ಯಾವುದೇ ದೂರು ದಾಖಲಾಗಿಲ್ಲ. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಶಾಂತಿ ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.